ಮನೆ ರಾಜ್ಯ ನೇತ್ರಾವತಿ ನದಿ ತಟದಲ್ಲಿ ರಾಶಿ ರಾಶಿ ಆಧಾರ್‌ಕಾರ್ಡ್ ಪತ್ತೆ..!

ನೇತ್ರಾವತಿ ನದಿ ತಟದಲ್ಲಿ ರಾಶಿ ರಾಶಿ ಆಧಾರ್‌ಕಾರ್ಡ್ ಪತ್ತೆ..!

0

ಮಂಗಳೂರು : ಪುದು ಗ್ರಾಮದ ಫರಂಗಿಪೇಟೆಯ ನೇತ್ರಾವತಿ ನದಿ ತೀರದಲ್ಲಿ ರಾಶಿರಾಶಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಸಾವಿರಾರು ಆಧಾರ್ ಕಾರ್ಡ್‌ಗಳು ಬಿದ್ದಿರುವುದನ್ನ ಕಂಡ ಸಾರ್ವಜನಿಕರು ಶಾಕ್ ಆಗಿದ್ದು, ತಕ್ಷಣ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ್ದಾರೆ. ಈ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸ್ಥಳೀಯರು ಎಲ್ಲಾ ಆಧಾರ್ ಕಾರ್ಡ್‌ಗಳನ್ನು ಸಂಗ್ರಹಿಸಿದ್ದಾರೆ.

ಆಧಾರ್ ಕಾರ್ಡ್ ದುರುಪಯೋಗ ಅಥವಾ ನಿರ್ಲಕ್ಷ್ಯದ ಬಗ್ಗೆ ಸೂಕ್ತ ತನಿಖೆ ನಡೆಸಲು ಅಧಿಕಾರಿಗಳಿಗೆ ಕ್ಷೇತ್ರದ ಶಾಸಕರೂ ಆಗಿರುವ ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದ್ದಾರೆ. ಈ ಕೃತ್ಯದ ಹಿಂದೆ ಇರುವವರನ್ನ ತಕ್ಷಣ ಪತ್ತೆ ಹಚ್ಚಿನ ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.