ಮನೆ ರಾಜ್ಯ ಗ್ಯಾಸ್ ಟ್ರಬಲ್ – ಚನ್ನಪಟ್ಟಣದ ಮನೆಯಲ್ಲಿ ಸಿಲಿಂಡರ್ ಕಳ್ಳತನ

ಗ್ಯಾಸ್ ಟ್ರಬಲ್ – ಚನ್ನಪಟ್ಟಣದ ಮನೆಯಲ್ಲಿ ಸಿಲಿಂಡರ್ ಕಳ್ಳತನ

0

ರಾಮನಗರ : ಇಸ್ರೇಲ್-ಇರಾನ್ ಯುದ್ಧದ ಎಫೆಕ್ಟ್‌ನಿಂದಾಗಿ ಒಂದೆಡೆ ಗ್ಯಾಸ್ ಸಿಲಿಂಡರ್ ಅಭಾವ ಸೃಷ್ಟಿಯಾಗಿದ್ರೆ ಮತ್ತೊಂದೆಡೆ ಸಿಲಿಂಡರ್ ಕಳ್ಳರ ಹಾವಳಿ ಹೆಚ್ಚಾಗಿದೆ. ಚನ್ನಪಟ್ಟಣದ ಕನಕನಗರದ ಕೃಷ್ಣಪ್ಪ ಎಂಬುವವ ಮನೆಯಲ್ಲಿ ಸಿಲಿಂಡರ್ ಕಳ್ಳತನ ಮಾಡಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬಂದ ಖದೀಮ ಕಾಂಪೌಂಡ್ ಒಳಗೆ ಇದ್ದ ಸಿಲಿಂಡರ್ ಕದ್ದು ಎಸ್ಕೇಪ್ ಆಗಿದ್ದಾನೆ. ಫುಲ್ ಗ್ಯಾಸ್ ಇದ್ದ ಸಿಲಿಂಡರ್ ಅನ್ನು ಕಳ್ಳ ಹೊತ್ತೊಯ್ದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೊದಲೇ ಸಿಲಿಂಡರ್ ಪೂರೈಕೆ ವ್ಯತ್ಯಯದಿಂದ ಆತಂಕಗೊಂಡಿದ್ದ ನಿವಾಸಿಗಳಿಗೆ ಇದೀಗ ಸಿಲಿಂಡರ್ ಕಳ್ಳರ ಹಾವಳಿ ಹೊಸ ತಲೆನೋವಾಗಿದೆ. ಈ ಸಂಬಂಧ ಚನ್ನಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.