ಬೆಂಗಳೂರು : ಇರಾನ್-ಇಸ್ರೇಲ್ ಕದನ ಹದಿನಾಲ್ಕು ದಿನಗಳು ಕಳೆದ್ರೂ ಕೊನೆಗಾಣುತ್ತಿಲ್ಲ. ಇದರಿಂದಾಗಿ ಹೋಟೆಲ್, ಸಾರಿಗೆ ನಂತರ ಇದೀಗ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಒಂದೆಡೆ ಬೆಂಗಳೂರಿಗೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಭಾರೀ ಕಡಿತವಾಗಿದ್ರೇ, ಮತ್ತೊಂದೆಡೆ ರಾಜಧಾನಿಯಿಂದ ಫಾರಿನ್‌ಗೆ ಹೋಗುವವರ ಸಂಖ್ಯೆ ಇಳಿಮುಖವಾಗಿದೆ.
ಮಧ್ಯಪ್ರಾಚ್ಯದ ಕದನ ಸದ್ಯಕ್ಕೆ ಕೊನೆಗಾಣೋ ಲಕ್ಷಣಗಳಿಲ್ಲ. ಇದರ ಪರಿಣಾಮ ದೇಶ ಹಾಗೂ ರಾಜ್ಯದ ಪ್ರವಾಸೋದ್ಯಮ ವಿಲವಿಲ ಒದ್ದಾಡುವಂತಾಗಿದೆ. ಒಂದೆಡೆ ಪ್ರತಿನಿತ್ಯ ಗಲ್ಫ್ ದೇಶಗಳಿಂದ ಬರೋ ಮಿಡಲಿಸ್ಟ್ ಏರ್ ಲೈನ್ಸ್‌ಗಳು ಬೆಂಗಳೂರಿಗೆ ಬರೋದು ಕ್ಯಾನ್ಸಲ್ ಆಗ್ತಿವೆ. ಅದ್ರಲ್ಲೂ ಕತಾರ್, ಎಮಿರೇಟ್ಸ್, ಒಮನ್ ಏರ್‌ಲೈನ್, ಇತಿಹಾರ್ಡ್, ಗಲ್ಫ್ ಏರ್, ಕುವೈತ್ ಏರ್‌ವೇಸ್, ಏರ್ ಅರೇಬಿಯಾ ಫ್ಲೈಟ್‌ಗಳಿಂದ ಪ್ರತಿದಿನ 5,000 ಜನ ಪ್ರವಾಸಿಗರು ಬೆಂಗಳೂರಿಗೆ ಬರುತ್ತಿದ್ದರು.
ಆದರೆ ಮಾರ್ಚ್ ತಿಂಗಳಲ್ಲಿ ವಿದೇಶಿಗರು ಫ್ಲೈಟ್ ಕ್ಯಾನ್ಸಲ್‌ನಿಂದ ಬರ್ತಿಲ್ಲ. ಯಾವುದೇ ಆಲ್ಟರ್‌ನೇಟಿವ್ ಫ್ಲೈಟ್ ಸಹ ಅರೆಂಜ್ ಆಗದೇ 50-60% ವಿದೇಶಿಗರು ರಿಫಂಡ್ ಕೇಳ್ತಿದ್ದಾರೆ. ಇದರಿಂದ ಬೆಂಗಳೂರಿನ ಶೇಕಡಾ 50% ಹೋಟೆಲ್ ರೂಮ್‌ಗಳು ಖಾಲಿಯಾಗಿವೆ.
ಬೆಂಗಳೂರಿನಿಂದ ಪ್ರತಿ ವರ್ಷ ರಂಜಾನ್‌ಗೆ ದುಬೈ, ಸೌದಿ ಅರೇಬಿಯಾ ಸೇರಿದಂತೆ ಹಲವು ಗಲ್ಫ್ ನಗರಗಳಿಗೆ ತೆರಳುತ್ತಿದ್ದ ಪ್ರವಾಸಿಗರು ಯುದ್ದದ ಭೀತಿ ಹಾಗೂ ಫ್ಲೈಟ್ ಅಲಭ್ಯತೆಯಿಂದ ಕ್ಯಾನ್ಸಲ್ ಮಾಡಿದ್ದಾರೆ. ಜೊತೆಗೆ ಬೇಸಿಗೆ ರಜೆಗೆ ಫಾರೀನ್ ಪ್ಲಾನ್ ಮಾಡಿದ್ದ ಬೆಂಗಳೂರಿಗರು ಸಹ ಕ್ಯಾನ್ಸಲ್ ಮಾಡ್ತಿದ್ದು, ರಾಜ್ಯ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಇದರೆ ಜೊತೆಗೆ ಏರ್‌ಫೇರ್ ದರ ಸಹ ಹೆಚ್ಚಾಗಿದ್ದು, ಫ್ಲೈಟ್ ಟಿಕೆಟ್ ದರ ಯೂರೋಪಿಯನ್ ದೇಶಗಳಿಗೆ ಹೆಚ್ಚಾಗಿದೆ. ಉದಾಹರಣೆಗೆ ಬೆಂಗಳೂರಿನಿಂದ ಲಂಡನ್‌ಗೆ ಸುಮಾರು ಒಂದು ಲಕ್ಷದ ಮೇಲಾಗಿದೆ. ಇದು ಸಹ ಫಾರೀನ್ ಟ್ರಿಪ್ ಕ್ಯಾನ್ಸಲ್‌ಗೆ ಪ್ರಮುಖ ಕಾರಣವಾಗಿದಂತಾಗಿದೆ. ಒಟ್ಟಿನಲ್ಲಿ ಕೊರೋನಾ ನಂತರ ಈ ಗಲ್ಪ್ ರಾಷ್ಟ್ರಗಳ ಯುದ್ಧ ಪ್ರವಾಸೋದ್ಯಮಕ್ಕೆ ಬಹುದೊಡ್ಡ ಹೊಡೆತ ನೀಡಿದ್ದು, ಟೂರಿಸಂ ಕ್ಷೇತ್ರ ಅದೋಗತಿಗೆ ತಲುಪುತ್ತಿದೆ ಎಂದು ಹೇಳಲಾಗಿದೆ.














