ಮನೆ ಸುದ್ದಿ ಜಾಲ ಮೈಸೂರಿಗರಿಗೆ ಮತ್ತೊಂದು ಬಿಗ್ ಶಾಕ್; ಸತತ 7 ಗಂಟೆ ಪವರ್‌ ಕಟ್ – ಕರೆಂಟ್‌ ಸಮಸ್ಯೆ..!

ಮೈಸೂರಿಗರಿಗೆ ಮತ್ತೊಂದು ಬಿಗ್ ಶಾಕ್; ಸತತ 7 ಗಂಟೆ ಪವರ್‌ ಕಟ್ – ಕರೆಂಟ್‌ ಸಮಸ್ಯೆ..!

0

ಮೈಸೂರು : ಬಿಸಿಲ ಬೇಗೆಯಲ್ಲಿ ಬೆಂದು ಹೋಗುತ್ತಿರುವ ಮೈಸೂರಿಗರಿಗೆ ಮತ್ತೊಂದು ಬಿಗ್ ಶಾಕ್..! ನಿಮ್ಮ ಮೊಬೈಲ್ ಚಾರ್ಜ್ ಆಗಿದೆಯೇ? ಓವರ್‌ಹೆಡ್ ಟ್ಯಾಂಕ್ ಫುಲ್ ಆಗಿದೆಯೇ ಈಗಲೇ ಚೆಕ್ ಮಾಡಿಕೊಳ್ಳಿ. ಏಕೆಂದರೆ ಮಾರ್ಚ್ 27ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿ.ವಿ. ಮೊಹಲ್ಲಾ ವ್ಯಾಪ್ತಿಯಲ್ಲಿ ಭಾರಿ ಪವರ್ ಕಟ್ ಆಗಲಿದೆ.

ಎಲ್ಲೆಲ್ಲಿ ಕರೆಂಟ್‌ ವ್ಯತ್ಯಯ? – 11 ಕೆ.ವಿ ಮಯೂರ ಹಾಗೂ ಆರ್ಕಿಯಾಲಜಿ ಮಾರ್ಗಕ್ಕೆ ಸೇರುವ ಲಕ್ಷ್ಮೀಕಾಂತನಗರ, ಗಣಪತಿ ದೇವಸ್ಥಾನ ಹಿಂಭಾಗದ ವೃತ್ತ, ನಿಸರ್ಗ ಲೇಔಟ್, ಕ್ಯಾನ್ಸರ್ ಆಸ್ಪತ್ರೆ ಹಿಂಭಾಗ ಹಾಗೂ ಸುತ್ತಮುತ್ತಲಿನ ಗೃಹ ಮತ್ತು ವಾಣಿಜ್ಯ ಪ್ರದೇಶ, ಎಂ.ಜಿ. ಕೊಪ್ಪಲು, ಅಭಿಷೇಕ್ ಸರ್ಕಲ್ ಸುತ್ತಮುತ್ತಲಿನ ಪ್ರದೇಶ, ರೈಲ್ವೇ ಲೇಔಟ್ ಹಿಂಭಾಗ, ವಿ.ವಿ ಲೇಔಟ್ ಎದುರು ಭಾಗ, ಟ್ರೂ ಸ್ಪಿರಿಟ್ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ಫ್ಯಾನ್ ಇಲ್ಲದೇ ಒದ್ದಾಡುವುದು ಗ್ಯಾರೆಂಟಿ..! ಆದರೆ, ಇಷ್ಟೆಲ್ಲಾ ಕಷ್ಟ ಕೊಡುತ್ತಿರುವ ಈ ‘ಭೂಗತ ಕೇಬಲ್’ ಕಾಮಗಾರಿಯ ಹಿಂದಿರುವ ಬೃಹತ್ ಮಾಸ್ಟರ್ ಪ್ಲಾನ್ ಏನು ಗೊತ್ತೇ? ಕೇಳಿದರೆ ನೀವೇ ದಂಗಾಗುತ್ತೀರಾ..,

ಬರೋಬ್ಬರಿ 408.84 ಕೋಟಿಯ ಪ್ರಾಜೆಕ್ಟ್ – ಈ ಮೆಗಾ ಪ್ರಾಜೆಕ್ಟ್‌ನ ಒಟ್ಟು ಬಜೆಟ್ ಬರೋಬ್ಬರಿ ₹408.94 ಕೋಟಿ, ನಗರದಾದ್ಯಂತ ಜೇಡರ ಬಲೆಯಂತಿರುವ, ಗಾಳಿ-ಮಳೆಗೆ ತುಂಡಾಗಿ ಬೀಳುವ ಹಳೆಯ ತಂತಿಗಳನ್ನು ಕಿತ್ತುಹಾಕಿ, ಬರೋಬ್ಬರಿ 1,110 ಕಿ.ಮೀ ಉದ್ದದ ಹೈಟೆಕ್ ಭೂಗತ ಕೇಬಲ್ ಅಳವಡಿಸುವ ಭಾರಿ ಸಾಹಸಕ್ಕೆ ಸೆಸ್ಕ್ ಕೈಹಾಕಿದೆ. ಪ್ರಸ್ತುತ ಮೊದಲ ಹಂತದಲ್ಲಿ 30% ರಷ್ಟು ಕೆಲಸ ಮಾತ್ರ ಮುಗಿದಿದ್ದು, ಉಳಿದ 70% ಕಾಮಗಾರಿಯು ಈಗ ಯುದ್ಧೋಪಾದಿಯಲ್ಲಿ ಸಾಗುತ್ತಿದೆ.

ತಜ್ಞರ ಪ್ರಕಾರ, ಈ ಬೃಹತ್ ಯೋಜನೆಯು ಮುಂದಿನ ವರ್ಷದ ಅಂತ್ಯದ ವೇಳೆಗೆ (2027 ಕ್ಕೆ) ಸಂಪೂರ್ಣವಾಗಿ ಮುಗಿಯುವ ಗುರಿ ಹೊಂದಲಾಗಿದೆ. ಒಮ್ಮೆ ಈ ಕಾಮಗಾರಿ ಪೂರ್ಣಗೊಂಡರೆ ಮಳೆ, ಬಿರುಗಾಳಿ ಬಂದರೂ ನಿಮ್ಮ ಮನೆಯ ಕರೆಂಟ್ ಮಾತ್ರ ಹೋಗುವುದಿಲ್ಲ, ಜೊತೆಗೆ ವಿದ್ಯುತ್ ಸೋರಿಕೆಯಾಗಿ ಬಿಲ್ ಹೆಚ್ಚಾಗುವ ಟೆನ್ಷನ್ ಕೂಡ ಇರುವುದಿಲ್ಲ!

ಇದು ಕೇವಲ ವಿ.ವಿ. ಮೊಹಲ್ಲಾ ಜನರಿಗೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಇಡೀ ಮೈಸೂರಿಗೆ ಹಬ್ಬಲಿದೆ. ಮುಂಬರುವ ದಿನಗಳಲ್ಲಿ ಕೇವಲ ವಿ.ವಿ. ಮೊಹಲ್ಲಾ ಮಾತ್ರವಲ್ಲದೆ, ಆರ್.ಕೆ. ನಗರ, ಚಾಮುಂಡಿಪುರಂ ಮತ್ತು ಜ್ಯೋತಿನಗರ ಉಪವಿಭಾಗಗಳಲ್ಲೂ ಭೂಗತ ಕೇಬಲ್ ಅಳವಡಿಕೆಗಾಗಿ ಯಂತ್ರಗಳು ಎಂಟ್ರಿ ಕೊಡಲಿವೆ. ಹಾಗಾಗಿ, ಮುಂಬರುವ ವಾರಗಳಲ್ಲಿ ಹಂತ-ಹಂತವಾಗಿ ಈ ಭಾಗದ ಜನರಿಗೂ ವಿದ್ಯುತ್ ವ್ಯತ್ಯಯದ ಬಿಸಿ ತಟ್ಟಲಿದೆ. ಭವಿಷ್ಯದ 24×7 ನಿರಂತರ, ಸುಗಮ ಹಾಗೂ ಸೇಫ್ ಕರೆಂಟ್ ಪೂರೈಕೆಗಾಗಿ ಇಂದಿನ ಈ ಸಣ್ಣ ಕಷ್ಟವನ್ನು ಸಹಿಸಿಕೊಳ್ಳಿ ಎಂದು ಸೆಸ್ಕ್ ಅಧಿಕಾರಿಗಳು ಕಳಕಳಿಯ ಮನವಿ ಮಾಡಿದ್ದಾರೆ.