ಮನೆ ಸಾಹಿತ್ಯ ಕಣ್ಣಾಲಿಯೊಳಗಿನ ನೋವು- ಕವನ

ಕಣ್ಣಾಲಿಯೊಳಗಿನ ನೋವು- ಕವನ

0

ಕಂಗಳ ದಂಡೆಯೂ

ಒಂದರ್ಥದಿ ತಡೆಗೋಡೆ

ಉಕ್ಕುವ ಕಂಬನಿ

ಅಲೆಗಳ ತಡೆತಡೆದು

ಎದೆಯ ಕಲ್ಲಾಗಿಸುತ

ಗುಂಡಿಗೆಯನಾಗಿಸುವುದು

ಅಕ್ಷರಶಃ ಕಲ್ಲುಬಂಡೆ.

ತಡೆಯಲು ಸೋತ

ಕಣ್ಣಾಲಿಗಳಿಗಷ್ಟೇ ಗೊತ್ತು

ಕಂಬನಿಯ ಪ್ರಖರತೆ.

ಕುದಿದು ಕುದಿದು

ಹೊರಬಂದು ಸುರಿದ

ಕಣ್ಣೀರಿಗಷ್ಟೇ ಗೊತ್ತು

ನೋವಿನ ತೀವ್ರತೆ.