ಮನೆ ರಾಜ್ಯ ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತರ ಸವಾರಿ – ಫೋಟೋ ಹಾಕಿ, ಪೋಷಕರ ವಿರುದ್ಧ ಆಕ್ರೋಶ..!

ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತರ ಸವಾರಿ – ಫೋಟೋ ಹಾಕಿ, ಪೋಷಕರ ವಿರುದ್ಧ ಆಕ್ರೋಶ..!

0

ಬೆಂಗಳೂರು : ನಗರದ ಪಾದರಾಯನಪುರ ಮುಖ್ಯರಸ್ತೆಯಲ್ಲಿ ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತರು ಸವಾರಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಪ್ರಾಪ್ತರು ಸ್ಕೂಟರ್‌ನಲ್ಲಿ ಸವಾರಿ ಮಾಡುವುದನ್ನು ಬೈಕ್‌ ಸವಾರರೊಬ್ಬರು ಫೋಟೋ ಕ್ಲಿಕ್ಕಿಸಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಸ್ಕೂಟರ್‌ ನೀಡಿ ನಿರ್ಲಕ್ಷ್ಯ ಮೆರೆದ ಪೋಷಕರ ವಿರುದ್ಧ ಈಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಪ್ರಾಪ್ತರ ಕೈಗೆ ಬೈಕ್‌ ನೀಡಿ ನಿರ್ಲಕ್ಷ್ಯ ತೋರಿರುವ ಪೋಷಕರ ವಿರುದ್ಧ ಕ್ರಮಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

KA05-JZ-9065 ನೋಂದಣಿ ಸಂಖ್ಯೆಯ ಸ್ಕೂಟರ್‌ನಲ್ಲಿ ಪಾದರಾಯನಪುರ ಮುಖ್ಯ ರಸ್ತೆಯ ಗೌರಿಪಾಳ್ಯ ಬಳಿ ಇರುವ ಆಟೋ ಗ್ಯಾಸ್ ಎದುರು ಮಕ್ಕಳು ಸವಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.