ಮನೆ ಕಾನೂನು ಕಾಲೇಜಿಗೆ ಪಿಯು ವಿದ್ಯಾರ್ಥಿಗಳು ಬೈಕ್ ತರುವಂತಿಲ್ಲ: ರವಿಕಾಂತೇಗೌಡ

ಕಾಲೇಜಿಗೆ ಪಿಯು ವಿದ್ಯಾರ್ಥಿಗಳು ಬೈಕ್ ತರುವಂತಿಲ್ಲ: ರವಿಕಾಂತೇಗೌಡ

0

ಬೆಂಗಳೂರು(Bengaluru): ಪಿಯುಸಿ ವಿದ್ಯಾರ್ಥಿಗಳಿಗೆ ಡಿಎಲ್ ಹೊಂದಲು ಅರ್ಹತೆ ಹೊಂದಿರದ ಕಾರಣ ಪಿಯುಸಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವಂತಿಲ್ಲ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರವಿಕಾಂತೇಗೌಡ ಅವರು, ವ್ಹೀಲಿಂಗ್ ವಿರುದ್ಧ ವಿಶೇಷ ಅಭಿಯಾನ ನಡೆಸುತ್ತಿದ್ದೇವೆ.  ಕಳೆದ ವಾರ 14 ವೀಲಿಂಗ್ ಪ್ರಕರಣ ದಾಖಲಾಗಿದೆ.  ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ದೂರು ಆಧರಿಸಿ 12 ಪ್ರಕರಣಗಳು ದಾಖಲಾಗಿವೆ . ಈ ಪ್ರಕರಣಕ್ಕೆ 5 ರಿಂದ 10ಲಕ್ಷದವರೆಗೆ ಬಾಂಡ್ ಬರೆಸಿಕೊಳ್ಳುತ್ತೇವೆ. ವೀಲಿಂಗ್ ಮಾಡುವವರ ಪೋಷಕರ ಕೌನ್ಸಿಲಿಂಗ್ ಮಾಡುತಿದ್ದೇವೆ ಎಂದರು.

ನಕಲಿ ನಂಬರ್ ಪ್ಲೇಟ್ ಹೊಂದಿರುವ  ವಾಹನಗಳು ಹೆಚ್ಚಾಗುತ್ತಿವೆ. ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ  ಮಾಲೀಕರನ್ನ ಬಂಧಿಸಿ ಜೈಲಿಗೆ ಕಳಿಸುತ್ತೇವೆ. ಇನ್ನು ಜೂನ್ ನಲ್ಲಿ 22 ಸವಾರರು ಮದ್ಯ ಸೇವಿಸಿ ಅಪಘಾತದದಲ್ಲಿ ಸಾವನ್ನಪ್ಪಿದ್ದಾರೆ. ಯಾರೂ ಕೂಡ ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ರವೀಕಾಂತೇಗೌಡ ಹೇಳಿದರು.