ಮನೆ ರಾಷ್ಟ್ರೀಯ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ ಐಎಎಸ್ ಅಧಿಕಾರಿ

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ ಐಎಎಸ್ ಅಧಿಕಾರಿ

0

ವಿಜಯವಾಡ(Vijayavada): ಐಎಎಸ್ ಅಧಿಕಾರಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಆಂಧ್ರ ಪ್ರದೇಶ ಕ್ರೀಡಾ ಪ್ರಾಧಿಕಾರದ ಎಂಡಿ ಎನ್. ಪ್ರಭಾಕರ ರೆಡ್ಡಿ ಅವರು ಮಂಗಳವಾರದಂದು ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ವಿಜಯವಾಡದಲ್ಲಿರುವ ಪಟಮಟಾ ಕೊನೇರು ಬಸವಯ್ಯ ಚೌಧರಿ ಜಿಲ್ಲಾ ಪರಿಷತ್ ಪ್ರೌಢಶಾಲೆಗೆ ತಮ್ಮ ಇಬ್ಬರು ಮಕ್ಕಳನ್ನು ಸೇರಿಸಿದ್ದಾರೆ.

ಈ ಹಿಂದೆ ನೆಲ್ಲೂರು ಜಿಲ್ಲೆಯ ಜಂಟಿ ಕಲೆಕ್ಟರ್ ಆಗಿದ್ದ ಅವಧಿಯಲ್ಲಿ ಕೂಡ ಪ್ರಭಾಕರ ರೆಡ್ಡಿ, ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿಯೇ ಓದಿಸಿದ್ದರು. ಆಗ ಪ್ರಭಾಕರ ರೆಡ್ಡಿ ಅವರ ಪತ್ನಿ ಲಕ್ಷ್ಮಿ ತಮ್ಮ ಇಬ್ಬರು ಮಕ್ಕಳೊಂದಿಗೆ ಶಾಲೆಗೆ ಬಂದು ಅಡ್ಮಿಷನ್ ತೆಗೆದುಕೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಶಾಲೆಯಲ್ಲಿ ಸೌಲಭ್ಯ, ತರಗತಿ ಕೊಠಡಿ, ಆಟದ ಮೈದಾನ ಎಲ್ಲವೂ ಉತ್ತಮವಾಗಿವೆ. ಈ ಶಾಲೆಯಲ್ಲಿ ಮಗನಿಗೆ ಆರನೇ ತರಗತಿಗೆ ಮತ್ತು ಮಗಳಿಗೆ 8ನೇ ತರಗತಿಗೆ ಪ್ರವೇಶ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದರು.

ಹಿಂದಿನ ಲೇಖನಕಾಲೇಜಿಗೆ ಪಿಯು ವಿದ್ಯಾರ್ಥಿಗಳು ಬೈಕ್ ತರುವಂತಿಲ್ಲ: ರವಿಕಾಂತೇಗೌಡ
ಮುಂದಿನ ಲೇಖನಕೇಂದ್ರ ಸಚಿವ ಸ್ಥಾನಕ್ಕೆ ಅಬ್ಬಾಸ್ ನಖ್ವಿ ರಾಜೀನಾಮೆ: ಉಪರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಸಾಧ್ಯತೆ