ಮನೆ ರಾಜ್ಯ ಮಡಿಕೇರಿಯಲ್ಲಿ ಲ್ಯಾಂಡ್‌ ಸ್ಲೈಡ್‌: ಸರ್ಕಾರದಿಂದ ಮುಂಜಾಗ್ರತಾ ಕ್ರಮ; ಸಿಎಂ ಬೊಮ್ಮಾಯಿ

ಮಡಿಕೇರಿಯಲ್ಲಿ ಲ್ಯಾಂಡ್‌ ಸ್ಲೈಡ್‌: ಸರ್ಕಾರದಿಂದ ಮುಂಜಾಗ್ರತಾ ಕ್ರಮ; ಸಿಎಂ ಬೊಮ್ಮಾಯಿ

0

ಮೈಸೂರು (Mysuru): ಮಡಿಕೇರಿಯಲ್ಲಿ ನಿರಂತರ ಮಳೆ ಮತ್ತು ಲ್ಯಾಂಡ್ ಸ್ಲೈಡ್ ಆಗುತ್ತಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕಳೆದ ಬಾರಿ ಎಲ್ಲೆಲ್ಲಿ ಲ್ಯಾಂಡ್ ಸ್ಲ್ಯಾಡ್ ಆಗಿದೆಯೋ ಆ ಸ್ಥಳಗಳಲ್ಲಿನ ಜನರನ್ನು ಸ್ಥಳಾಂತರ ಮಾಡಲು, ರೋಡ್ ಗಳು ಬ್ಲಾಕ್ ಆಗದಂತೆ ನೋಡಿಕೊಳ್ಳಲು ಹೇಳಿದ್ದೇನೆ ಎಂದರು.

ಇಂದು ರಾತ್ರಿ ಕಂದಾಯ ಸಚಿವರು ಮಡಿಕೇರಿಗೆ ಹೋಗುತ್ತಿದ್ದಾರೆ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲಾಧಿಕಾರಿಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಿ, ಮನೆಗಳ ಹಾನಿಗೆ ಪರ್ಯಾಯ ವ್ಯವಸ್ಥೆ ಮಾಡಿ. ಎಲ್ಲಾ ಜಿಲ್ಲಾಧಿಕಾರಿಗಳ ಬಳಿ 10 ಕೋಟಿಗೂ ಹೆಚ್ಚು ಹಣ ಇದೆ. ಅವಶ್ಯಕತೆ ಇದ್ದಲ್ಲಿ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ಜಾಸ್ತಿಯಾಗಿದೆ. ಕಡಲ ಕೊರೆತ ಜಾಸ್ತಿಯಾಗಿದೆ. ಕಡಲ ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಹೊಸ ಟೆಕ್ನಾಲಜಿ ಬಳಕೆ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಟ್ರಯಲ್ ಬೇಸಿಸ್ ಮೇಲೆ ಮಾಡಲಾಗುತ್ತದೆ. ಮೈಸೂರಿನ‌ ಎನ್ ಡಿಆರ್ ಎಫ್ ಕೊಡಗಿಗೆ ಮೀಸಲಿರಿಸಲಾಗಿದೆ. ಮಂಗಳೂರಿನ ಎನ್ ಡಿಆರ್ ಎಫ್ ನ್ನು ಮಂಗಳೂರಿಗೆ, ಮಂಗಳೂರಿನ‌ ಎಸ್ ಡಿಆರ್ ಎಫ್ ತಂಡವನ್ನು ಉಡುಪಿ ಮತ್ತು ಕಾರವಾರ ಜಿಲ್ಲೆಗೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ರಸ್ತೆಗಳು ಕೆರೆಯಾಗುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಲ್ಲಿ ಕೆರೆಯ ಅಂಗಳದಲ್ಲಿ, ಸುತ್ತಮುತ್ತ ಹಾಗೂ ಕೆರೆಯ ಮೇಲೆ ಮನೆ ಕಟ್ಟಿದ್ದಾರೆ. ರಾಜಕಾಲುವೆ ದುರಸ್ಥಿ ಮಾಡಲು 16 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ರಾಜಕಾಲುವೆ ಸರಿ ಮಾಡಿದರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.