ಮನೆ ಕ್ರೀಡೆ ಐಸಿಸಿ ಟೆಸ್ಟ್‌ ರ್ಯಾಂಕಿಂಗ್‌: 10ರ ಸ್ಥಾನದಿಂದ ಹೊರಬಿದ್ದ ಕೊಹ್ಲಿ, 5ನೇ ಸ್ಥಾನಕ್ಕೆ ಪಂತ್‌

ಐಸಿಸಿ ಟೆಸ್ಟ್‌ ರ್ಯಾಂಕಿಂಗ್‌: 10ರ ಸ್ಥಾನದಿಂದ ಹೊರಬಿದ್ದ ಕೊಹ್ಲಿ, 5ನೇ ಸ್ಥಾನಕ್ಕೆ ಪಂತ್‌

0

ದುಬೈ (Dubai): ಭಾರತ ತಂಡದ ರನ್ ಮೆಷಿನ್‌ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರ ಹತ್ತರಿಂದ ಹೊರಬಿದ್ದಿದ್ದಾರೆ. ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಐದನೇ ಸ್ಥಾನಕ್ಕೇರಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಪಂತ್ ಮೊದಲ ಇನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದರು. ಇದೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದ ಇಂಗ್ಲೆಂಡ್‌ ತಂಡದ ಜೋ ರೂಟ್ ಒಟ್ಟು 923 ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿದ್ದಾರೆ. ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದ ಜಾನಿ ಬೆಸ್ಟೊ 10ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್ ಲಾಬುಷೇನ್ ಮತ್ತು ಸ್ಟೀವ್ ಸ್ಮಿತ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಕೊಹ್ಲಿ ನಾಲ್ಕು ಸ್ಥಾನಗಳ ಕುಸಿತ ಕಂಡು, 13ನೇ ಸ್ಥಾನಕ್ಕಿಳಿದಿದ್ದಾರೆ. ಇದು ಕೊಹ್ಲಿ ಅವರು ಕಳೆದ ಆರು ವರ್ಷಗಳಲ್ಲಿ ಕಂಡ ದೊಡ್ಡ ಕುಸಿತ ಇದಾಗಿದೆ. ಇಂಗ್ಲೆಂಡ್ ವಿರುದ್ಧ ಮಂಗಳವಾರ ಮುಕ್ತಾಯವಾದ ಟೆಸ್ಟ್ ಪಂದ್ಯದಲ್ಲಿಯೂ ಅವರು ವೈಫಲ್ಯ ಅನುಭವಿಸಿದ್ದರು.

ಹಿಂದಿನ ಲೇಖನಮಡಿಕೇರಿಯಲ್ಲಿ ಲ್ಯಾಂಡ್‌ ಸ್ಲೈಡ್‌: ಸರ್ಕಾರದಿಂದ ಮುಂಜಾಗ್ರತಾ ಕ್ರಮ; ಸಿಎಂ ಬೊಮ್ಮಾಯಿ
ಮುಂದಿನ ಲೇಖನಒಂದೇ ದಿನ ಮೂವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಡೆಲಿವರಿ ಬಾಯ್‌: ಬಂಧನಕ್ಕಾಗಿ ಶೋಧ