ಸ್ಟಾರ್ ಬ್ಯಾಟ್ಸ್‌ಮನ್ ಎಂದೇ ಕೆಎಲ್ ರಾಹುಲ್ ತಮ್ಮ ವೃತ್ತಿಜೀವನದ ಬಗ್ಗೆ ಕೆಲ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಇವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ತಮ್ಮನ್ನು ಟಿ20 ಆಟಗಾರ ಎಂದು ನೋಡಿಲ್ಲ ಎಂದಿದ್ದಾರೆ ಮತ್ತು ಟೆಸ್ಟ್ ಬ್ಯಾಟ್ಸ್‌ಮನ್ ಆಗಿ ಮಾತ್ರ ನೋಡಲಾಗುತ್ತಿತ್ತು ಎಂದು ರಾಹುಲ್ ಒಪ್ಪಿಕೊಂಡಿದ್ದಾರೆ. ಆದರೆ ಈಗ ತಮ್ಮ ಕಠಿಣ ಪರಿಶ್ರಮದ ಮೂಲಕ ಆ ಗ್ರಹಿಕೆಯನ್ನು ಬದಲಾಯಿಸಿದ್ದಾಗಿ ತಿಳಿಸಿದ್ದಾರೆ. ಹಾಗೆ ಜಿಯೋಸಿನಿಮಾ ಆಯೋಜಿಸಿದ್ದ ‘ಸೂಪರ್‌ಸ್ಟಾರ್ಸ್’ ಕಾರ್ಯಕ್ರಮದಲ್ಲಿ ರಾಹುಲ್ ಭಾಗವಹಿಸಿ ತಮ್ಮ ಕ್ರಿಕೆಟ್ ಪ್ರಯಾಣವನ್ನು ನೆನಪಿಸಿಕೊಂಡರು. “ಸುಮಾರು 10 ವರ್ಷಗಳ ಹಿಂದೆ, ನಾನು ಯಾವುದೇ ಬೆಲೆತೆತ್ತಾದರೂ ಟಿ20 ತಂಡದ ಭಾಗವಾಗಬೇಕೆಂದು ಬಯಸಿದ್ದೆ. ಆ ಸಮಯದಲ್ಲಿ, ನನ್ನನ್ನು ಟಿ20 ಆಟಗಾರ ಅಥವಾ ಉತ್ತಮ ವೈಟ್-ಬಾಲ್ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿರಲಿಲ್ಲ. ನನಗೆ ಟೆಸ್ಟ್ ಆಟಗಾರನ ಟ್ಯಾಗ್ ಮಾತ್ರ ಇತ್ತು” ಎಂದು ಅವರು ಹೇಳಿದರು ಎನ್ನಲಾಗಿದೆ.
ಹೀಗೆ “ನಾನು ನನ್ನ ಆಟವನ್ನು ಸಾಕಷ್ಟು ಸುಧಾರಿಸಿದ್ದೇನೆ ಎಂದು ರಾಹುಲ್ ಹೇಳಿದರು. ಆ ಇಮೇಜ್‌ನಿಂದ ಹೊರಬರುವುದು ಸುಲಭವಲ್ಲ, ಆದರೆ ನಾನು ನಿರಂತರವಾಗಿ ನನ್ನ ಆಟವನ್ನು ಸುಧಾರಿಸಿಕೊಂಡಿದ್ದೇನೆ. ನಾನು ಚುಟುಕು ಕ್ರಿಕೆಟ್‌ನಲ್ಲಿ ಕಠಿಣ ಶ್ರಮವಹಿಸಿ ಈ ಹಂತವನ್ನು ತಲುಪಿದ್ದಕ್ಕೆ ನನಗೆ ಹೆಮ್ಮೆ ಇದೆ. ನಾನು ದಾರಿಯುದ್ದಕ್ಕೂ ತಪ್ಪುಗಳನ್ನು ಮಾಡಿದ್ದೇನೆ, ಅವುಗಳನ್ನು ತಿದ್ದಿಕೊಂಡಿದ್ದೇನೆ ಇನ್ನೂ ತಿದ್ದಿಕೊಳ್ಳುತ್ತಿದ್ದೇನೆ. ನಾನು ಸದ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ ಎಂದರು” 2022 ರಿಂದ ರಾಹುಲ್ ಭಾರತ ಪರ ಟಿ20 ಪಂದ್ಯಗಳನ್ನು ಆಡಿಲ್ಲ. ಆದರೆ ಏಕದಿನ ಮತ್ತು ಟೆಸ್ಟ್ ತಂಡಗಳ ಪ್ರಮುಖ ಭಾಗವಾಗಿ ಉಳಿದಿದ್ದಾರೆ. ಆಟವು ಏರಿಳಿತಗಳಿಂದ ಕೂಡಿರಲಿದ್ದು ಆಟಗಾರರು ಅವುಗಳನ್ನು ಸ್ವೀಕರಿಸಲು ಕಲಿಯಬೇಕು ಎಂದು ಸಲಹೆ ನೀಡಿದರು ಎಂದುತಿಳಿದುಬಂದಿದೆ ಎನ್ನಬಹುದು.
ರಾಹುಲ್ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮುಕ್ತವಾಗಿ ಮಾತನಾಡಿದರು. “ತಂದೆಯಾಗುವುದು ನನ್ನ ಜೀವನದ ಅತ್ಯಂತ ಸುಂದರವಾದ ಅನುಭವ. ನನ್ನ ಮಗಳನ್ನು ನೋಡಿದಾಗ, ನನ್ನ ಎಲ್ಲಾ ನೋವು ಸಮಸ್ಯೆಗಳನ್ನು ನಾನು ಮರೆತುಬಿಡುತ್ತೇನೆ. ಇದು ನನ್ನ ಆಟದ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ. ಈಗ ಕ್ರಿಕೆಟ್ ಅನ್ನು ಹೆಚ್ಚು ಆನಂದಿಸಲು ಸಾಧ್ಯವಾಗುತ್ತಿದ್ದು ಅನಗತ್ಯ ಯೋಚಿನೆಗಳನ್ನು ಕಡಿಮೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದರು. ಈ ಐಪಿಎಲ್ ಸೀಸನ್‌ನಲ್ಲಿ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರಾಹುಲ್ ತಮ್ಮ ಟ್ರೇಡ್‌ಮಾರ್ಕ್ ಶಾಟ್‌ಗಳಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 9 ಪಂದ್ಯಗಳಲ್ಲಿ, ಅವರು 185.84 ಸ್ಟ್ರೈಕ್ ರೇಟ್‌ನಲ್ಲಿ 433 ರನ್ ಗಳಿಸಿದ್ದಾರೆ. ಪ್ರಸ್ತುತ ಅವರು ಟೂರ್ನಮೆಂಟ್‌ನ ಎರಡನೇ ಹೈ ಸ್ಕೋರರ್ ಆಗಿದ್ದಾರೆ. ಅಭಿಷೇಕ್ ಶರ್ಮಾ (440) ಅಗ್ರಸ್ಥಾನದಲ್ಲಿದ್ದಾರೆ ಎನ್ನಬಹುದು.
















