ಮನೆ ಸುದ್ದಿ ಜಾಲ ರಾಗಿಣಿ ದ್ವಿವೇದಿ ಈಗ ‘ಮದನಿಕ’ : 400 ವರ್ಷಗಳ ಹಳೇಯ ಕಥೆ

ರಾಗಿಣಿ ದ್ವಿವೇದಿ ಈಗ ‘ಮದನಿಕ’ : 400 ವರ್ಷಗಳ ಹಳೇಯ ಕಥೆ

0

ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ  ಈಗ ‘ಮದನಿಕ’ ಎಂಬ ಡಿಫ್ರೆಂಟ್​ ಟೈಟಲ್​ನೊಂದಿಗೆ ಗಮನ ಸೆಳೆಯುತ್ತಿರುವ ಸಿನಿಮಾ ಎಂದು ತಿಳಿದುಬಂದಿದೆ. ಒಂದೊಳ್ಳೆ ಕಂಟೆಂಟ್​ನೊಂದಿಗೆ ಬಿ.ಎಸ್.ಸಂಜಯ್ ಮತ್ತೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಮುಖ್ಯಭೂಮಿಕೆಯಲ್ಲಿರುವ ‘ಮದನಿಕ’ ಚಿತ್ರದ ಗ್ಲಿಂಪ್ಸ್ ಹಾಗೂ ಹಾಡನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿದೆ. ನಿರ್ದೇಶಕ ಬಿ.ಎಸ್.ಸಂಜಯ್ ಮಾತನಾಡಿ, ”ಈ ಕಥೆ ಮಾಡುವಾಗ ನನಗೆ ಗೊತ್ತಿಲ್ಲದಂತೆ ಒಂದಷ್ಟು ಘಟನೆಗಳು ನಡೆದವು. ತುಂಬಾ ಅದ್ಭುತವಾಗಿ ಕಥೆ ಮಾಡಿಕೊಂಡೆ. ನನ್ನ ಹೆಂಡತಿ ಬಳಿ, ಕುಮಾರಸ್ವಾಮಿ ಅವರ ಬಳಿ ಕಥೆ ಹೇಳಿದೆ ಎಂದಿದ್ದಾರೆ.

ಸಿನಿಮಾ ಮಾಡೋಣ ಅಂತಾ ಒಪ್ಪಿಗೆ ನೀಡಿದ್ರು. ರಾಗಿಣಿ ಅವರು ಈ ಕಥೆಯನ್ನು ಒಪ್ಪಿ ಸಿನಿಮಾದಲ್ಲಿ ನಟಿಸಿದ್ದಾರೆ. ಒಟ್ಟು 10 ಹಾಡುಗಳಿವೆ. ಕ್ಲಾಸಿಕಲ್ ಸಾಂಗ್ಸ್ ಇವೆ. ಮದನಿಕ ಅಂದ್ರೆ 400 ವರ್ಷಗಳ ಹಳೇ ಕಥೆ. ರಾಗಿಣಿ ಅವರು ಮದನಿಕ ಆಗಿ ಅಭಿನಯಿಸಿದ್ದಾರೆ” ಎಂದು ಮಾಹಿತಿ ನೀಡಿದರು. ಬಳಿಕ ನಾಯಕ ನಟಿ ರಾಗಿಣಿ ದ್ವಿವೇದಿ ಮಾತನಾಡಿ, ”ಮದನಿಕ ಬಗ್ಗೆ ಸಾಕಷ್ಟು ಕುತೂಹಲವಿದೆ. ಇದು ಕೇವಲ ಆರಂಭ ಅಷ್ಟೇ. ಗ್ಲಿಂಪ್ಸ್ ಆಫ್ ಮದನಿಕ ನೋಡಿದ್ದೀವಿ ಅಷ್ಟೇ. ಆದರೆ ಅದರ ಹಿಂದೆ ಅದ್ಭುತ ನಟನೆ, ಕಥೆ ಇದೆ. ಎರಡೂವರೆ ವರ್ಷಗಳ ಪಯಣ ಇದು. ಎಲ್ಲರಿಗೂ ಗೊತ್ತಿರುವ ಹಾಗೇ, ಟೆಕ್ನಾಲಜಿ, ಮೇಕಿಂಗ್, ಮ್ಯೂಸಿಕ್ ಎಲ್ಲವೂ ಬದಲಾಗಿದೆ. ನಾವೂ ಅಂದುಕೊಂಡಿರಲಿಲ್ಲ ಇಷ್ಟೊಂದು ಬದಲಾವಣೆ ಆಗುತ್ತೆ ಅಂತಾ. ಭಾವನೆಗಳು ಮಾತ್ರ ಬದಲಾಗಿಲ್ಲ. ಮಿಕ್ಸ್ಡ್ ವರ್ಷನ್ ಈ ಸಿನಿಮಾದಲ್ಲಿದೆ. ಅದ್ಭುತ ಆ್ಯಕ್ಷನ್ ಸೀಕ್ವೆನ್ಸ್ ಇದೆ. ಮ್ಯೂಸಿಕ್ ಇದೆ. ಈ ರೀತಿಯ ಸಿನಿಮಾ ಬಹಳಷ್ಟು ವರ್ಷಗಳಿಂದ ಬಂದಿಲ್ಲ” ಎಂದು ತಿಳಿಸಿದರು ಎನ್ನಲಾಗಿದೆ.

ಮತ್ತು ಹಾಡಿನ ಸಂಗೀತ ನಿರ್ದೇಶಕ ಸಲಾಂ ಕೇರಳ ಮಾತನಾಡಿ, ”ಇದಕ್ಕೂ ಮೊದಲು 3 ಸಿನಿಮಾ ಮಾಡಿದ್ದೆ. ಸಂಜಯ್ ಸರ್ ಒಂದು ಒಳ್ಳೆ ಅವಕಾಶ ನೀಡಿದರು. ನನ್ನ ಜೀವನದಲ್ಲೇ ಬೆಸ್ಟ್ ಮ್ಯೂಸಿಕ್ ಇದು ಅಂತಾನೇ ಹೇಳಬಹುದು. ನನ್ನ ಯೋಚನೆಯಲ್ಲಿ ಜನರಲ್ ಮ್ಯೂಸಿಕ್ ಅಂತಾನೆ ಇತ್ತು. ಆದ್ರೆ ನಿರ್ದೇಶಕರನ್ನು ಭೇಟಿಯಾದಾಗ ಕ್ಲಾಸಿಕಲ್ ಮ್ಯೂಸಿಕ್ ಇರಲಿ ಅಂತಾ ಹೇಳಿದ್ರು. ಹಾಗಾಗಿ ಕ್ಲಾಸಿಕಲ್ ಮ್ಯೂಸಿಕ್ ಅನ್ನೂ ಮಾಡಿದ್ದೇನೆ” ಎಂದು ತಿಳಿಸಿದರು. ವಿಕ್ಟರಿ ವಾಸು ಮಾತನಾಡಿ, ”ಮದನಿಕ ಹೆಸರೇ ಒಂದು ಆಕರ್ಷಕ, ಸುಂದರ ಹುಡುಗಿ. ಅದಕ್ಕೆ ರಾಗಿಣಿ ದ್ವಿವೇದಿ ಅವರು ಜೀವ ತುಂಬಿದ್ದಾರೆ. ಸಂಜಯ್ ಸರ್ ಮತ್ತು ನನ್ನದು 20 ವರ್ಷಗಳ ಅವಿನಾಭಾವ ಸಂಬಂಧ. ಸದ್ಯ ಈ ಸಿನಿಮಾ ಮಾಡಿದ್ದೇವೆ. ಪ್ರೋತ್ಸಾಹಿಸಿ, ನಮ್ಮ ಸಿನಿಮಾ ಗೆಲ್ಲಿಸಿಕೊಡಿ” ಎಂದು ಕೇಳಿಕೊಂಡರು.

ಃೀಗಾಗಿ ಎಸ್.ಪಿ.ಆರ್ ಪ್ರೊಡಕ್ಷನ್ ಹಾಗೂ ಸಖರ್ಥ್ ಡಿಜಿಟಲ್ ಹೌಸ್ ಬ್ಯಾನರ್ ಅಡಿ ಸುಜಾತ ಲಕ್ಷ್ಮೀ ಹಾಗೂ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದಾರೆ. ಧರ್ಮ ಕೀರ್ತಿರಾಜ್, ಹರೀಶ್ ರಾಜ್, ಅಶ್ವಿನ್, ರಾಜ್ವಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಸಂಗೀತ ಕಲಾಂ ಕೇರಳ ಅವರದ್ದು. ಉಳಿದಂತೆ ಛಾಯಾಗ್ರಹಣ ಆರ್ ಗಿರಿ ಅವರದ್ದಾಗಿದ್ದರೆ, ಸಾಹಸವನ್ನು ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್ ನಿಭಾಯಿಸಿದ್ದಾರೆ. ಶೀಘ್ರದಲ್ಲೇ ತಮ್ಮ ಸಿನಿಮಾವನ್ನು ಬಿಡುಗಡೆಗೊಳಿಸಬೇಕೆಂಬ ನಿಟ್ಟಿನಲ್ಲಿ ಚಿತ್ರತಂಡ ಕಾರ್ಯನಿರ್ವಹಿಸುತ್ತಿದೆ ಎನ್ನಬಹುದು.