ಬೆಂಗಳೂರು(ಆನೇಕಲ್): ತನ್ನ ಪತ್ನಿ ಹಾಗೂ ಮಕ್ಕಳನ್ನು ನನ್ನ ಜೋತೆ ಕಳುಹಿಸಿಕೊಡುವಂತೆ ಕೇಳಿಕೊಂಡ ಅಳಿಯನ ಮೇಲೆ ಪತ್ನಿ ಹಾಗೂ ಆಕೆಯ ಸಂಬಂಧಿಕರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ.
ಈ ಘಟನೆ ಆನೇಕಲ್ನ 25 ವರ್ಷದ ನವೀನ್ ಕೊಲೆಗೀಡಾದ ದುರ್ದೈವಿ. ಬೆಂಕಿಯಿಂದ ತೀವ್ರ ಗಾಯಗೊಂಡು ತಮಿಳುನಾಡಿನ ಕೃಷ್ಣಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವೀನ್, ಮೇ. 2ರಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ನಂತರ ಮರಣಕ್ಕೂ ಮುನ್ನ ಕೃಷ್ಣಗಿರಿಯ ಮಾಜಿಸ್ಟ್ರೇಟ್ ಮುಂದೆ ಡೆತ್ ಡಿಕ್ಲರೇಷನ್ ಹೇಳಿಕೆ ನೀಡಿದ ನವೀನ್, ತನ್ನ ಮೇಲೆ ಪೆಟ್ರೋಲ್ ಸುರಿದು ಹಲ್ಲೆ ಮಾಡಿ ಬೆಂಕಿ ಹಚ್ಚಿದ ಮಾವ ಸಂಪಂಗಿ, ಬಾಮೈದ ಮುನೇಶ್, ಅತ್ತೆ ಪಚ್ಚಮ್ಮ ಹಾಗೂ ಹೆಂಡತಿ ಸುಚಿತ್ರಾ ಮೇಲೆ ಹೇಳಿಕೆ ದಾಖಲಿಸಿ ಅಸುನೀಗಿದ್ದಾನೆ. ಹಾಗೂ ಅದರಂತೆ ಈ ಮೊದಲೇ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದ ಆನೇಕಲ್ ಪೊಲೀಸರು, ಕೃಷ್ಣಗಿರಿ ನ್ಯಾಯಾಲಯದಿಂದ ಬಂದ ಡೆತ್ ಡಿಕ್ಲರೇಷನ್ ನೋಟ್ ಆಧರಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತು ನವೀನ್ ಸ್ವಭಾವತಃ ಮದ್ಯವ್ಯಸನಿಯಾಗಿದ್ದು, ಇಬ್ಬರು ಮಕ್ಕಳ ತಂದೆಯಾಗಿದ್ದ. ಮನೆಗೆ ಸರಿಯಾಗಿ ಏನು ತಂದು ನೀಡುತ್ತಿರಲಿಲ್ಲ. ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಇದು ಆಗಾಗ ಮುಂದುವರೆದಿದ್ದರಿಂದ ಗ್ರಾಮಸ್ಥರ ನೇತೃತ್ವದಲ್ಲಿ ನ್ಯಾಯ ಪಂಚಾಯಿತಿಯಾಗಿ ಪೊಲೀಸ್ ಠಾಣಾ ಮೆಟ್ಟಿಲೇರಿತ್ತು. ಬಾಡಿಗೆ ಮನೆ ಮಾಡಿದರೆ ಮಾತ್ರ ಕಳುಹಿಸುವುದಾಗಿ ಹೆಂಡತಿ ಬೇಡಿಕೆ ಇಟ್ಟಿದ್ದಳು. ಇದು ನೆರವೇರದ ಕಾರಣ ಯುಗಾದಿ ಹಬ್ಬದ ನೆಪದಲ್ಲಿ ಹೆಂಡತಿ ಮಕ್ಕಳೊಂದಿಗೆ ಜನತಾ ಕಾಲನಿಯಲ್ಲಿರುವ ತನ್ನ ತವರು ಮನೆಯತ್ತ ಹೆಜ್ಜೆ ಹಾಕಿದ್ದಳು ಎಂದು ತಿಳಿದುಬಂದಿದೆ ಎನ್ನಲಾಗುತ್ತಿದೆ.
ಆದರೆ ಕಳೆದ ಏಪ್ರಿಲ್ 14 (ಮಂಗಳವಾರ) ದಂದು ಜನತಾ ಕಾಲೋನಿಯ ಅತ್ತೆ ಮನೆ ಬಳಿ ಬಂದು ತನ್ನ ಹೆಂಡತಿ – ಮಕ್ಕಳನ್ನು ತನ್ನ ಚೂಡೇನಹಳ್ಳಿ ಮನೆಗೆ ಕಳುಹಿಸಿಕೊಡುವಂತೆ ಕೇಳಿದೆ. ಅಷ್ಟೇ! ಆದರೆ, ಮಾವ, ಬಾಮೈದ, ಅತ್ತೆ, ತನ್ನ ಹೆಂಡತಿಯೂ ಸೇರಿದಂತೆ ಹೊಡೆದು ನಿಂದಿಸಿ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರೆಂದು ತನ್ನ ಸಾವಿನ ಮುಂಚಿನ ಹೇಳಿಕೆಯಲ್ಲಿ ನಮೂದಿಸಿದ್ದಾನೆ ಎನ್ನಲಾಗುತ್ತಿದೆ. ಈ ಕೊಲೆ ಪ್ರಕರಣ ದಾಖಲಿಸಿರುವ ಆನೇಕಲ್ ಪೊಲೀಸರು ಮಾವ ಸಂಪಂಗಿ ಬಾಮೈದ ಮುನೀಶನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಎನ್ನಲಾಗುತ್ತಿದೆ.
















