ಮನೆ ರಾಜ್ಯ ಮೇ 10ರಂದು ನೇರಳೆ ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ..!

ಮೇ 10ರಂದು ನೇರಳೆ ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ..!

0

ಬೆಂಗಳೂರು : ಮೇ 10ರಂದು ಬೆಳಗ್ಗೆ 7 ರಿಂದ 9 ಗಂಟೆವರೆಗೆ ನೇರಳೆ ಮಾರ್ಗದಲ್ಲಿ ಕಾಮಗಾರಿ ನಡೆಯಲಿದ್ದು, 2 ಗಂಟೆ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ, ರೈಲ್ವೆ ನಿಲ್ದಾಣ, ಸೆಂಟ್ರಲ್ ಕಾಲೇಜು ಮಾರ್ಗದಲ್ಲಿ ನಿರ್ವಹಣಾ ಕಾರ್ಯ ನಡೆಯಲಿದೆ. ಈ ತುರ್ತು ಕಾಮಗಾರಿ ಹಿನ್ನೆಲೆ ಬಾಲಗಂಗಾಧರ ನಾಥ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ನಡುವಿನ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಚಲಘಟ್ಟ – ವಿಜಯನಗರ, ಎಂಜಿ ರೋಡ್ – ವೈಟ್ ಫಿಲ್ಡ್, ಮಾದವರ – ಸಿಲ್ಕ್ ಇನ್ಸ್ಟಿಟ್ಯೂಟ್, ಆರ್‌ವಿ ರೋಡ್ – ಬೊಮ್ಮಸಂದ್ರ ನಡುವೆ ಎಂದಿನಂತೆ ಸಂಚಾರ ಇರಲಿದೆ. 9 ಗಂಟೆ ಬಳಿಕ ಸ್ಥಗಿತಗೊಂಡ ನಿಲ್ದಾಣಗಳಲ್ಲೂ ಮೆಟ್ರೋ ಸಂಚಾರ ಇರಲಿದೆ. ಈ ಪ್ರಯಾಣಿಕರು ಈ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣದ ಪೂರ್ವ ಯೋಜನೆ ಮಾಡಿಕೊಂಡು ಸಹಕರಿಸುವಂತೆ ಬಿಎಮ್‌ಆರ್‌ಸಿಎಲ್‌ ಅಧಿಕಾರಿಗಳು ಮನವಿ ಮಾಡಿದ್ದಾರೆ.