ಚೆನ್ನೈ : ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆ ಫಿಕ್ಸ್ ಆಗಿದೆ. ಬಹುಮತದ ಕೊರತೆ ಎದುರಿಸುತ್ತಿದ್ದ ವಿಜಯ್‌ಗೆ ಈಗ 119 ಶಾಸಕರ ಬೆಂಬಲ ಸಿಕ್ಕಿದೆ. ವಿಜಯ್ ಸರ್ಕಾರಕ್ಕೆ ಸಣ್ಣಪುಟ್ಟ ಪಕ್ಷಗಳ ಬೆಂಬಲ ಘೋಷಣೆಯಾಗಿದೆ. 112 ಇದ್ದ ಟಿವಿಕೆಗೆ 119 ಸದಸ್ಯರ ಬೆಂಬಲ ಸಿಕ್ಕಿದೆ. ಒಂದೆರಡು ದಿನಗಳಲ್ಲಿ ವಿಜಯ್ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಟಿವಿಕೆಗೆ ಬೆಂಬಲ – ಟವಿಕೆ – 107, ಕಾಂಗ್ರೆಸ್ – 05, ಸಿಪಿಐ – 02, ಸಿಪಿಎಂ – 02, ವಿಸಿಕೆ – 02, ಎಎಂಎಂಕೆ – 01, ಒಟ್ಟು – 118.., ಸಿಪಿಐ+ ಸಿಪಿಎಂ-4, ವಿಸಿಕೆ-2, ಎಂಡಿಎಂಕೆ-1 ಬೆಂಬಲ ಘೋಷಣೆಯಾಗಿದೆ. ಸಣ್ಣಪುಟ್ಟ ಪಕ್ಷಗಳ ಬೆಂಬಲದಿಂದಾಗಿ ವಿಜಯ್ ಸೇಫ್ ಆಗಿದ್ದಾರೆ. ಈ ಸಂಬಂಧ ರಾಜ್ಯಪಾಲರಿಗೆ ವಿಜಯ್ ಪತ್ರ ಬರೆದಿದ್ದು, ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಕೋರಿದ್ದಾರೆ.
















