ಮನೆ ರಾಜ್ಯ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಅಮಿತ್‌ ಶಾ ಅದ್ದೂರಿ ಚಾಲನೆ; ಬಿಎಸ್‌ವೈಗೆ ಸನ್ಮಾನ..!

ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಅಮಿತ್‌ ಶಾ ಅದ್ದೂರಿ ಚಾಲನೆ; ಬಿಎಸ್‌ವೈಗೆ ಸನ್ಮಾನ..!

0

ಚಿತ್ರದುರ್ಗ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣ ಮತ್ತು ಜನಸೇವೆಯನ್ನು ಗೌರವಿಸಲು ಆಯೋಜಿಸಿದ್ದ ‘ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅದ್ದೂರಿ ಚಾಲನೆ ನೀಡಿದರು. ಕೋಲ್ಕತ್ತಾದಿಂದ ನೇರವಾಗಿ ಚಿತ್ರದುರ್ಗಕ್ಕೆ ಅಮಿತ್‌ ಶಾ ಆಗಮಿಸಿದರು. ವೇದಿಕೆಗೆ ಬರುತ್ತಿದ್ದಂತೆ ಜನರು ಹರ್ಷೋದ್ಘಾರ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರನ್ನು ಅಮಿತ್‌ ಶಾ ಅಪ್ಪಿಕೊಂಡು ಅಭಿನಂದಿಸಿದರು. ಈ ವೇಳೆ ಕೈ ಮೇಲೆತ್ತಿ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಬಳಿಕ ದೀಪ ಬೆಳಗಿಸಿ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಅಮಿತ್‌ ಶಾ ಚಾಲನೆ ಕೊಟ್ಟರು. ಈ ವೇಳೆ ಸ್ವಾಮೀಜಿಗಳು ಸಾಥ್‌ ನೀಡಿದರು. ನಂತರ ಬಿಎಸ್‌ವೈ ಅವರು ಸ್ವಾಮೀಜಿಗಳ ಆಶೀರ್ವಾದ ಪಡೆದರು. ಬಿ.ಎಲ್.ಸಂತೋಷ್‌ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸಮಾರಂಭದಲ್ಲಿ ಯಡಿಯೂರಪ್ಪ ಕುರಿತು ಎರಡು ಪುಸ್ತಕ ಬಿಡುಗಡೆ ಮಾಡಲಾಯಿತು. ಸನ್ಮಾನಕ್ಕೆ ಚೇರ್‌ ಬೇಡ ಅಂತ ಬಿಎಸ್‌ವೈ ಹೇಳಿದ್ರು. ಕೊನೆಗೆ ಯಡಿಯೂರಪ್ಪ ಕೈ ಹಿಡಿದು ಬಂದು ಅಮಿತ್‌ ಶಾ ಚೇರ್‌ ಮೇಲೆ ಕೂರಿಸಿದರು. ಬಿಎಸ್‌ವೈಗೆ ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಕೇಂದ್ರ ಗೃಹ ಸಚಿವ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ, ಸುತ್ತೂರು ಮಠ ಸ್ವಾಮೀಜಿ, ನಿರಂಜನಾಪುರಿ ಸ್ವಾಮೀಜಿ, ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶಾಂತವೀರ ಮಹಾ ಸ್ವಾಮೀಜಿ, ಮುರುಗರಾಜೇಂದ್ರ ಸ್ವಾಮೀಜಿ, ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಬಸವ ಯಾದವನಾಂದ ಸ್ವಾಮೀಜಿ, ಬಸರ ಕುಂಬಾರ ಮಹಾಸ್ವಾಮಿ, ಹೊಸದುರ್ಗದ ಪುರುಷೋತ್ತಮಾನಂದ ಸ್ವಾಮೀಜಿ, ತಳಬಾಳು ಪಂಡಿತಾರಾಧ್ಯ ಶ್ರೀಗಳು, ವಚನಾನಂದ ಸ್ವಾಮೀಜಿ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿಗಳಾದ ರಾಧಾ ಮೋಹನ್ ಅಗರ್ವಾಲ್, ಸುಧಾಕರ್ ರೆಡ್ಡಿ,

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಸದಾನಂದಗೌಡ, ಮಾಜಿ ಸಂಸದ ಪ್ರಭಾಕರ್ ಕೋರೆ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಶ್ರೀರಾಮಲು, ಗೋವಿಂದ್ ಕಾರಜೋಳ, ಸಿಟಿ ರವಿ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಡಿಸಿಎಂ ಅಶ್ವಥ್ ನಾರಾಯಣ, ಮಾಜಿ ಸಂಸದ ಸಿದ್ದೇಶ್ವರ, ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಚಿವ ತಿಪ್ಪಾರೆಡ್ಡಿ, ಶಾಸಕ ಹೊಳಲ್ಕೆರೆ ಚಂದ್ರಪ್ಪ ಭಾಗವಹಿಸಿದ್ದಾರೆ.