ಮನೆ ಅಪರಾಧ ಶಾಸಕ ಜಮೀರ್‌ ಅಹ್ಮದ್ ಒಡೆತನದ 87 ಕೋಟಿ ಮೌಲ್ಯದ ಅಕ್ರಮ ಆಸ್ತಿ ಬಯಲು

ಶಾಸಕ ಜಮೀರ್‌ ಅಹ್ಮದ್ ಒಡೆತನದ 87 ಕೋಟಿ ಮೌಲ್ಯದ ಅಕ್ರಮ ಆಸ್ತಿ ಬಯಲು

0

ಬೆಂಗಳೂರು(Bengaluru):  ಜಮೀರ್‌ ಅಹ್ಮದ್‌ ಖಾನ್‌ ಅವರ ಮನೆ ಮೇಲೆ ಎಸಿಬಿ ದಾಳಿ ಮಾಡಿದ ವೇಳೆ  87 ಕೋಟಿ 44 ಲಕ್ಷ ರೂ ಮೌಲ್ಯದ ಅಕ್ರಮ ಆಸ್ತಿ ಬಯಲಾಗಿದೆ.

ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದಡಿ ಜಮೀರ್‌ ಗೆ ಸೇರಿದ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಲಾಗಿತ್ತು.

ಜುಲೈ 5 ನೇ ತಾರೀಖಿನಂದು  ಜಮೀರ್ ಒಡೆತನದ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದ 85 ಎಸಿಬಿ ಅಧಿಕಾರಿಗಳ 5 ತಂಡಗಳು ದಾಖಲೆಗಳನ್ನು ಪರೀಶೀಲಿಸಲಾಗಿತ್ತು.

ಈ  ಸಂದರ್ಭದಲ್ಲಿ ಜಮೀರ್ ಆಸ್ತಿ ಗಳಿಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.