ಮನೆ ರಾಜ್ಯ ಮೈಸೂರಿನ ರೌಡಿಶೀಟರ್‌ಗಳ ಮನೆ‌ ಮೇಲೆ ಪೊಲೀಸರು ದಾಳಿ..!

ಮೈಸೂರಿನ ರೌಡಿಶೀಟರ್‌ಗಳ ಮನೆ‌ ಮೇಲೆ ಪೊಲೀಸರು ದಾಳಿ..!

0

ಮೈಸೂರು : ಮೈಸೂರಿನ ರೌಡಿಶೀಟರ್ ಗಳ ಮನೆ‌ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದು, ಅಪರಾದ ಕೃತ್ಯಗಳಲ್ಲಿ ಪಾಲ್ಗೊಂಡರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಮನೆಗಳ ಮೇಲೆ ದಿಢೀರ್ ದಾಳಿ, “ಮತ್ತೆ ಗೂಂಡಾಗಿರಿ ಮಾಡಿದ್ರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಮೈಸೂರು ನಗರದಲ್ಲಿ ಹೆಚ್ಚುತ್ತಿರುವ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶದ ಮೇರೆಗೆ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.

ಹೆಬ್ಬಾಳು, ಸರಸ್ವತಿಪುರಂ, ವಿಜಯನಗರ, ಕೆ.ಆರ್, ಲಕ್ಷ್ಮಿಪುರಂ, ವಿದ್ಯಾರಣ್ಯಪುರಂ, ಕುವೆಂಪುನಗರ, ಎನ್.ಆರ್, ಮಂಡಿ, ಉದಯಗಿರಿ ಹಾಗೂ ದೇವರಾಜ ಠಾಣಾ ವ್ಯಾಪ್ತಿಯ ಹಲವಾರು ರೌಡಿಶೀಟರ್‌ಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಪೊಲೀಸರು, ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.