ಮನೆ ಉದ್ಯೋಗ ಕೇಂದ್ರ ಲೋಕಸೇವಾ ಆಯೋಗದಿಂದ ಸಿಎಸ್’ಇ ಮುಖ್ಯ ಪರೀಕ್ಷೆಗೆ ಡೀಟೇಲ್ಡ್ ಫಾರ್ಮ್ ಭರ್ತಿ ಮಾಡಲು ಲಿಂಕ್ ಬಿಡುಗಡೆ

ಕೇಂದ್ರ ಲೋಕಸೇವಾ ಆಯೋಗದಿಂದ ಸಿಎಸ್’ಇ ಮುಖ್ಯ ಪರೀಕ್ಷೆಗೆ ಡೀಟೇಲ್ಡ್ ಫಾರ್ಮ್ ಭರ್ತಿ ಮಾಡಲು ಲಿಂಕ್ ಬಿಡುಗಡೆ

0

ಕೇಂದ್ರ ಲೋಕಸೇವಾ ಆಯೋಗವು 2022ನೇ ಸಾಲಿನ ಸಿಎಸ್‌ಇ ಮುಖ್ಯ ಪರೀಕ್ಷೆಗೆ ಡೀಟೇಲ್ಡ್‌ ಅಪ್ಲಿಕೇಶನ್‌ ಫಾರ್ಮ್‌ ಭರ್ತಿ ಮಾಡಲು ಲಿಂಕ್ ಬಿಡುಗಡೆ ಮಾಡಿದೆ. ಪ್ರಿಲಿಮಿನರಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ಆಯೋಗವು 2022ನೇ ಸಾಲಿನ ಸಿವಿಲ್‌ ಸೇವೆಗಳ ಪ್ರಿಲಿಮಿನರಿ ಪರೀಕ್ಷೆಯನ್ನು 2022 ರ ಜೂನ್ 5 ರಂದು ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆ ಫಲಿತಾಂಶವನ್ನು ಜೂನ್ 22 ರಂದು ಬಿಡುಗಡೆ ಮಾಡಿತ್ತು. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಇದೀಗ ಸಿವಿಲ್ ಸೇವೆಗಳ ಮುಖ್ಯ ಪರೀಕ್ಷೆಗೆ ಡೀಟೇಲ್ಡ್‌ ಅಪ್ಲಿಕೇಶನ್‌ ಭರ್ತಿ ಮಾಡಲು ಲಿಂಕ್‌ ಅನ್ನು ಆಯೋಗವು ಬಿಡುಗಡೆ ಮಾಡಿದೆ.
ಯುಪಿಎಸ್‌ಸಿಯು ಸಿಎಸ್‌ಇ 2022 ಮುಖ್ಯ ಪರೀಕ್ಷೆಗೆ ಡೀಟೇಲ್ಡ್‌ ಅಪ್ಲಿಕೇಶನ್‌ (DAF-1) ಅನ್ನು ಜುಲೈ 15 ರವರೆಗೆ ಭರ್ತಿ ಮಾಡಬಹುದು.
ಯುಪಿಎಸ್‌ಸಿ ಸಿಎಸ್‌ಇ ಮೇನ್ಸ್‌ ಅಪ್ಲಿಕೇಶನ್‌ ಭರ್ತಿ ಮಾಡಲು ವೆಬ್‌ಸೈಟ್‌ https://upsconline.nic.in ಗೆ ಭೇಟಿ ನೀಡಬಹುದು.
ಅಭ್ಯರ್ಥಿಗಳು ಆನ್‌ಲೈನ್‌ ಅಪ್ಲಿಕೇಶನ್‌ ಭರ್ತಿ ಮಾಡುವ ಮುನ್ನ https://upsconline.nic.in ನಲ್ಲಿ ರಿಜಿಸ್ಟ್ರೇಷನ್‌ ಪಡೆಯಬೇಕು. ಹಾಗೂ ದಿನಾಂಕ 02-02-2022 ರಂದು ಬಿಡುಗಡೆ ಮಾಡಿದ ಯುಪಿಎಸ್‌ಸಿ ಸಿಎಸ್‌ಇ ನೋಟಿಫಿಕೇಶನ್‌ ಅನ್ನು ಪೂರ್ಣವಾಗಿ ಓದಿಕೊಂಡು ಅರ್ಜಿ ಸಲ್ಲಿಸಲು ಆಯೋಗ ತಿಳಿಸಿದೆ.
ಯುಪಿಎಸ್‌ಸಿ ಸಿಎಸ್‌ಇ ಮೇನ್ಸ್‌ 2022 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ ಜುಲೈ 6, ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನ. ಯುಪಿಎಸ್‌ಸಿ ಮುಖ್ಯ ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ.
ಯುಪಿಎಸ್‌ಸಿ ಸಿಎಸ್‌ಇ ಮೇನ್ಸ್‌ ಅರ್ಜಿ ಸಲ್ಲಿಕೆ ಹೇಗೆ? ವೆಬ್‌ ವಿಳಾಸ https://upsconline.nic.in/daf/daf1_csm_2022/login.php ಕ್ಕೆ ಭೇಟಿ ನೀಡಿ. ಓಪನ್‌ ಆದ ಪೇಜ್‌ನಲ್ಲಿ ಲಾಗಿನ್ ಐಡಿ, ಪಾಸ್‌ವರ್ಡ್‌ ನೀಡಿ ಲಾಗಿನ್ ಆಗಬೇಕು. ನಂತರ ಡೀಟೇಲ್ಡ್‌ ಅಪ್ಲಿಕೇಶನ್‌ ಭರ್ತಿ ಮಾಡಬೇಕು.
ಒಂದು ವೇಳೆ ರಿಜಿಸ್ಟ್ರೇಷನ್‌ ಆಗಿರದಿದ್ದಲ್ಲಿ https://upsconline.nic.in/daf/daf1_csm_2022/registration.php ಗೆ ಭೇಟಿ ನೀಡಿ, ರಿಜಿಸ್ಟ್ರೇಷನ್‌ ಪಡೆಯಬೇಕು. ನಂತರ ಮತ್ತೆ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಬೇಕು.