ಮನೆ ರಾಜ್ಯ ಎರಡನೇ ಆಷಾಡ ಶುಕ್ರವಾರ: ನಾಗಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ

ಎರಡನೇ ಆಷಾಡ ಶುಕ್ರವಾರ: ನಾಗಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ

0

ಮೈಸೂರು(Mysuru): ಸಾಂಸ್ಕೃತಿಕ ನಗರಿಯ ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಡ ಶುಕ್ರವಾರದ ಸಂಭ್ರಮ ಕಳೆಗಟ್ಟಿದ್ದು, ಮುಂಜಾನೆಯಿಂದಲೇ ನಾಡ ದೇವತೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಎರಡನೇ ಆಷಾಡ ಶುಕ್ರವಾರದಂದು ಚಾಮುಂಡಿ ತಾಯಿಗೆ ನಾಗ ಲಕ್ಷ್ಮಿ ಅಲಂಕಾರದಿಂದ ಕಂಗೊಳಿಸುತ್ತಿದ್ದು,  ತಾಯಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಮಾಡಲಾಯಿತು.

ಬೆಳಗ್ಗೆ 5.30 ರಿಂದ ಭಕ್ತರಿಗೆ ಚಾಮುಂಡಿ ತಾಯಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಇಂದು ರಾತ್ರಿ 9.30 ರವರೆಗೆ ಭಕ್ತರು ತಾಯಿ ದರ್ಶನ ಪಡೆಯಬಹುದಾಗಿದೆ.

ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿದ್ದು, ಮುಂಜಾಗೃತ ಕ್ರಮವಾಗಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಚಾಮುಂಡೇಶ್ವರಿ ದರ್ಶನ ಪಡೆದ ರಾಜವಂಶಸ್ಥ ಯದುವೀರ್: ಎರಡನೇ ಆಷಾಡ ಶುಕ್ರವಾರದ ಹಿನ್ನೆಲೆಯಲ್ಲಿಚಾಮುಂಡಿ ಬೆಟ್ಟಕ್ಕೆರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ, ನಾಡದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ಸಂದರ್ಭ ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ಯೋಜನೆ ಜಿಲ್ಲಾಡಳಿತ ಕೈಬಿಟ್ಟ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ಸರ್ಕಾರದ ನಿರ್ಧಾರ ಸರಿ ಇದೆ. ಪರಿಸರ ಸಂರಕ್ಷಣೆಯ ಜೊತೆಗೆ ಚಾಮುಂಡಿ ಬೆಟ್ಟದ ಅಭಿವೃದ್ಧಿಯಾಗಬೇಕು. ಇದು ಪ್ರವಾಸಿ ತಾಣವಲ್ಲ. ಧಾರ್ಮಿಕ ಸ್ಥಳ. ಇದನ್ನು ಹಾಗೇಯೇ ಸರ್ಕಾರ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರದ ನಿರ್ಣಯಗಳು ಸರಿ ಇದೆ ಎಂದು ಹೇಳಿದರು.

ಚಾಮುಂಡಿ ಬೆಟ್ಟಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಭೇಟಿ ನೀಡಿ, ನಾಡದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ,‌ ಮೇಯರ್ ಸುನಂದಾ ಪಾಲನೇತ್ರ ಇದ್ದರು.

ಹಿಂದಿನ ಲೇಖನಕೇಂದ್ರ ಲೋಕಸೇವಾ ಆಯೋಗದಿಂದ ಸಿಎಸ್’ಇ ಮುಖ್ಯ ಪರೀಕ್ಷೆಗೆ ಡೀಟೇಲ್ಡ್ ಫಾರ್ಮ್ ಭರ್ತಿ ಮಾಡಲು ಲಿಂಕ್ ಬಿಡುಗಡೆ
ಮುಂದಿನ ಲೇಖನಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಬಾಲಕಿ ಪ್ರೌಢಾವಸ್ಥೆಗೆ ಬಂದು ಮೇಜರ್ ಆಗಿದ್ದರೂ ಪೋಕ್ಸೊ ಕಾಯ್ದೆ ಅನ್ವಯ: ದೆಹಲಿ ಹೈಕೋರ್ಟ್