ಮನೆ ರಾಜ್ಯ ಉಪಚುನಾವಣೆ ಎಫೆಕ್ಟ್‌ನಿಂದ ಸರ್ಕಾರ ಹಿಜಬ್‌ಗೆ ಅನುಮತಿ ಕೊಟ್ಟಿದೆ; ಹೆಚ್‌ಡಿಕೆ

ಉಪಚುನಾವಣೆ ಎಫೆಕ್ಟ್‌ನಿಂದ ಸರ್ಕಾರ ಹಿಜಬ್‌ಗೆ ಅನುಮತಿ ಕೊಟ್ಟಿದೆ; ಹೆಚ್‌ಡಿಕೆ

0

ಬೆಂಗಳೂರು : ದಾವಣಗೆರೆ ಉಪಚುನಾವಣೆ ಎಫೆಕ್ಟ್ ನೋಡಿ ಕಾಂಗ್ರೆಸ್ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಬ್‌ಗೆ ಅವಕಾಶ ಕೊಟ್ಟಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸರ್ಕಾರದ ನಡೆಯನ್ನ ವಿರೋಧಿಸಿದ್ದಾರೆ. ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನಲ್ಲಿ ಹಿಜಬ್ ಕೇಸ್ ಇದೆ. ಆ ಕೇಸ್‌ಗೆ ಕಾಯದೇ ಇವರು ಹೇಗೆ ಹೊಸ ಆದೇಶ ಮಾಡಿದ್ರು. ವಿದ್ಯಾರ್ಥಿಗಳ ಹಿತಕ್ಕಾಗಿ ಅಂತಾರೆ.

ಹಾಗಾದರೆ 3 ವರ್ಷ ಆಯ್ತು ಸರ್ಕಾರ ಬಂದು ಇಷ್ಟು ದಿನ ಏನ್ ಮಾಡ್ತಾ ಇದ್ರು? ದಾವಣಗೆರೆ ಎಫೆಕ್ಟ್ ಇದಾ? ಅದಕ್ಕೆ ಹೆದರಿಕೊಂಡು ಈಗ ಮಾಡಿದ್ದಾರೆ. ಒಂದು ಸಮುದಾಯಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಜಬ್ ವಿಚಾರ ನಾನು ಅಧಿವೇಶನದಲ್ಲಿ ಹಿಂದೆ ಚರ್ಚೆ ಮಾಡಿದ್ದೆ. ನಾನು ಎಲ್ಲಾ ಧರ್ಮಕ್ಕೆ ಗೌರವ ಕೊಡುವವನು. ಮೊನ್ನೆ ಸಿಇಟಿ ಎಕ್ಸಾಂನಲ್ಲಿ ಜನಿವಾರ ವಿಚಾರದಲ್ಲಿ ರಾಜಕೀಯ ಮಾಡಿಸಿ ಅದನ್ನ ಮುಂದೆ ಇಟ್ಟುಕೊಂಡು ಈಗ ಹೊಸ ಆದೇಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಗ್ಯಾರಂಟಿ ಎಲ್ಲವೂ ದುಡ್ಡು ಹೊಡೆಯುವ ಕಾರ್ಯಕ್ರಮ. ಬೆಂಗಳೂರು ಜನ ಇದನ್ನ ನಂಬಬೇಡಿ. ಇವರ ಮಾತು ಕೇಳಿ ಖಾತೆ ಬದಲಾವಣೆ ಯಾರೂ ಮಾಡಿಕೊಳ್ಳಬೇಡಿ. ಸಾಲ ಸೋಲ ಮಾಡಿ ಯಾರೂ ಹಣ ಕಟ್ಟಬೇಡಿ. ನಾವು ಅಧಿಕಾರಕ್ಕೆ ಬಂದೇ ಬರ್ತಿವಿ. ಜನರಿಗೆ ಹೇಗೆ ಅನುಕೂಲ ಆಗೋ ಹಾಗೇ ನಾವು ಮಾಡ್ತೇವೆ. ಬೆಂಗಳೂರಿನ ನಾಗರಿಕರಿಗೆ ಮನವಿ ಮಾಡ್ತೇನೆ ಇವರದ್ದೆಲ್ಲ ದುಡ್ಡು ಹೊಡೆಯೋ ಕಾರ್ಯಕ್ರಮ ಎಂದಿದ್ದಾರೆ.

ಇಂದು ಬೆಂಗಳೂರು ನಗರವನ್ನು ಯಾವ ಪರಿಸ್ಥಿತಿಗೆ ತಂದಿದ್ದಾರೆ ಅಂದ್ರೆ ಇವರಿಗೆ ಏನಾದರೂ ಕಿಂಚಿತ್ತು ಜನಗಳ ಬಗ್ಗೆ ಗೌರವ ಇದೆಯಾ? ಭಯ, ಭಕ್ತಿ ಇದೆಯಾ? ಬೆಂಗಳೂರು ಜನರು ಯಾರೂ ದುಡ್ಡು ಕಟ್ಟುವುದಕ್ಕೆ ಹೋಗಬೇಡಿ. ಎರಡು ವರ್ಷ ಸುಮ್ಮನೆ ಇರಿ ಮುಂದೆ ಒಳ್ಳೆಯದಾಗುತ್ತದೆ. ನಾನು 120, 130 ಸ್ಥಾನ ತಗೊಂಡು ಅಧಿಕಾರಕ್ಕೆ ಬರಲೇ ಇಲ್ಲ. ನಾನು 38 ಸೀಟ್, 40 ಸೀಟ್ ಗೆದ್ದೆ ಬಂದು ಮುಖ್ಯಮಂತ್ರಿಯಾಗಿರೋದು.

ಬೆಂಗಳೂರು ನಾಗರಿಕರು ನಿಮಗೆ ಹೊರೆ ಆಗುವ ರೀತಿಯಲ್ಲಿ ದುಡ್ಡು ಹೊಡೆಯುವ ಸರ್ಕಾರದ ಕಾರ್ಯಕ್ರಮಕ್ಕೆ ಯಾವುದಕ್ಕೂ ತಲೆಬಾಗಬೇಡಿ. ಇನ್ಮೇಲೆ ಈ ರಾಜ್ಯದಲ್ಲಿ ಒಳ್ಳೆ ಸರ್ಕಾರ ಬರುವ ದಿನಗಳು ದೂರ ಇಲ್ಲ ಎಂಬ ವಿಶ್ವಾಸ ನನಗೆ ಇದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ರೀತಿಯಲ್ಲಿ ನಿರ್ಧಾರ ನಾವು ತೆಗೆದುಕೊಳ್ಳುತ್ತೇವೆ. ನಿಮಗೆ ಹೊರೆ ಆಗದ ರೀತಿಯಲ್ಲಿ ಅನುಕೂಲ ಮಾಡುವ ಸರ್ಕಾರ ತರಲಿಕ್ಕೆ ನಾನು ಹೋರಾಟ ಮಾಡ್ತಿದ್ದೇನೆ ಎಂದು ಹೇಳಿದ್ದಾರೆ.

ನಾನು ಮುಖ್ಯಮಂತ್ರಿ ಆಗೋದು, ಬಿಡೋದು ಆಮೇಲೆ ಚರ್ಚೆ ಮಾಡಿಕೊಳ್ಳೋಣ. ನಾನು ಈಗಾಗಲೇ ಎರಡು ಬಾರಿ ಸಿಎಂ ಆಗಿದ್ದೇನೆ. ಈ ರಾಜ್ಯಕ್ಕೆ ಒಳ್ಳೆಯದಾಗಬೇಕು ಅನ್ನುವ ದೃಷ್ಟಿಯಿಂದ ಬಿಜೆಪಿ ಜೊತೆ ನಮ್ಮ ಸಂಬಂಧ ಇಟ್ಕೊಂಡಿದ್ದೇನೆ. ಈ ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇನೆ. ನಾವೇನೋ ಸಂಪಾದನೆ ಮಾಡಬೇಕು ಅಂತ ಅಲ್ಲ. ಎರಡು ಬಾರಿ ನಾನು ಮುಖ್ಯಮಂತ್ರಿಯಾಗಿದ್ದಾಗ ಹೇಗೆ ನಡೆದುಕೊಂಡಿದ್ದೇನೆ ಎಂದು ಎಲ್ಲರೂ ನೋಡಿದ್ದಾರೆ. ನನಗೂ ಒಂದು ಬಾರಿ ಪೇಪರ್, ಪೆನ್ನು ಕೊಡಿ ಅಂತ ಕೇಳ್ತಿದ್ದಾರಲ್ಲ. ಈಗ ಜನರು ಪೇಪರ್ ಪೆನ್ನು ಕೊಟ್ಟಿದ್ದಾರಲ್ಲ ಇಂಥ ಕೆಲಸ ಮಾಡೋದಕ್ಕಾ? ಎಂದು ವಾಗ್ದಾಳಿ ನಡೆಸಿದ್ದಾರೆ.