ವಾಷಿಂಗ್ಟನ್ : ಹಿರಿಯ ಐಸಿಸ್ ಕಮಾಂಡರ್ನನ್ನು ಅಮೆರಿಕ ಮತ್ತು ನೈಜೀರಿಯಾ ಪಡೆಗಳು ಹತ್ಯೆ ಮಾಡಿವೆ ಎಂದು ಯುಎಸ್ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ನನ್ನ ನಿರ್ದೇಶನದ ಮೇರೆಗೆ ಧೈರ್ಯಶಾಲಿ ಅಮೆರಿಕನ್ ಪಡೆಗಳು ಮತ್ತು ನೈಜೀರಿಯಾದ ಸಶಸ್ತ್ರ ಪಡೆಗಳು ವಿಶ್ವದ ಅತ್ಯಂತ ಸಕ್ರಿಯ ಭಯೋತ್ಪಾದಕನನ್ನು ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಿವೆ ಎಂದು ಟ್ರಂಪ್ ಶುಕ್ರವಾರ ET ಟ್ರುತ್ ಸೋಶಿಯಲ್ ಪೋಸ್ಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಐಸಿಎಸ್ ಎರಡನೇ ಕಮಾಂಡರ್ ಅಬು ಬಿಲಾಲ್ ಅಲ್ ಮಿನುಕಿ ಹತ್ಯೆಯಾಗಿದ್ದಾನೆ. ಉಗ್ರ ಇನ್ಮುಂದೆ ಆಫ್ರಿಕಾ ಜನರನ್ನು ಭಯಭೀತಗೊಳಿಸಲ್ಲ. ಅಮೆರಿಕರನ್ನು ಟಾರ್ಗೆಟ್ ಮಾಡಿ ಕಾರ್ಯಾಚರಣೆ ನಡೆಸಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.
ಅಮೆರಿಕದ ವಿದೇಶಿ ಆಸ್ತಿ ನಿಯಂತ್ರಣ ಕಚೇರಿಯ ದಾಖಲೆಗಳ ಪ್ರಕಾರ, ಅಲ್-ಮಿನುಕಿ 1982 ರಲ್ಲಿ ಈಶಾನ್ಯ ನೈಜೀರಿಯಾದ ಬೊರ್ನೊ ರಾಜ್ಯದಲ್ಲಿ ಜನಿಸಿದ್ದ. ಇದು ಕ್ಯಾಮರೂನ್, ಚಾಡ್ ಮತ್ತು ನೈಜರ್ನ ಗಡಿಯಾಗಿದೆ.
ದಾಳಿ ಎಲ್ಲಿ ನಡೆದಿದೆ ಎಂದು ಟ್ರಂಪ್ ನಿರ್ದಿಷ್ಟಪಡಿಸಿಲ್ಲ. ಅಲ್-ಮಿನುಕಿ ಆಫ್ರಿಕಾದಲ್ಲಿ ಅಡಗಿಕೊಳ್ಳಬಹುದೆಂದು ಭಾವಿಸಿದ್ದರು. ಆದರೆ, ಆತ ಏನು ಮಾಡುತ್ತಿದ್ದಾನೆಂದು ನಮಗೆ ತಿಳಿಸುವ ಮೂಲಗಳು ನಮ್ಮಲ್ಲಿದ್ದವು. ಈ ವಿಚಾರ ಆತನಿಗೆ ಗೊತ್ತಿರಲಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ. ನೈಜೀರಿಯಾ ಸರ್ಕಾರದ ಸಹಕಾರಕ್ಕೆ ಟ್ರಂಪ್ ಧನ್ಯವಾದ ಅರ್ಪಿಸಿದ್ದಾರೆ.
















