ಮನೆ ರಾಜ್ಯ ಹೇಮಾವತಿ ಜಲಾಶಯ ಭರ್ತಿಗೆ ೬.೫೬ ಅಡಿ ಬಾಕಿ: ಯಾವುದೇ ಸಂದರ್ಭದಲ್ಲಿ ನದಿಗೆ ನೀರು

ಹೇಮಾವತಿ ಜಲಾಶಯ ಭರ್ತಿಗೆ ೬.೫೬ ಅಡಿ ಬಾಕಿ: ಯಾವುದೇ ಸಂದರ್ಭದಲ್ಲಿ ನದಿಗೆ ನೀರು

0

ಹಾಸನ(Hassan): ಹೇಮಾವತಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ಒಳಹರಿವು ಹೆಚ್ಚಾಗಿದೆ. ಯಾವುದೇ ಸಂದರ್ಭದಲ್ಲಿ ಹೇಮಾವತಿ ಜಲಾಶಯದಿಂದ ನದಿಗೆ ನೀರನ್ನು ಬಿಡಲಾಗುವುದು. ನದಿ ಪಾತ್ರದ ಜನರು ಮುನ್ನೆಚ್ಚರಿಕೆಯಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಂದು ಕಾವೇರಿ ನೀರಾವರಿ ನಿಗಮದ ಸೂಪರಿಂಟೆಂಡೆಂಟ್ ಎಂಜಿನಿಯರ್ ತಿಳಿಸಿದ್ದಾರೆ.
ಜಲಾಶಯದ ಗರಿಷ್ಠ ಮಟ್ಟ ೨,೯೨೨ ಅಡಿ ಇದ್ದು, ಭರ್ತಿಗೆ ಇನ್ನು ೬.೫೬ ಅಡಿ ಬಾಕಿ ಇದೆ. ಒಳಹರಿವು ೧೮,೨೨೧ ಕ್ಯುಸೆಕ್ ಇದೆ. ಸದ್ಯಕ್ಕೆ ೩೧ ಟಿಎಂಸಿ ನೀರು ಸಂಗ್ರಹವಾಗಿದೆ. ಯಾವುದೇ ಸಂದರ್ಭದಲ್ಲಿ ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರನ್ನು ಬಿಡಲಾಗುವುದು ತಿಳಿಸಿದ್ದಾರೆ.