ಮನೆ ಅಂತಾರಾಷ್ಟ್ರೀಯ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಸಾವು

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಸಾವು

0

ಟೋಕಿಯೊ(Tokyo): ಗುಂಡಿನ ದಾಳಿಗೊಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಅಸುನೀಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
೮ ವರ್ಷಗಳವರೆಗೆ ಜಪಾನ್ ಪ್ರಧಾನಿಯಾಗಿದ್ದ ಶಿಂಜೊ ಶುಕ್ರವಾರ ಬೆಳಗ್ಗೆ ನಾರಾ ಪಟ್ಟಣದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದಾಗ ಅಪರಿಚಿತನೋರ್ವ ಗುಂಡಿನ ದಾಳಿ ನಡೆಸಿದ್ದಾನೆ. ಈ ದಾಳಿ ನಡೆಸಿದ ೪೧ ವರ್ಷದ ವ್ಯಕ್ತಿಯನ್ನು ಪೊಲೀಸರು ತಕ್ಷಣ ಬಂಧಿಸಿದ್ದರು.
ಶಿಂಜೋ ಅವರ ಮೇಲೆ ಎರಡು ಬಾರಿ ಗುಂಡು ಹಾರಿಸಲಾಗಿದೆ. ಎರಡನೇ ಗುಂಡು ಹಿಂಬದಿಯಿಂದ ದೇಹ ಹೊಕ್ಕಿದ್ದು, ಅದರಿಂದ ಅವರು ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಾಳಿ ನಡೆಸಿದ ದುಷ್ಕರ್ಮಿಯನ್ನು ನಾರಾ ಪಟ್ಟಣದ ರಹಿವಾಸಿ ಯಾಮಾಗಮಿ ಟೆಟ್ಸುಯಾ ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಸಿಕ್ಕ ಗನ್ ಸ್ಥಳೀಯವಾಗಿ ಕೈಯಿಂದ ತಯಾರಿಸಿರುವ ರೀತಿಯಲ್ಲಿದೆ ಎಂದು ಎನ್‌ಎಚ್‌ಕೆ ಮಾಧ್ಯಮಗಳ ಮೂಲಗಳಿಂದ ತಿಳಿದು ಬಂದಿದೆ.
ಅಬೆ ಅವರನ್ನು ಮೆಡೆವ್ಯಾಕ್‌ನಿಂದ ಕಾಶಿಹಾರಾ ಪಟ್ಟಣದ ನಾರಾ ಮೆಡಿಕಲ್ ಯುನಿವರ್ಸಿಟಿ ಹಾಸ್ಪಿಟಲ್?ಗೆ ಸ್ಥಳಾಂತರಿಸಲಾಗಿತ್ತು. ಆದಾಗ್ಯೂ ಗಂಭೀರವಾಗಿ ಗಾಯಗೊಂಡ ಅವರು ಕೊನೆಯುಸಿರೆಳೆದಿದ್ದಾರೆ.

ಹಿಂದಿನ ಲೇಖನಹೇಮಾವತಿ ಜಲಾಶಯ ಭರ್ತಿಗೆ ೬.೫೬ ಅಡಿ ಬಾಕಿ: ಯಾವುದೇ ಸಂದರ್ಭದಲ್ಲಿ ನದಿಗೆ ನೀರು
ಮುಂದಿನ ಲೇಖನಮಡಿಕೇರಿಯಲ್ಲಿ ಕಡಿಮೆಯಾದ ಮಳೆ: ಬಿರುಸು ಪಡೆದ ಮಣ್ಣು ತೆರವು ಕಾರ್ಯಾಚರಣೆ