ಮನೆ ಸುದ್ದಿ ಜಾಲ ಬಂಧಿತ ವಿವಾಹಿತ ಪ್ರೇಮಿಯ ಬಿಡುಗಡೆಗಾಗಿ ಹಠ – ಮೊಬೈಲ್ ಟವರ್ ಏರಿ ಯುವತಿಯ ಹೈಡ್ರಾಮಾ..!

ಬಂಧಿತ ವಿವಾಹಿತ ಪ್ರೇಮಿಯ ಬಿಡುಗಡೆಗಾಗಿ ಹಠ – ಮೊಬೈಲ್ ಟವರ್ ಏರಿ ಯುವತಿಯ ಹೈಡ್ರಾಮಾ..!

0

​ತಾನು ಪ್ರೀತಿಸಿದ ವಿವಾಹಿತ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆಂಬ ಕಾರಣಕ್ಕೆ ಆಕ್ರೋಶಗೊಂಡ ಯುವತಿಯೊಬ್ಬಳು, ಆತನ ಬಿಡುಗಡೆಗೆ ಆಗ್ರಹಿಸಿ ಬರೋಬ್ಬರಿ 90 ನಿಮಿಷಗಳ ಕಾಲ ಹೈವೋಲ್ಟೇಜ್ ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಈ ನಾಟಕೀಯ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ​ಈ ಹೈವೋಲ್ಟೇಜ್ ಹಠಕ್ಕೆ ಬಿದ್ದ ಯುವತಿ. ಜಾರ್ಖಂಡ್‌ನ ಧನ್ಬಾದ್ ನಿವಾಸಿಯಾದ ದೇವಂತಿ ಕುಮಾರಿ ಎಂಬಾಕೆಯೇ

ಈ ಸ್ಥಳೀಯರ ಮಾಹಿತಿಯ ಪ್ರಕಾರ, ದೇವಂತಿ ಕುಮಾರಿ ಪ್ರೀತಿಸುತ್ತಿದ್ದ ಯುವಕ ಈಗಾಗಲೇ ಮದುವೆಯಾಗಿದ್ದ ವ್ಯಕ್ತಿಯಾಗಿದ್ದ ಪ್ರೇಮಿ. ಇತ್ತೀಚೆಗೆ ನಿಮಿಯಾಘಾಟ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದರು. ತನ್ನ ಪ್ರಿಯಕರನನ್ನು ಪೊಲೀಸರು ಹಿಡಿದುಕೊಂಡು ಹೋಗಿದ್ದನ್ನು ಸಹಿಸದ ದೇವಂತಿ, ಆತನನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದು ನೇರವಾಗಿ ಮೊಬೈಲ್ ಟವರ್ ಹತ್ತಿ ಕೂತಿದ್ದಾಳೆ.

​ಯುವತಿ ಟವರ್ ಹತ್ತಿರುವುದನ್ನು ಕಂಡು ಸ್ಥಳೀಯರು ತೀವ್ರ ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ ಮತ್ತು ಗ್ರಾಮಸ್ಥರು ಎಷ್ಟೇ ವಿನಂತಿಸಿದರೂ ಆಕೆ ಕೆಳಗಿಳಿಯಲು ನಿರಾಕರಿಸಿದ್ದಾಳೆ. ತನ್ನ ಪ್ರಿಯಕರನನ್ನು ಜೈಲಿನಿಂದ ಬಿಡುಗಡೆ ಮಾಡುವುದಷ್ಟೇ ಅಲ್ಲದೆ, ಆತನ ಜೊತೆ ತನಗೆ ಮದುವೆ ಮಾಡಿಸಿಕೊಡಬೇಕು ಎಂದು ಟವರ್ ಮೇಲಿಂದಲೇ ಹೊಸ ಬೇಡಿಕೆ ಇಟ್ಟಿದ್ದಾಳೆ. ಈ ಹೈಡ್ರಾಮಾ ನೋಡಲು ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು.

​ಈ ವಿಷಯದ ಗಾಂಭೀರ್ಯತೆ ಅರಿತು ಸ್ಥಳಕ್ಕೆ ಧಾವಿಸಿದ ನಿಮಿಯಾಗಾಟ್ ಪೊಲೀಸ್ ಠಾಣಾ ಉಸ್ತುವಾರಿ ಅಂಕಿತ್ ಕುಮಾರ್ ಸಿನ್ಹಾ ಮತ್ತು ಗ್ರಾಮದ ಮುಖ್ಯಸ್ಥ ಅಹ್ಮದ್ ಅಲಿ ಅವರು ಯುವತಿಯ ಮನವೊಲಿಸಲು ಹರಸಾಹಸ ಪಟ್ಟಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ (90 ನಿಮಿಷ) ಸತತವಾಗಿ ಮಾತುಕತೆ ನಡೆಸಿ, ಕೌನ್ಸಿಲಿಂಗ್ ಮಾಡಿದ ನಂತರ ಯುವತಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ​ಟವರ್‌ನಿಂದ ಕೆಳಗಿಳಿಸಿದ ಬೆನ್ನಲ್ಲೇ ಪೊಲೀಸರು ಆಕೆಯನ್ನು ಠಾಣೆಗೆ ಕರೆದೊಯ್ದಿದ್ದು, ಆಕೆಯ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಿ ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿದ್ದಾರೆ.