ಮನೆ ಪ್ರಕೃತಿ ವಿಜಯಪುರದಲ್ಲಿ ಭೂಕಂಪ: ೪.೯ ರಷ್ಟು ತೀವ್ರತೆ ದಾಖಲು

ವಿಜಯಪುರದಲ್ಲಿ ಭೂಕಂಪ: ೪.೯ ರಷ್ಟು ತೀವ್ರತೆ ದಾಖಲು

0

ವಿಜಯಪುರ(Vijayapura): ಶನಿವಾರ ಜಿಲ್ಲೆಯ ವಿವಿದೆಡೆ ಬೆಳಿಗ್ಗೆ ೬.೨೨ರಿಂದ ೬.೨೩ರ ವೇಳೆಗೆ ಭೂಮಿ ೧೦ ಸೆಕೆಂಡ್ ಗೂ ಅಧಿಕ ಸಮಯ ಕಂಪಿಸಿದ್ದು, ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೪.೯ ರಷ್ಟು ದಾಖಲಾಗಿದೆ.
ಶನಿವಾರ ಬೆಳ್ಳಂಬೆಳಿಗ್ಗೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭೂಕಂಪನದ ಅನುಭವವಾಗಿದೆ.
ಭೂಮಿಯ ಕಂಪನ ಮತ್ತು ಭಾರೀ ಶಬ್ಧದಿಂದ ಬೆಚ್ಚಿ ಬಿದ್ದು ಆತಂಕಗೊಂಡ ಜನತೆ ಮನೆಯಿಂದ ಆಚೆ ಓಡಿ ಬಂದಿದ್ದಾರೆ.
ಶನಿವಾರ ಬೆಳಿಗ್ಗೆ ೬.೨೨ಕ್ಕೆ ವಿಜಯಪುರ ನಗರ ಕೇಂದ್ರಿತವಾಗಿ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೪.೯ ರಷ್ಟು ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಖಚಿತಪಡಿಸಿದೆ.
೯.೯ ಕಿ.ಮೀ. ಭೂಮಿಯ ಆಳದಲ್ಲಿ ಭೂಕಂಪನ ಸಂಭವಿಸಿದೆ. ವಿಜಯಪುರ ನಗರ ಸೇರಿದಂತೆ ಬಸವನ ಬಾಗೇವಾಡಿ, ತಿಕೋಟಾ, ಬಬಲೇಶ್ವರ, ಜಮಖಂಡಿ, ಹೊರ್ತಿ, ನೆರೆಯ ಮಹಾರಾಷ್ಟ್ರದ ಸೋಲಾಪುರ, ಪುಣೆ, ಪಂಢರಪುರದಲ್ಲೂ ಭೂಕಂಪನದ ಅನುಭವವಾಗಿದೆ.