ಮನೆ ಕಾನೂನು ನ್ಯಾಯಾಧೀಶರ ಮಾತು ಕೇಳಿ ವಿಚ್ಚೇದನ ನಿರ್ಧಾರದಿಂದ ದೂರ ಸರಿದ ದಂಪತಿ

ನ್ಯಾಯಾಧೀಶರ ಮಾತು ಕೇಳಿ ವಿಚ್ಚೇದನ ನಿರ್ಧಾರದಿಂದ ದೂರ ಸರಿದ ದಂಪತಿ

0

ಡಿವೋರ್ಸ್‌ ಗೆ ಬಂದ ಜೋಡಿಗಳಿಬ್ಬರು ನ್ಯಾಯಾಧೀಶರು ನೀಡಿದ ಸಲಹೆಯಂತೆ ಇಬ್ಬರು ತಮ್ಮ ನಿರ್ಧಾರವನ್ನ ಬದಲಿಸಿ ಮತ್ತೆ ಒಂದಾಗಿ ಬದುಕುವ ನಿರ್ಧಾರಕ್ಕೆ ಬಂದಿದ್ದಾರೆ.

ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಜೋಡಿಯ ಪ್ರಕರಣವನ್ನು ಕೂಲಂಕುಷವಾಗಿ ಗಮನಿಸಿದ ನ್ಯಾಯಾಧೀಶರಾದ ಕೌಶಿಕ್ ಚಂದಾ ಅವರು, ಜೋಡಿಯನ್ನ ತಮ್ಮ ಕೋಣೆಗೆ ಕರೆದು ಇಬ್ಬರ ಸಮಸ್ಯೆಯನ್ನೂ ಆಲಿಸಿದ್ದಾರೆ. ಕೊನೆಗೆ ಇಬ್ಬರ ಮನಸ್ಸಿನಲ್ಲಿ ಇರುವ ಭಿನ್ನಾಭಿಪ್ರಾಯವನ್ನ ಗಮನಿಸಿದ ನ್ಯಾಯಾಧೀಶರಾದ ಚಂದಾ ಅವರು ಇಬ್ಬರ ಗೊಂದಲಗಳನ್ನು ದೂರ ಮಾಡಿದ್ದಾರೆ. ಪರಿಣಾಮ ಇಬ್ಬರು ಮತ್ತೆ ಒಂದಾಗೋ ನಿರ್ಧಾರಕ್ಕೆ ಬಂದಿದ್ದಾರೆ. ಜೊತೆಗೆ ಇಬ್ಬರೂ ಏಕಾಂತದಲ್ಲಿ ಒಟ್ಟಿಗೆ ಸಮಯ ಕಳೆಯಿರಿ, ಮನಸ್ಸು ಬಿಚ್ಚಿ ಮಾತನಾಡಿ ಎಂಬ ಸಲಹೆಯನ್ನು ನ್ಯಾಯಾಧೀಶರು ನೀಡಿದ್ದಾರೆ.

ಇವರದ್ದು 8 ವರ್ಷಗಳ ಪ್ರೇಮವಿವಾಹ. ಉತ್ತಮ ಕುಟುಂಬ ಹಿನ್ನೆಲೆವುಳ್ಳ ಈ ಜೋಡಿ ಈಗ ವಿಚ್ಛೇದನ ಬೇಕು ಅಂತ ಕೋಲ್ಕತ್ತಾ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಇವರು ಒಬ್ಬರಿಗೋಸ್ಕರ ಇನ್ನೊಬ್ಬರು ಸಮಯವನ್ನ ಮೀಸಲಾಗಿಡುತ್ತಿರಲಿಲ್ಲ. ಯಾವಾಗಲೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿ. ಇಬ್ಬರೂ ಒಬ್ಬರನ್ನೊಬ್ಬರು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದರು. ಇದೇ ಕಾರಣಕ್ಕೆ ಈಗ ಇವರು ಒಟ್ಟಿಗೆ ಇರಲು ಸಾಧ್ಯವಾಗದೇ ವಿಚ್ಛೇದನ ನಿರ್ಧಾರಕ್ಕೆ ಬಂದಿದ್ದಾರೆ.

ಪತಿ ಸರ್ಕಾರಿ ಅಧಿಕಾರಿ, ಪತ್ನಿ ಐಟಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮದುವೆ ಆದ ಕೆಲವೇ ಕೆಲವು ತಿಂಗಳ ನಂತರ ಇವರಿಬ್ಬರ ನಡುವೆ ಉಂಟಾದ ಮನಸ್ಥಾಪದಿಂದಾಗಿ ಇಬ್ಬರೂ ಬೇರೆ-ಬೇರೆಯಾಗಿದ್ದರು. ಆದರೆ ಈಗ ಏಳು ವರ್ಷಗಳ ನಂತರ ಪತ್ನಿ, ಪತಿಯ ವಿರುದ್ಧ ದೂರನ್ನು ಕೊಟ್ಟಿದ್ದಾರೆ.

ಮದುವೆ ಸಮಾರಂಭದಲ್ಲಿ ತೊಟ್ಟಿದ್ದ ಆಭರಣಗಳನ್ನ ಪತಿ ಕೊಟ್ಟಿಲ್ಲ ಎಂದು ಪತ್ನಿ ದೂರು ದಾಖಲಿಸಿದ್ದಾರೆ. ಈ ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದು ಪತಿ ಕೇಸ್‌ ರದ್ದಯಗೊಳಿಸುವಂತೆ ಕೋರ್ಟ್‌ ಮೊರೆ ಹೋಗಿದ್ದಾರೆ. ಈ ವೇಳೆ ನ್ಯಾಯಾಧೀಶರಾದ ಕೌಶಿಕ್‌ ಚಂದಾ ಅವರು ಈ ಪ್ರಕರಣದ ಕುರಿತಾಗಿ ಇಬ್ಬರೊಂದಿಗೆ ಮಾತನಾಡಿ ಒಟ್ಟಿಗೆ ಬದುಕುವಂತೆ ಮಾಡಿದ್ದಾರೆ.