ಮನೆ ಅಪರಾಧ ಮೈಸೂರು: ಎರಡು ಕಾರುಗಳ ನಡುವೆ ಅಪಘಾತ- ಇಬ್ಬರ ಸಾವು

ಮೈಸೂರು: ಎರಡು ಕಾರುಗಳ ನಡುವೆ ಅಪಘಾತ- ಇಬ್ಬರ ಸಾವು

0

ಮೈಸೂರು(Mysuru): ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಹುಣಸೂರು ತಾಲ್ಲೂಕು ಬಿಳಿಕೆರೆ ಬಳಿ ನಡೆದಿದೆ.

ವಿನೋದ್ ಕುಮಾರ್ ಮತ್ತು ಕ್ಯಾಂಟಿನ್ ಮೋಹನ್ ಮೃತ ದುರ್ದೈವಿಗಳು.

ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತಪಟ್ಟವರು ಬೈಲುಕುಪ್ಪೆ ಮೂಲದವರು ಎಂದು ತಿಳಿದು ಬಂದಿದೆ.

ಮೈಸೂರಿನಿಂದ ಬೈಲು ಕುಪ್ಪೆಗೆ ಕಾರಿನಲ್ಲಿ ಕುಟುಂಬ  ತೆರಳುತ್ತಿದ್ದ ಸಂದರ್ಭದಲ್ಲಿ ಹುಣಸೂರು ಕಡೆಯಿಂದ ಮೈಸೂರು ಕಡೆಗೆ ಆಗಮಿಸುತ್ತಿದ್ದ ಇನ್ನೋವಾ ಕಾರುಗಳ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಈ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.