ಮನೆ ರಾಜ್ಯ ಧಾರಾಕಾರ ಮಳೆ: ಬೆಳಗಾವಿಯಲ್ಲಿ ಎರಡು ದಿನ ಶಾಲೆಗಳಿಗೆ ರಜೆ

ಧಾರಾಕಾರ ಮಳೆ: ಬೆಳಗಾವಿಯಲ್ಲಿ ಎರಡು ದಿನ ಶಾಲೆಗಳಿಗೆ ರಜೆ

0

ಬೆಳಗಾವಿ(Belgavi): ರಾಜ್ಯದ ಹಲವೆಡೆ ಎಡೆಬಿಡದೆ ಮಳೆಯಾಗುತ್ತಿದೆ. ಬೆಳಗಾವಿಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಇಂದು (ಜು.15) ಮತ್ತು ನಾಳೆ (ಜು.16) ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಬೆಳಗಾವಿ ನಗರ, ತಾಲ್ಲೂಕು ಹಾಗೂ ಖಾನಾಪುರ ತಾಲ್ಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ. ವ್ಯಾಪಕವಾಗಿ ಮಳೆಯಾಗುತ್ತಿರುವ ಕಾರಣ ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ. ಸೇತುವೆಗಳ ಮೇಲೆ ನೀರು ಬರುತ್ತಿದೆ. ಇದರಿಂದ ಮಕ್ಕಳ ಸಂಚಾರ ಅಪಾಯಕಾರಿ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಎರಡು ದಿನ ಶಾಲೆಗಳಿಗೆ ರಜೆ ನೀಡಲಾಗಿದೆ. ಪರಿಸ್ಥಿತಿ ನೋಡಿಕೊಂಡು ಮುಂದುವರಿಯಲಾಗುವುದು. ಈ ಎರಡು ತಾಲ್ಲೂಕು ಬಿಟ್ಟರೆ ಉಳಿದೆಲ್ಲ ಕಡೆ ಶಾಲೆಗಳು ಎಂದಿನಂತೆ ನಡೆಯಲಿವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.