ಕಾರವಾರ (Karwar): ಅಪ್ರಾಪ್ತ ಮಗನಿಗೆ ವಾಹನ ಕೊಟ್ಟ ತಪ್ಪಿಗೆ ತಾಯಿಯೊಬ್ಬರು 25,500 ರೂ. ದಂಡ ತೆತ್ತಿದ್ದಾರೆ. ಕಾರವಾರದ ಹಿರಿಯ ಸಿವಿಲ್ ನ್ಯಾಯಾಲಯ ದಂಡ ವಿಧಿಸಿದೆ.
ನಗರದ ನಂದನಗದ್ದಾದ ರೇಷ್ಮಾ ಅಲಿ ಶೇಖ್ ದಂಡ ತೆತ್ತ ಮಹಿಳೆ. ರೇಷ್ಮಾ ಅಲಿ ಶೇಖ್ ತಮ್ಮ 16 ವರ್ಷದ ಬಾಲಕನಿಗೆ ಚಲಾಯಿಸಲು ಕೊಟ್ಟಿದ್ದರು. ಬಾಲಕನು ಬುಧವಾರ ನಗರದಲ್ಲಿ ಸ್ಕೂಟಿ ಚಲಾಯಿಸುವಾಗ ಸಂಚಾರ ಪೊಲೀಸರು ತಡೆದು ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 25,500 ರೂ. ದಂಡ ವಿಧಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಂಚಾರ ಪೊಲೀಸ್ ಠಾಣೆಯ ಪಿಎಸ್ ಐ ನಾಗಪ್ಪ ಬೋವಿ, ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಕೊಟ್ಟರೆ ವಾಹನ ಮಾಲೀಕರಿಗೆ 25 ಸಾವಿರ ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಹೇಳಿದ್ದಾರೆ.