ಮನೆ ಭಾಷೆ ಸರ್ಕಾರಿ ಆದೇಶ ಪತ್ರದಲ್ಲೇ ರಾರಾಜಿಸುತ್ತಿದೆ ಕನ್ನಡ ದೋಷ! : ಕರ್ನಾಟಕದಲ್ಲಿ `ಕ’ ಮಾಯಾ

ಸರ್ಕಾರಿ ಆದೇಶ ಪತ್ರದಲ್ಲೇ ರಾರಾಜಿಸುತ್ತಿದೆ ಕನ್ನಡ ದೋಷ! : ಕರ್ನಾಟಕದಲ್ಲಿ `ಕ’ ಮಾಯಾ

0

ಬೆಂಗಳೂರು(Bengaluru): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಕೂಡ ಕನ್ನಡವನ್ನು ಮರೆತಂತಿದೆ. ಸರ್ಕಾರ ಹೊರಡಿಸಿರುವ ಆದೇಶ ಪತ್ರದಲ್ಲಿ ಕರ್ನಾಟಕ ಬದಲು `ಕರ್ನಾಟ’ ಎಂದು ಬಳಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರದ ಆದೇಶ ಪತ್ರದಲ್ಲಿ ಅಕ್ಷರ ದೋಷ ರಾರಾಜಿಸುತ್ತಿದೆ. ಅಲ್ಲದೆ, ಕರ್ನಾಟಕವನ್ನೇ ತಪ್ಪಾಗಿ ಬರೆಯುವ ಮೂಲಕ ವಿವಾದಕ್ಕೀಡಾಗಿದೆ. ಸರ್ಕಾರಕ್ಕೆ ಕನ್ನಡದ ಮೇಲೆ ಭಾಷಾಭಿಮಾನ ಇಲ್ಲದಿರುವುದು ಈ ಮೂಲಕ ಕಂಡುಬಂದಿದೆ. ಅಲ್ಲದೇ ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳ ಬೇಜವಬ್ದಾರಿ ಇದಕ್ಕೆ ಮೂಲ ಕಾರಣ.

ಇದು ಕನ್ನಡಿಗರ, ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಕನ್ನಡವನ್ನೇ ಸರಿಯಾಗಿ ಬರೆಯಲು ಬರದ ಸರ್ಕಾರ ಕನ್ನಡವನ್ನು ಹೇಗೆ ಉಳಿಸಿ, ಬೆಳೆಸುತ್ತದೆ ಎಂಬ ಪ್ರಶ್ನೆ ಮೂಡಿದೆ.

ಇದನ್ನು ನೋಡಿದರೆ ಕನ್ನಡಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವಂತಾಗಬೇಕು. ಸರ್ಕಾರಿ ಕಛೇರಿಗಳಲ್ಲಿ ಕನ್ನಡ ರಾರಾಜಿಸಬೇಕು ಎಂಬುದು ಹೇಳಿಕೆಗೆ ಮಾತ್ರ ಸೀಮಿತವಾಗಿದೆ.  ಆದರೆ ಸರ್ಕಾರ ಹೊರಡಿಸುವ ಆಧಿಸೂಚನೆ, ಸುತ್ತೋಲೆಗಳಲ್ಲಿಯೇ ವ್ಯಾಕರಣ ದೋಷ ಕಂಡುಬರುತ್ತಿರುವುದು ವಿಪರ್ಯಾಸ.

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅನಧಿಕೃತವಾಗಿ ಫೋಟೋ ತೆಗೆಯುವುದು, ವಿಡಿಯೋ ಮಾಡುವುದಕ್ಕೆ ನಿರ್ಬಂಧ ಹೇರಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಆದೇಶ ಪತ್ರದಲ್ಲಿ ಕನ್ನಡದ ಪದಗಳನ್ನು ತಪ್ಪಾಗಿ ಬಳಸಲಾಗಿದೆ.

ನಡಾವಳಿ ಎಂಬ ಪದಕ್ಕೆ “ನಡವಳಿ”,

ಪ್ರಸ್ತಾವನೆ – “ಪ್ರಸತ್ತಾವನೆ’,

ಮೇಲೆ- “ಮೇಲೇ”,

ಭಾಗ- “ಬಾಗ”

ಕರ್ನಾಟಕ – “ ಕರ್ನಾಟ”

ಆಡಳಿತದ– “ ಆಡಳಿದ”

ಎಂದು ಬಳಸಲಾಗಿದ್ದು, ಕನ್ನಡಿಗರ ಕೋಪಕ್ಕೆ ಗುರಿಯಾಗಿದೆ.

ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ತನ್ನ ಆದೇಶಗಳಲ್ಲಿ ಕನ್ನಡವನ್ನು ವಾಕ್ಯರಣ ದೋಷವಿಲ್ಲದೆ ಬರೆಯಲಿ ಎಂಬುದು ಎಲ್ಲರ ಆಗ್ರಹ.

ಆದೇಶ ಪತ್ರವನ್ನೇ ಸರಿಯಾಗಿ ಪರಿಶೀಲಿಸದೇ ಸಹಿ ಹಾಕುವ ಅಧಿಕಾರಿಗಳು, ಸರ್ಕಾರಿ ಕಡತಗಳನ್ನು ಹೇಗೆ ಪರಿಶೀಲಿಸುತ್ತಾರೆ ಎಂಬ ಪ್ರಶ್ನೆ ಸಾಮಾನ್ಯರಲ್ಲಿ ಮೂಡಿದೆ. ಇನ್ನಾದರೂ ಅಧಿಕಾರಿಗಳು ಜವಬ್ದಾರಿಯಿಂದ ಕೆಲಸ ನಿರ್ವಹಿಸಲು ಒತ್ತು ನೀಡಬೇಕಾಗಿದೆ.