ಮನೆ ರಾಜಕೀಯ ನಿರ್ಮಾಣ ಹಂತದ ಗೋದಾಮಿನ ಗೋಡೆ ಕುಸಿತ: ಐವರ ಸಾವು

ನಿರ್ಮಾಣ ಹಂತದ ಗೋದಾಮಿನ ಗೋಡೆ ಕುಸಿತ: ಐವರ ಸಾವು

0

ನವದೆಹಲಿ(NewDelhi): ದೆಹಲಿಯ ಹೊರವಲಯದ ಅಲಿಪುರ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋದಾಮಿನ ಗೋಡೆಗಳು  ಕುಸಿದು ಬಿದ್ದ ಪರಿಣಾಮ ಐವರು ಜನರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ

ಅಲಿಪುರ್ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

5,000 ಚದರ ಮೀಟರ್‌ಗಳಷ್ಟು ಅಗಲವಾದ ಈ ಗೋದಾಮಿಗೆ ರಕ್ಷಣಾ ಕಾರ್ಯಾಚರಣೆಗೆ 4 ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ದಳದ ಸಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ.

ಗೋದಾಮು ಅಕ್ರಮವಾಗಿ ನಿರ್ಮಾಣವಾಗುತ್ತಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಶುಕ್ರವಾರ ಮಧ್ಯಾಹ್ನ 12.40ರ ಸುಮಾರಿಗೆ ಅಲಿಪುರ್ ಪೊಲೀಸ್ ಠಾಣೆಗೆ ಗೋಡೆ ಕುಸಿದಿರುವ ಬಗ್ಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ.

ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಸುಮಾರು 100 ಅಡಿ ಉದ್ದ ಮತ್ತು 15 ಅಡಿ ಎತ್ತರದ ಗೋದಾಮಿನ ಗೋಡೆ ಕುಸಿದಿರುವುದು ಬೆಳಕಿಗೆ ಬಂದಿದೆ. ಪಕ್ಕದಲ್ಲಿ ಪಾಯ ತೋಡುತ್ತಿದ್ದ 20 ಕಾರ್ಮಿಕರ ಮೇಲೆ ಗೋಡೆ ಕುಸಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಾಮೂಹಿಕ ಪ್ರಯತ್ನದ ಫಲವಾಗಿ 13 ಕಾರ್ಮಿಕರನ್ನು ನರೇಲಾದ ಸತ್ಯವಾದಿ ರಾಜ ಹರಿಶ್ಚಂದ್ರ ಆಸ್ಪತ್ರೆಗೆ ದಾಖಲಿಸುವಲ್ಲಿ

ಹಿಂದಿನ ಲೇಖನಸರ್ಕಾರಿ ಆದೇಶ ಪತ್ರದಲ್ಲೇ ರಾರಾಜಿಸುತ್ತಿದೆ ಕನ್ನಡ ದೋಷ! : ಕರ್ನಾಟಕದಲ್ಲಿ `ಕ’ ಮಾಯಾ
ಮುಂದಿನ ಲೇಖನಕೊಲೆ ಆರೋಪಿಯಿಂದ ಮಹಿಳಾ ಪಿಎಸ್ ಐ ಮೇಲೆ ಮಚ್ಚಿನಿಂದ ಹಲ್ಲೆ