ಮನೆ ರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ದಾಟಿ ಭಾರತದೊಳಗೆ ಪ್ರವೇಶಿಸಿದ ಮಹಿಳೆಯ ಬಂಧನ

ಗಡಿ ನಿಯಂತ್ರಣ ರೇಖೆ ದಾಟಿ ಭಾರತದೊಳಗೆ ಪ್ರವೇಶಿಸಿದ ಮಹಿಳೆಯ ಬಂಧನ

0

ಶ್ರೀನಗರ(Shreenagar): ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಭಾರತದೊಳಗೆ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆಯನ್ನು ಭಾರತೀಯ ಸೇನೆ ಬಂಧಿಸಿದೆ.

49 ವರ್ಷದ ರೋಜಿನಾ ಎಂಬ ಮಹಿಳಯನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದ್ದು, ಈಕೆ ಪಾಕಿಸ್ತಾನದ ಇಸ್ಲಾಮಾಬಾದ್‌ನ ಫಿರೋಜ್‌ಬಂಡಾ ಪ್ರದೇಶದ ನಿವಾಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಮಹಿಳೆ ಗಡಿ ದಾಟಿ ಬಂದಿರುವ ಉದ್ದೇಶವೇನು ಎಂಬ ಬಗ್ಗೆ ಈಗ ಭದ್ರತಾ ಪಡೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.