ಮನೆ ಅಪರಾಧ ರಕ್ತಚಂದನ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಮೂವರ ಬಂಧನ

ರಕ್ತಚಂದನ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಮೂವರ ಬಂಧನ

0

ಕೊಳ್ಳೇಗಾಲ : ಅಕ್ರಮವಾಗಿ ರಕ್ತಚಂದನ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಿ 17ಲಕ್ಷ ರೂ. ಮೌಲ್ಯದ ರಕ್ತಚಂದನ ಮರದ ತುಂಡುಗಳನ್ನು ಸಿಐಡಿ ಅರಣ್ಯ ಸಂಚಾರಿದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Join Our Whatsapp Group

ಬೆಂಗಳೂರು ವಿಜಯಾನಗರ ನಿವಾಸಿ ಅರುಣ್ ಕುಮಾರ್‌ ಬಿನ್‌ ರಾಜು(26), ಬೆಂಗಳೂರಿನ ನಾಯಂಡನಹಳ್ಳಿ ವಾಸವಿ ಆನಂದ ಬಿನ್‌ ಮುನಿಯಪ್ಪ(46),  ತುಮಕೂರಿನ ಆನಂದ ನಗರದ ತ್ರಬದುಲ್‌ ಬಿನ್‌ ಟಿ ಎಸ್‌ ಅಬ್ದುಲ್‌ ರಶೀದ್‌ ಬಂಧಿತರು.

ಆರೋಪಿಗಳು ಹುಂಡೈ ಕಾರಿ (ಕೆಎಂ02, ಪಿ8320) ನಲ್ಲಿ 284 ಕೆ.ಜಿ ರಕ್ತಚಂದನದ ತೊಂಡುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸತ್ತೇಗಾಲ ಹ್ಯಾಂಡ್ ಪೋಸ್ಟ್‌ ಬಳಿ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ, 3 ಮೊಬೈಲ್‌, 14 ರಕ್ತಚಂದನ ಮರದ ತುಂಡುಗಳು, 1230 ರೂ. ನಗದು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಂಗ ಬಂದನಕ್ಕೆ ಒಪ್ಪಿಸಲಾಗಿದೆ.

ಹಿಂದಿನ ಲೇಖನಒಂಟಿಯಾಗಿ ಜೀವಿಸುತ್ತಿದ್ದ ವ್ಯಕ್ತಿ ಸಾವು: ಮನೆಯಲ್ಲಿ ಲಕ್ಷಾಂತರ ರೂ. ಹಣ ಪತ್ತೆ
ಮುಂದಿನ ಲೇಖನಮಣಿಪುರ ಹಿಂಸಾಚಾರ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ