ಮನೆ ರಾಜ್ಯ ಆಹಾರ ಪದಾರ್ಥಗಳ ಮೇಲೆ ಜಿಎಸ್‍’ಟಿ ಹೇರಿಕೆ: ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ

ಆಹಾರ ಪದಾರ್ಥಗಳ ಮೇಲೆ ಜಿಎಸ್‍’ಟಿ ಹೇರಿಕೆ: ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ

0

ಮೈಸೂರು(Mysuru): ಸಾರ್ವಜನಿಕರು ದಿನನಿತ್ಯ ಬಳಸುವ ಅತಿ ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳ ಮೇಲೆ ಜಿಎಸ್‍’ಟಿ ಹೇರಿಕೆ ಮಾಡಿರುವುದನ್ನು ಖಂಡಿಸಿ ಇಂದು ಕರ್ನಾಟಕ ಸೇನಾ ಪಡೆ  ವತಿಯಿಂದ ಕೇಂದ್ರ ಸರ್ಕಾರ ಬಡ-ಮಧ್ಯಮ ವರ್ಗದ ಜನರನ್ನು ನೇಣುಗಂಬಕ್ಕೆ – ಶೂಲಕ್ಕೆ ದೂಡುತ್ತಿದೆ ಎಂದು ಅಣುಕು ಪ್ರತಿಭಟನೆಯನ್ನು ನಡೆಸಲಾಯಿತು.

ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳ ಬಡವರ ಮೇಲೆ ಪ್ರಭಾವ ಬೀರುತ್ತದೆ. ಈಗಾಗಲೇ ಕಳೆದೆರಡು ವರ್ಷಗಳಿಂದ ಕೋವಿಡ್ ಹಾಗೂ ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ. ಜನರು ಒಂದು ತುತ್ತು ಅನ್ನಕ್ಕೂ ಕಷ್ಟ ಪಡುವ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಆಹಾರ ಪದಾರ್ಥಗಳಿಗೆ ತಿನ್ನುವ ಅನ್ನ ಹಾಗೂ ಸಮುದ್ರದಲ್ಲಿ ಸಿಗುವ ಉಚಿತ ಉಪ್ಪಿನ ಮೇಲು ಜಿಎಸ್ಟಿ ಹಾಕಿರುವುದು ಅತ್ಯಂತ ನೋವಿತ ಸಂಗತಿ ಎಂದು ಪ್ರತಿಭಟನಾಕಾರರು ತಿಳಿಸಿದರು.

 ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದ ಜನರಿಗೆ ಅಚ್ಚೇ ದಿನಗಳು ಬರುತ್ತಿವೆ ಎಂದು ಹೇಳಿಕೊಂಡು ಬರುತ್ತಿದೆ ಅಷ್ಟೇ. ಆದರೆ ಯಾವೊಬ್ಬ ಭಾರತೀಯನಿಗೂ ಇದುವರೆಗೆ ಅಚ್ಛೇದಿನಗಳು ಬಂದಿಲ್ಲ. ಈಗ ಜನರಿಗೆ ಅತಿ ಅಗತ್ಯ ವಸ್ತುಗಳ ಮೇಲೂ ಜಿಎಸ್‌ಟಿ ಹಾಕಿ ಶಾಕ್ ನೀಡಿದೆ. ಇದೇನಾ ಅಚ್ಚೆ ದಿನ್? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ದೇಶದ ಜನರಿಗೆ ಆಹಾರ ಭದ್ರತೆ ನೀಡುತ್ತಿಲ್ಲ. ಇದೊಂದು ಜನ ವಿರೋಧಿ ಸರ್ಕಾರವಾಗಿದೆ ಹಾಗೂ ಪ್ರಜೆಗಳ ಕಣ್ಣಿಗೆ ಮಣ್ಣು ಎರಚುತ್ತಿದೆ. ಕೇಂದ್ರ ಸರ್ಕಾರ ಜನರಿಗೆ ಉದ್ಯೋಗ ನೀಡುವ ಬದಲಾಗಿ, ಹೆಚ್ಚಿನ ತೆರಿಗೆ ವಿಧಿಸುತ್ತಿದೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೇಗೆ ನಾಶಪಡಿಸುಬಹುದು ಎಂಬುದನ್ನು ಬಿಜೆಪಿ ತೋರಿಸಿ ಕೊಡುತ್ತಿದೆ ಎಂದು ಆರೋಪಿಸಿದರು.

ಈ ಕೂಡಲೇ ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ- ಅತಿ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ವಾಪಾಸು ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಕೃಷ್ಣಪ್ಪ, ಪ್ರಜೀಶ್ ಪಿ, ವಿಜಯೇಂದ್ರ, ವಿ.ಜಯಣ್ಣ, ವೈ ಕೆ ನಾಗರಾಜ್, ಮನು ನಾಯಕ್, ಚಂದ್ರಶೇಖರ್ ಎಸ್, ಅನಿತಾ ಚೇತನ್, ಎಳನೀರು ರಾಮಣ್ಣ, ದರ್ಶನ್ ಗೌಡ, ಮಧುವನ ಚಂದ್ರು, ರಾಧಾಕೃಷ್ಣ, ಅಂಬಾ ಅರಸ್, ಪದ್ಮಾ, ಡಾ. ಮೊಗಣ್ಣಾಚಾರ್, ನಂದ ಕುಮಾರ್, ಪ್ರದೀಪ್ ಆರ್, ಡಾ. ನರಸಿಂಹೇಗೌಡ, ಚಂದನ, ಜ್ಯೋತಿ, ಇಂದಿರಾ, ಬಂಗಾರಪ್ಪ, ಗುರುಮಲ್ಲಪ್ಪ, ಗಣೇಶ್ ಪ್ರಸಾದ್,, ಬಸವರಾಜು, ಭರತ್ ಡೀನ್, ಗೊರೂರು ಮಲ್ಲೇಶ್ , ದೀಪಕ್,ಸುಂದರಪ್ಪ, ಮಹದೇವ ಸ್ವಾಮಿ, ಜಗದೀಶ್ ಗೌಡ,ರಾಮ ನಾಯಕ್,ರವಿ ನಾಯಕ್,  ಉಮಾದೇವಿ, ವಿಜಯ್ ಕುಮಾರ್, ಕೃಷ್ಣಮೂರ್ತಿ ಹಾಗೂ ಶ್ರೀನಿವಾಸ್ ಉಪಸ್ಥಿತರಿದ್ದರು.