ಮನೆ ಜ್ಯೋತಿಷ್ಯ ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ

0

ನಿಮ್ಮ ರಾಶಿ ಫಲಾಫಲ ಹೇಗಿದೆ ಎಂಬುದನ್ನು ಇಂದಿನ ದಿನದ ರಾಶಿ ಭವಿಷ್ಯ ನೋಡಿ ತಿಳಿದುಕೊಳ್ಳಿ.

ಮೇಷ ರಾಶಿ

ಹಗುರವಾದ ನೆಮ್ಮದಿಯಾದ ದಿನ. ಹೊಸ ಜವಾಬ್ದಾರಿಯೊಂದನ್ನು ನೀವಾಗಿ ಇಷ್ಟಪಟ್ಟು ಹೆಗಲಿಗೇರಿಸಿಕೊಳ್ಳುವಿರಿ. ತಾಯಿಯ ಆರೋಗ್ಯ ಸುಧಾರಿಸುತ್ತದೆ. ತಾಯಿಯಿಂದ ಸಹಾಯ ಅಥವಾ ಉಡುಗೊರೆ ಸಿಗುವ ಸಮಯ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ. ಸಿಹಿಭೋಜನ ಯೋಗ.

ವೃಷಭ ರಾಶಿ

ರಾಶಿಯಲ್ಲೇ ಚಂದ್ರನಿದ್ದು ಕೊಂಚ ಶೀತಬಾಧೆ ಬರಬಹುದು. ಮನಸ್ಸಿಗೆ ಉಲ್ಲಾಸದ ದಿನ. ಕುಟುಂಬದಲ್ಲಿ ಶುಭಕಾರ್ಯದ ವಾತಾವರಣ. ಆಕಸ್ಮಿಕ ಧನಲಾಭ. ತವರಿನಿಂದ ಸಹಾಯ ಸಹಕಾರ. ಯಾವುದಾದರೂ ಆಗುವುದೇ ಇಲ್ಲವೆಂದುಕೊಂಡ ಕೆಲಸ ಈ ದಿನ ಸುಲಭವಾಗಿ ನೇರವೇರುತ್ತದೆ.

ಮಿಥುನ ರಾಶಿ

ಭೂಮಿ ವ್ಯವಹಾರದಲ್ಲಿ ಲಾಭ ಇದೆ. ಮನೆ ಕೊಳ್ಳುವ ಅಥವಾ ಕಟ್ಟುವ ಯೋಚನೆ ಇದ್ದರೆ ಈ ದಿನ ಶುಭ ದಿನ. ಯೋಜನೆ ರೂಪಿಸಬಹುದು. ಸಂಗಾತಿಯೊಂದಿಗೆ ಹಿತವಾದ ಮಾತುಕತೆ ಉಲ್ಲಾಸದ ವಾತಾವರಣ ಇದೆ. ಶೇರ್‌ಗಳಲ್ಲಿ ಹಣ ತೊಡಗಿಸಿರುವರಿಗೂ ಈ ದಿನ ಶುಭವಿದೆ. ಆತ್ಮೀಯರೊಡನೆ ಪ್ರಯಾಣ ಯೋಗ ಇದೆ.

ಕರ್ಕಾಟಕ ರಾಶಿ

ಹಾಲು ಹಾಗೂ ಐಸ್ ಕ್ರೀಂ ವ್ಯಾಪಾರಿಗಳಿಗೆ ಶುಭದಿನ. ಮೀನುಗಾರರು ಅಥವಾ ನೀರಿಗೆ ಸಂಬಂಧಿಸಿದ ವೃತ್ತಿಯವರಿಗೂ ಈ ದಿನ ಲಾಭ ತಂದುಕೊಡುತ್ತದೆ. ಗುರುಜನರ, ಹಿತೈಷಿಗಳ ಭೇಟಿ ಮನಸ್ಸಿಗೆ ಆರಾಮ ನೀಡುತ್ತದೆ. ದೇವರ ದರ್ಶನ ಅಥವಾ ಗುರುಗಳ ದರ್ಶನ ಭಾಗ್ಯ ಇದೆ. ಸುಖಭೋಜನ ಪ್ರಾಪ್ತಿ ಇದೆ.

ಸಿಂಹ ರಾಶಿ

ಈ ದಿನ ನೀವು ಯಾವುದಾದರೂ ಯೋಜನೆಯಲ್ಲಿ ಬಂಡವಾಳ ತೊಡಗಿಸಿದರೆ ಲಾಭವಿದೆ. ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸಬಹುದು. ಕಾರ್ಯಕ್ಷೇತ್ರದಲ್ಲಿ ಅನುಕೂಲ ವಾತಾವರಣ ಇರುತ್ತದೆ. ತಾಯಿಯ ಮನಸ್ಸಿಗೆ ಸಂತಸ ನೀಡುತ್ತೀರಿ. ಸರ್ಕಾರಿ ಕೆಲಸಗಳು ವಿಳಂಬವಾಗುತ್ತದೆ. ಹೊಸ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಚಿಂತನೆ ನಡೆಸುತ್ತೀರಿ.

ಕನ್ಯಾ ರಾಶಿ

ಮದುವೆ ಮಾತುಕತೆ ನಡೆಯುತ್ತಿದೆ. ನಿಮ್ಮ ವಧು/ವರನನ್ನು ಆರಿಸಿಕೊಳ್ಳಲು ಶುಭದಿನ. ಪುಣ್ಯಕ್ಷೇತ್ರ ಯಾತ್ರೆ ಹೊರಡಲು ಇದು ಸುಸಮಯ. ದೇವರ ಪೂಜೆ ದೇವರ ಕಾರ್ಯಗಳನ್ನು ನೆರವೇರಿಸುತ್ತೀರಿ. ದಾನಧರ್ಮ ಮಾಡುತ್ತೀರಿ. ಪ್ರಯತ್ನ ಪಡುವವರಿಗೆ ಸರ್ಕಾರಿ ಉದ್ಯೋಗ ಸಿಗುವ ಸಮಯ. ಸರ್ಕಾರದಿಂದ ಲಾಭ ಇದೆ. ಕಂಪ್ಯೂಟರ್ ಪರಿಣಿತರಿಗೆ ಶುಭದಿನ.

ತುಲಾ ರಾಶಿ

ವಿದ್ಯಾರ್ಥಿಗಳಿಗೆ ನೀರಸ ದಿನ. ಪ್ರಗತಿ ಕಡಿಮೆಯಾಗಿ ಮನೆಯಲ್ಲಿ ಮನಸ್ತಾಪಕ್ಕೆ ಕಾರಣ ಆಗಬಹುದು. ಏಕಾಗ್ರತೆ ಇಲ್ಲ. ಸಾಲಬಾಧೆ ಶತ್ರುಗಳ ಕಾಟ ಇದೆ. ಯೋಚಿಸಿ ಮುನ್ನಡೆಯಿರಿ. ಯಾರೊಂದಿಗೂ ವಾದ ಮಾಡಬೇಡಿ. ಇದು ಒತ್ತಡದ ಸಮಯ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ವೃಶ್ಚಿಕ ರಾಶಿ

ಉಳಿದೆಲ್ಲಾ ರಾಶಿಗಳಿಗಿಂತ ನಿಮ್ಮ ರಾಶಿಗೆ ಅಧಿಕ ಶುಭಫಲ ಇದೆ. ಮಕ್ಕಳಿಂದ ಸಂತೋಷ. ನೌಕರಿಯಲ್ಲಿ ಪ್ರಶಂಸೆ, ಬಡ್ತಿ ಎಲ್ಲವೂ ಇದೆ. ವಿವಾಹವಾಗುವವರಿಗೆ ಶುಭ ಸಮಯ. ಪ್ರವಾಸ ಯಾತ್ರೆ ಸಂತೋಷಕೂಟಗಳಿಗೆ ಹೋಗುತ್ತೀರಿ. ಮನಸ್ಸಿಗೆ ಇಷ್ಟವಾದ ವಸ್ತುಗಳನ್ನು ಖರೀದಿ ಮಾಡುತ್ತೀರಿ. ಹೊಸ ಹೊಸ ಯೋಜನೆಗಳಲ್ಲಿ ಬಂಡವಾಳ ಹೂಡಲು ಇದು ಸುಸಮಯ.

ಧನಸ್ಸು ರಾಶಿ

ನೀವು ಎಚ್ಚರಿಕೆಯಿಂದ ಮುಂದೆ ಹೆಜ್ಜೆ ಇಡಿ. ನಿಮ್ಮ ಒಂದೊಂದು ನಡೆಯೂ ತಾಳ್ಮೆಯನ್ನು ವಿವೇಚನೆಯನ್ನೂ ಬೇಡುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಿದ್ದರೂ ಖರ್ಚುಗಳೂ ಹೇರಳವಾಗಿವೆ. ಮಕ್ಕಳ ಜೊತೆ ಮನಸ್ತಾಪದಿಂದ ಮನಸ್ಸಿಗೆ ಬೇಸರ. ತಾಯಿಯ ಮನಸ್ಸಿಗೆ ಸಂತೋಷ ಇದೆ.

ಮಕರ ರಾಶಿ

ಹೊಸಜಾಗಕ್ಕೆ ಹೋಗುವ ಯೋಗ ಇದೆ. ಸುತ್ತಾಟ ಉಲ್ಲಾಸ ಕೊಟ್ಟರೂ ಮನಸ್ಸಿಗೆ ಏನೋ ವ್ಯಥೆ ಇದೆ. ಅಂದುಕೊಳ್ಳದೆ ಇರುವ ಖರ್ಚುಗಳು ಎದುರಾಗಿ ಬೇಸರ ತರಿಸುತ್ತದೆ. ಮಕ್ಕಳ ಪ್ರಗತಿಯಿಂದ ಸಂತೋಷ ಇದೆ. ಸ್ನೇಹಿತರಿಂದ ಬಂಧುಗಳಿಂದ ಸಹಾಯ ಬೆಂಬಲ ಇದೆ. ದೈವದರ್ಶನ ಭಾಗ್ಯ ಇದೆ.

ಕುಂಭ ರಾಶಿ

ಶುಭಕಾರ್ಯಕ್ಕಾಗಿ ಖರ್ಚು ಮಾಡುತ್ತೀರಿ. ಕುಟುಂಬದಲ್ಲಿ ಹಿತವಾದ ವಾತಾವರಣ. ಪ್ರಯಾಣ ಯೋಗ ಇದೆ. ಸಾಧುಸಂತರಿಗೆ ದಾನಧರ್ಮ ಮಾಡಿ. ಯಾವುದೋ ಆಸ್ತಿ ಖರೀದಿ ಮಾತುಕತೆ ನಡೆದು ಮನಸ್ಸಿಗೆ ಮುದವಾಗುತ್ತದೆ. ಮನೆ, ತೋಟ, ಜಮೀನು ಖರೀದಿ ಯೋಗ ಇದೆ.

ಮೀನ ರಾಶಿ

ಮಕ್ಕಳಿಂದ ಸಂತೋಷ ಇದೆ. ಕುಟುಂಬದಲ್ಲಿ ಹಗುರ ವಾತಾವರಣ ಇರುತ್ತದೆ. ಸುಖಭೋಜನ ಮಾಡುತ್ತೀರಿ. ಅಲಂಕಾರ ವಸ್ತುಗಳನ್ನು ಖರೀದಿ ಮಾಡುತ್ತೀರಿ. ಧನಲಾಭ ಇದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಇದೆ.