ಮನೆ ಅಪರಾಧ ಹೈದರಾಬಾದ್ ನಲ್ಲಿ ಹೃದಯ ವಿದ್ರಾವಕ ಘಟನೆ : 14 ದಿನದ ಹಸುಗೂಸನ್ನು ಕೊಂದು, ಕಸದ ತೊಟ್ಟಿಗೆ...

ಹೈದರಾಬಾದ್ ನಲ್ಲಿ ಹೃದಯ ವಿದ್ರಾವಕ ಘಟನೆ : 14 ದಿನದ ಹಸುಗೂಸನ್ನು ಕೊಂದು, ಕಸದ ತೊಟ್ಟಿಗೆ ಎಸೆದ ವ್ಯಕ್ತಿ

0

ಹೈದರಾಬಾದ್ : ನೇಪಾಳ ಮೂಲದ ವ್ಯಕ್ತಿಯೊಬ್ಬ ತನ್ನ 14 ದಿನಗಳ ಹೆಣ್ಣುಮಗುವನ್ನು ಕೊಂದು ಕಸದ ತೊಟ್ಟಿಯಲ್ಲಿ ಎಸೆದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಗೋಲ್ಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ 14 ದಿನಗಳ ಹೆಣ್ಣು ಮಗುವನ್ನು ಇರಿದು ಕೊಂದು, ಆಕೆಯ ಶವವನ್ನು ಕಸದ ಬುಟ್ಟಿಗೆ ಎಸೆದಿದ್ದಾನೆ.

ಆರೋಪಿಯನ್ನು ಜಗತ್ ಎಂದು ಗುರುತಿಸಲಾಗಿದ್ದು, ಮೂಲತಃ ನೇಪಾಳದವನು. ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಜಗತ್​​ನನ್ನು ಆತನ ಪತ್ನಿ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಆತ ತನ್ನ ಮಗುವಿಗೆ ಇರಿದು ನಂತರ ಶವವನ್ನು ಕಸದ ತೊಟ್ಟಿಯಲ್ಲಿ ಎಸೆದಿದ್ದಾನೆ ಎಂದು ವರದಿಯಾಗಿದೆ.

ಘಟನೆಯ ಕುರಿತು ಮಾತನಾಡಿದ ಗೋಲ್ಕೊಂಡ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್, ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಒಂದು ವರ್ಷದಿಂದ ಅಪಾರ್ಟ್‌ಮೆಂಟ್‌ನಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಜಗತ್ ಎಂಬ ವ್ಯಕ್ತಿ ಮಗುವನ್ನು ಕೊಂದಿದ್ದಾನೆ ಆತ ನೇಪಾಳದ ಪ್ರಜೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಮಗುವಿನ ಶವವನ್ನು ಟೋಲಿಚೌಕಿಯಲ್ಲಿರುವ ಕಸದ ತೊಟ್ಟಿಯ ಬಳಿ ಎಸೆದಿದ್ದಾನೆ. ಅವನ ಪತ್ನಿ ದೂರು ದಾಖಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.