ಮನೆ ಕ್ರೀಡೆ ವಿಂಡೀಸ್ ವಿರುದ್ಧ ಸತತ 12ನೇ ಸರಣಿ ಜಯ: ವಿಶ್ವದಾಖಲೆ ಬರೆದು ಅಗ್ರಸ್ಥಾನಕ್ಕೇರಿದ ಭಾರತ

ವಿಂಡೀಸ್ ವಿರುದ್ಧ ಸತತ 12ನೇ ಸರಣಿ ಜಯ: ವಿಶ್ವದಾಖಲೆ ಬರೆದು ಅಗ್ರಸ್ಥಾನಕ್ಕೇರಿದ ಭಾರತ

0

ಕ್ವೀನ್ಸ್ ಪಾರ್ಕ್ ಓವಲ್ (Queen’s Park Oval): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಗೆದ್ದಿರುವ ಭಾರತ ತಂಡ ಸರಣಿ ಕೈವಶ ಮಾಡಿಕೊಂಡಿದೆ.

ಆ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು, ತಂಡವೊಂದರ ವಿರುದ್ಧ ಅತೀ ಹೆಚ್ಚು ಸತತ ಸರಣಿ ಜಯ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಅಲ್ಲದೆ, ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡವೊಂದರ ವಿರುದ್ಧ ಮತ್ತೊಂದು ತಂಡ ಸತತವಾಗಿ ಹೆಚ್ಚು ಸರಣಿ ಗೆದ್ದ ಪಟ್ಟಿಯಲ್ಲಿ ಭಾರತ ಇದೀಗ ಅಗ್ರ ಸ್ಥಾನಕ್ಕೇರಿದೆ.

ಈ ಸರಣಿ ಜಯದ ಮೂಲಕ ಭಾರತದ ಖಾತೆಗೆ ವಿಂಡೀಸ್ ವಿರುದ್ಧ ಮತ್ತೊಂದು ಸರಣಿ ಜಯ ದಾಖಲಾಗಿದೆ. ಇದು ಭಾರತಕ್ಕೆ ವಿಂಡೀಸ್ ವಿರುದ್ಧ 12ನೇ ಸತತ ಸರಣಿ ಜಯವಾಗಿದೆ. ವಿಂಡೀಸ್ ವಿರುದ್ಧದ ಭಾರತ ಸತತ ಜಯ ಯಾತ್ರೆ 2007ರಲ್ಲಿ ಪ್ರಾರಂಭವಾಗಿತ್ತು. ಅಂದು ಇಂದಿಗೂ ಅಜೇಯವಾಗಿ ಮುಂದುವರೆದಿದೆ. 

ಈ ಹಿಂದೆ ಈ ಸ್ಥಾನದಲ್ಲಿ ಪಾಕಿಸ್ತಾನವಿತ್ತು. ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ ಸತತ 11 ಸರಣಿಗಳಲ್ಲಿ ಜಯಗಳಿಸಿದೆ. 1996ರಿಂದ 2021ರವರೆಗೆ ಪಾಕ್ ಜಿಂಬಾಬ್ವೆ ವಿರುದ್ದ 11 ಸರಣಿಗಳನ್ನು ಗೆದ್ದು ಈ ಸಾಧನೆ ಮಾಡಿತ್ತು. ಇದೀಗ ಭಾರತ ತನ್ನ 12ನೇ ಸರಣಿ ಜಯದ ಮೂಲಕ ಈ ದಾಖಲೆಯನ್ನು ಹಿಂದಿಕ್ಕೆ ಅಗ್ರಸ್ಥಾನಕ್ಕೇರಿದೆ.

ತಂಡದ ವಿರುದ್ಧ ಸತತವಾಗಿ ದ್ವಿಪಕ್ಷೀಯ ಏಕದಿನ ಸರಣಿ ಗೆಲುವುಗಳು: 12 Ind vs WI (2007-2022)*, 11 Pak vs Zim (1996-2021), 10 Pak vs WI (1999-2022), 9 SA vs Zim (1995-2018), 9 Ind vs SL (2007-2021).