ಮನೆ ಆರೋಗ್ಯ ಹೊಟ್ಟೆ ಕೊಬ್ಬು ಕರಗಿಸಲು ಈರುಳ್ಳಿ ಸಹಕಾರಿ

ಹೊಟ್ಟೆ ಕೊಬ್ಬು ಕರಗಿಸಲು ಈರುಳ್ಳಿ ಸಹಕಾರಿ

0

ಪ್ರತಿದಿನ ನಮ್ಮ ಅಡುಗೆಯಲ್ಲಿ ಬಳಸುವ ಈರುಳ್ಳಿಯಲ್ಲಿ ಆರೋಗ್ಯಕಾರಿ ಅಂಶಗಳಿದ್ದು, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕಡಿಮೆ ಮಾಡುವುದು ಮಾತ್ರ ವಲ್ಲದೆ, ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಜೊತೆಗೆ ದೇಹದ ತೂಕ ಇಳಿಸಿ, ಬೊಜ್ಜಿನ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.‌
ಆಧುನಿಕ ಜೀವನಶೈಲಿಗಳಿಂದಾಗಿ ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ದೇಹದ ತೂಕ ಹಾಗೂ ಬೊಜ್ಜಿನ ಸಮಸ್ಯೆ ಹೆಚ್ಚಿನವರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಅದರಲ್ಲೂ ಹೊಟ್ಟೆಯ ಸುತ್ತ ಬೊಜ್ಜು ಆವರಿಸಿಕೊಂಡು ಬಿಟ್ಟರೆ, ಇದನ್ನು ಕರಗಿಸುವುದು ಅಷ್ಟು ಸುಲಭದ ಮಾತಲ್ಲ.

ಈರುಳ್ಳಿಯ ಪ್ರಯೋಜನಗಳು
ಈರುಳ್ಳಿ ಮನುಷ್ಯನ ಜೀರ್ಣಾಂಗ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಅಜೀರ್ಣ ಹಾಗೂ ಮಲ ಬದ್ಧತೆಯನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಅಷ್ಟೇ ಅಲ್ಲದೆ ನಮ್ಮ ರಕ್ತದಲ್ಲಿ ಕಂಡು ಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ದೂರ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇನ್ನು ದೇಹದ ತೂಕದ ವಿಚಾರದಲ್ಲಿ ಕೂಡ ಅಷ್ಟೇ, ತನ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳು ಇರುವುದರಿಂದ ದೇಹದ ತೂಕವನ್ನು ನಿಯಂತ್ರಣ ದಲ್ಲಿಟ್ಟು, ಬೊಜ್ಜಿನ ಸಮಸ್ಯೆ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಈರುಳ್ಳಿ ಯನ್ನು ಅಡುಗೆಯಲ್ಲಿ ಬಳಸಿಕೊಂಡರೆ, ಆಹಾರದ ರುಚಿ ಹೆಚ್ಚಾಗುವುದು ಮಾತ್ರವಲ್ಲದೆ, ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ಕೂಡ ಸಿಗುತ್ತದೆ.
ಒಂದು ಕಪ್ ಹೆಚ್ಚಿದ ಈರುಳ್ಳಿಯಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾದ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಕಬ್ಬಿಣಾಂಶ, ವಿಟಮಿನ್ಸ್‌ಗಳು, ನಾರಿನಾಂಶಗಳು ಹಾಗೂ ಇನ್ನಿತರ ಆರೋಗ್ಯಕಾರಿ ಅಂಶಗಳು ಸಿಗುವುದರಿಂದ ದೇಹದ ತೂಕ ಇಳಸಿ, ಬೊಜ್ಜು ಕರಗಿಸುವಲ್ಲಿ ಇವುಗಳ ಪಾತ್ರ ಸಹಾಯಕ್ಕೆ ಬರುತ್ತದೆ.
ಮುಖ್ಯವಾಗಿ ಇದರಲ್ಲಿ ಕರಗುವ ನಾರಿನಾಂಶ ಯಥೇಚ್ಛವಾಗಿ ಕಂಡು ಬರುವುದರಿಂದ, ದೀರ್ಘಕಾಲ ತುಂಬಿದ ಅನುಭವವನ್ನು ಉಂಟು ಮಾಡುತ್ತದೆ. ಇದರಿಂದ ಪದೇ ಪದೇ ತಿನ್ನುವ ಬಯಕೆ ನಿಯಂತ್ರಣಕ್ಕೆ ಬಂದು, ದೇಹದ ತೂಕ ಕೂಡ ಕಂಟ್ರೋಲ್‌ನಲ್ಲಿರುತ್ತದೆ.
ಈರುಳ್ಳಿ ಜ್ಯೂಸ್
ಒಂದು ಮಧ್ಯಮ ಗಾತ್ರದ ಈರುಳ್ಳಿಯ ಸಿಪ್ಪೆ ತೆಗೆದು, ಸಣ್ಣದಾಗಿ ಹೆಚ್ಚಿ ನೀರಿನಲ್ಲಿ ಸ್ವಲ್ಪ ಹೊತ್ತು ಕುದಿಸಿ. ಆಮೇಲೆ, ಸ್ವಲ್ಪ ನೀರಿನೊಂದಿಗೆ ಮಿಕ್ಸಿಯ ಜಾರ್‌ಗೆ ಹಾಕಿಕೊಂಡು, ಚೆನ್ನಾಗಿ ರುಬ್ಬಿಕೊಂಡು ಜ್ಯೂಸ್ ರೀತಿ ಮಾಡಿಕೊಂಡು ಸೇವನೆ ಮಾಡಬಹುದು. ಇಲ್ಲಾಂದ್ರೆ ನಿತ್ಯದ ತರಕಾರಿ ಸಲಾಡ್ ಜೊತೆಗೆ ಹಸಿ ಈರುಳ್ಳಿ ಯನ್ನು ಕೂಡ ಇದಕ್ಕೆ ಬೆರೆಸಿ, ಸೇವನೆ ಮಾಡುವುದರಿಂದ, ದೇಹದ ಬೊಜ್ಜು ಇಳಿಸಲು ನೆರವಾಗುತ್ತದೆ.
ಹಸಿ ಈರುಳ್ಳಿ ಸೇವನೆ
ಪ್ರತಿದಿನ ಒಂದು ಸಣ್ಣ ಗಾತ್ರದ ಈರುಳ್ಳಿಯನ್ನು ಕತ್ತರಿಸಿಕೊಂಡು, ಇದಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸ ಹಾಗೂ ಚಿಟಿಕೆಯಷ್ಟು ಉಪ್ಪನ್ನು ಬೆರೆಸಿ ಸೇವನೆ ಮಾಡುವ ಅಭ್ಯಾಸ ಇಟ್ಟು ಕೊಂಡರೆ ಬಹಳ ಒಳ್ಳೆಯದು. ಮಧ್ಯಾಹ್ನ ಊಟ ಮಾಡುವ ಸಮಯದಲ್ಲಿ ಅಥವಾ ರಾತ್ರಿಯ ಊಟದ ಸಂದರ್ಭದಲ್ಲಿ, ಈರುಳ್ಳಿಯನ್ನು ಹೀಗೆ ಸೇವನೆ ಮಾಡುವುದರಿಂದ ದೇಹದ ತೂಕ ಇಳಿಸಲು ನೆರವಾಗುತ್ತದೆ.