ಮನೆ ಜ್ಯೋತಿಷ್ಯ ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ

0

ಇಂದಿನ ರಾಶಿ ಭವಿಷ್ಯ ನೋಡಿ ನಿಮ್ಮ ದಿನವನ್ನು ಪ್ರಾರಂಭಿಸಿ.

ಮೇಷ ರಾಶಿ

ಈದಿನ ಚಂದ್ರ ಗುರುವಿನ ನಕ್ಷತ್ರವಾದ ಪುನರ್ವಸು-ಮಿಥುನರಾಶಿಯಲ್ಲಿ ಸಂಚರಿಸುತ್ತಾನೆ. ಈ ದಿನ ನಿಮಗೆ ಶುಭ ದಿನ. ಮಹತ್ತರವಾದ ಬದಲಾಣೆ ನಿರೀಕ್ಷಿಸುವ ದಿನ. ಸೋದರಿಯೊಂದಿಗೆ ಒಡನಾಟ ಸಹಾಯ ಇರುತ್ತದೆ. ದೇಹದಲ್ಲಿ ಚೈತನ್ಯ, ಮನಸ್ಸಿಗೆ ಉಲ್ಲಾಸ. ಸರ್ಕಾರಿ ಕೆಲಸಗಾರರಿಗೆ ಶುಭ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ.

ವೃಷಭ ರಾಶಿ

ಈ ದಿನ ನಿಮಗೆ ಅತ್ಯುತ್ತಮ ದಿನ. ಬಂಧುಬಾಂದವರು ಸ್ನೇಹಿತರೊಂಡನೆ ಖುಷಿಯಿಂದ ಒಡನಾಡುವ ದಿನ. ಪ್ರೀತಿ ಪಾತ್ರರಿಂದ ಉಡುಗೊರೆ ಸ್ವೀಕರಿಸುತ್ತೀರಿ, ಸಿಹಿಭೋಜನ ಮಾಡುತ್ತೀರಿ. ನೌಕರಿಯಲ್ಲಿ ಪ್ರಶಂಸೆ ಕೇಳುತ್ತೀರಿ. ಒಟ್ಟಾರೆಯಾಗಿ ಈದಿನ ನಿಮಗೆ ಖುಷಿಯ ಮೂಟೆಯನ್ನೇ ಹೊತ್ತುತರುತ್ತದೆ. ನೌಕರಿಯ ಶುಭಸುದ್ದಿ ಸಿಗಬಹುದು.

ಮಿಥುನ ರಾಶಿ

ಈ ದಿನ ನಿಮ್ಮ ರಾಶಿಯಲ್ಲೇ ಚಂದ್ರನ ಸಂಚಾರ ಇದೆ. ಆದರೆ ನಿಮಗೆ ಒಂದಷ್ಟು ಕಸಿವಿಸಿ, ಕೆಲಸಕಾರ್ಯಗಳಲ್ಲಿ ನಿಧಾನ ಮುಂತಾದ ಅಡೆತಡೆ ಇರುತ್ತದೆ. ಸರ್ಕಾರಿ ಕೆಲಸಕಾರ್ಯಗಳು ನೆರವೇರುತ್ತದೆ. ದೈಹಿಕವಾಗಿ ಉತ್ಸಾಹ ಚೈತನ್ಯ ಇರುವ ದಿನ. ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ ಇದೆ.

ಕರ್ಕಾಟಕ ರಾಶಿ

ಈ ದಿನ ಇಷ್ಟವಿಲ್ಲದ ಪ್ರಯಾಣ ಯೋಗ ಇದೆ. ದೇಹ ಆರಾಮ ವಿಶ್ರಾಂತಿ ಬೇಡುತ್ತದೆ. ಕೊಂಚ ಹಣಕಾಸಿನ ಖರ್ಚೂ ಇದೆ. ಗುರುಗಳ ದರ್ಶನಭಾಗ್ಯ ದೇವರ ದರ್ಶನಭಾಗ್ಯ ಇದೆ. ಶೇರ್‌ಗಳಲ್ಲಿ ಹಣ ಹೂಡಿರುವವರಿಗೆ ಈ ದಿನ ಲಾಭ ನಿರೀಕ್ಷಿಸಬಹುದು. ವಾಹನ ವ್ಯಾಪಾರಿಗಳಿಗೆ ಲಾಭ ಇದೆ.

ಸಿಂಹ ರಾಶಿ

ಈ ದಿನ ಸುಖಭೋಜನ ಪ್ರಾಪ್ತಿ ಇದೆ. ಹೂಡಿಕೆಗಳಲ್ಲಿ ಬಂಡವಾಳ ಹಾಕಬಹುದು. ತಮ್ಮ ಉದ್ದಿಮೆಗಳಿಗೆ ಬಂಡವಾಳ ಬೇಕೆನ್ನುವವರಿಗೆ ಇನ್ವೆಸ್ಟರ್ಸ್ ಸಿಗುತ್ತಾರೆ. ವ್ಯಾಪಾರ ವ್ಯವಹಾರ ಈದಿನ ಸರಾಗವಾಗಿ ನಡೆಯುತ್ತದೆ. ಶುಭಕಾರ್ಯಗಳಿಗೆ ಖರ್ಚು ಮಾಡುತ್ತೀರಿ. ಮನಸ್ಸಿಗೆ ಯಾವುದೋ ಚಿಂತೆ ಬಾಧಿಸುತ್ತದೆ.

ಕನ್ಯಾ ರಾಶಿ

ನೌಕರಿಯ ಜಾಗದಲ್ಲಿ ಈ ದಿನ ನಿಮಗೆ ಶುಭ. ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವ ಯೋಗ. ಸಂಗಾತಿಯೊಡನೆ ಮಧುರ ಕ್ಷಣಗಳನ್ನು ಕಳೆಯುತ್ತೀರಿ. ಮನರಂಜನೆ, ಪ್ರವಾಸ ಎಲ್ಲವೂ ಈದಿನ ಇದೆ. ಆರೋಗ್ಯ ಸುಧಾರಿಸುತ್ತದೆ. ದಿನದ ಅಂತ್ಯದಲ್ಲಿ ಸಂತೋಷಕರ ಸಮಾಚಾರ ಕೇಳುತ್ತೀರಿ.

ತುಲಾ ರಾಶಿ

ಈ ದಿನ ಆಕಸ್ಮಿಕ ಧನಲಾಭ ಇದೆ. ಕೆಲಸಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ನಿಮ್ಮ ರಾಶಿಯ ಅಧಿಪತಿ ಶುಕ್ರ ಒಂಬತ್ತನೇ ಮನೆಯಲ್ಲಿ ಇದ್ದು ನಿಮಗೆ ಭಾಗ್ಯಗಳನ್ನು ಕೊಡಿಸುತ್ತಾನೆ. ರಿಯಲ್ ಎಸ್ಟೇಟ್ ವ್ಯವಹಾರಿಗಳಿಗೆ ಈ ದಿನ ನಷ್ಟ. ಯಾವುದೂ ವ್ಯವಹಾರ ಮಾಡಬೇಡಿ. ವಿನಾಕಾರಣ ಅಪವಾದ ಬರಬಹುದು. ಅನಾವಶ್ಯಕ ಮಾತುಗಳಿಗೆ ನಿಯಂತ್ರಣ ಇರಲಿ.

ವೃಶ್ಚಿಕ ರಾಶಿ

ಮನಸ್ಸಿಗೆ ಏನೋ ಬೇಸರ. ಹತ್ತಿರದ ಬಂಧುಗಳಿಂದ ಮನಸ್ಸಿಗೆ ಕಿರಿಕಿರಿ. ಹಣದ ಹರಿವು ಉತ್ತಮವಾಗಿದ್ದರೂ ಖರ್ಚುಮಾಡಲಾರಿರಿ. ಹೊಸ ಹೊಸ ಸ್ನೇಹ ಸಂಬಂಧಗಳು ಹುಡುಕಿ ಬರುತ್ತದೆ. ಶತ್ರುಗಳು ನಿಮ್ಮಿಂದ ದೂರ ಇರುತ್ತಾರೆ. ವಿನಾಕಾರಣ ಭಯ ಆತಂಕ ಇರುತ್ತದೆ. ಓಂ ನಮೋ ನಾರಾಯಣಾಯ ಜಪ ಮಾಡಿ.

ಧನಸ್ಸು ರಾಶಿ

ನಿಮಗಿನ್ನೂ ಶುಭದಿನಗಳು ಸಂಪೂರ್ಣವಾಗಿ ಪ್ರಾರಂಭವಾಗಿಲ್ಲ. ತಾಳ್ಮೆ ಇರಲಿ. ದುಡುಕಿ ಯಾವ ನಿರ್ಧಾರವನ್ನೂ ಮಾಡಬೇಡಿ. ಅಪವಾದ ನಷ್ಟ ಅನುಭವಿಸಬೇಕಾಗುತ್ತದೆ. ಓಂ ನಮೋ ಭಗವತೇ ವಾಸುದೇವಾಯ ಮಂತ್ರವನ್ನು ಜಪಿಸಿ. ಹಣ ಬಂದರೂ ನೆಮ್ಮದಿ ಮರೀಚಿಕೆ.

ಮಕರ ರಾಶಿ

ನಿಮಗೆ ಈಗ ಕಾಯುವ ದಿನಗಳು. ದುರ್ಗಾಸ್ತುತಿ ಮಾಡಿ. ಮನಸ್ಸಿಗೆ ಆತಂಕ ಬೇಸರ ಇರುತ್ತದೆ. ಸಂಗಾತಿಯೊಡನೆ ವಾದ ಚರ್ಚೆ ಇದೆ. ವಿಕೋಪಕ್ಕೆ ಹೋಗದಂತೆ ನಿಭಾಯಿಸಿ. ನೀವು ಹೋಗಬೇಕು ಎಂದು ಕೊಂಡ ಜಾಗಕ್ಕೆ ಈ ದಿನ ಹೋಗಿಬರಲು ಅಡ್ಡಿಯಿದೆ. ಬೇಸರಿಸಬೇಡಿ. ನಿಮ್ಮ ಅಭಿವೃದ್ಧಿಗೆ ಪೂರಕವಾದ ಕರೆಗಳು ಬರಬಹುದು.

ಕುಂಭ ರಾಶಿ

ಧನಲಾಭ ಇದೆ. ಮಗಳಿಂದ ಅಥವಾ ಸೋದರಿಯಿಂದ ಸಹಾಯ ಇದೆ. ಬಡ್ತಿ, ವರ್ಗಾವಣೆ ಸಾಧ್ಯತೆ ಇದೆ. ನಿಮ್ಮ ಹಿಂದೆ ಪಿತೂರಿಕಾರಸ್ಥಾನ ಮಾಡುವವರಿಗೆ ಸರಿಯಾದ ಬುದ್ಧಿ ಕಲಿಸುತ್ತೀರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇದೆ. ಸರ್ಕಾರಿ ಕೆಲಸಗಾರರಿಗೆ ಅನುಕೂಲ ಇದೆ. ಉಡುಗೊರೆ ಸಿಗುವ ಯೋಗ ಇದೆ.

ಮೀನ ರಾಶಿ

ಮಗನಿಂದ ಸಹಾಯ. ವಿನಾಕಾರಣ ನಿಮ್ಮ ಮೇಲೆ ಆಪಾದನೆ ಬರುವ ಸಾಧ್ಯತೆ ಇದೆ. ಇದರಿಂದ ಮನಸ್ಸಿಗೆ ವ್ಯಥೆ ಆಗುತ್ತದೆ. ಬಂಧುಗಳ ಆಗಮನದಿಂದ ಮನಸ್ಸಿಗೆ ಹಿತ-ಸಂತೋಷ. ಪ್ರಿಯರಾದವರೊಡನೆ ವಾದ ವಾಗ್ವಾದಕ್ಕೆ ತಿರುಗುತ್ತದೆ. ಎಚ್ಚರಿಕೆ ವಹಿಸಿ.