ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2 (ಪೂರಕ ಪರೀಕ್ಷೆ) ಪಲಿತಾಂಶ ಇಂದು ಮಧ್ಯಾಹ್ನ 1 ಗಂಟೆಗೆ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣ karresults.nic.in ಲಿಂಕ್ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ. ಮಾತ್ರವಲ್ಲದೇ ಡಿಜಿಲಾಕರ್ ಮತ್ತು ಉಮಾಂಗ್ ಆಪ್ನಲ್ಲೂ ನಿಮ್ಮ ಫಲಿತಾಂಶ ನೋಡಬಹುದು ಎಂದು ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕಳೆದ ಏಪ್ರಿಲ್ 30ರಿಂದ ಆರಂಭವಾಗಿದ್ದು ದ್ವಿತೀಯ ಪಿಯುಸಿ ಪರೀಕ್ಷೆ-2 ಮೇ 13ರಂದು ಕೊನೆಗೊಂಡಿತ್ತು. ಒಟ್ಟು ಸುಮಾರು 1.72ಲಕ್ಷ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಎದುರಿಸಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಅವರಿಗೆ ಇಂದು ಶಿಕ್ಷಣ ಇಲಾಖೆ ಇಂದು ಫಲಿತಾಂಶ ಬಿಡುಗಡೆ ಮೂಲಕ ಸಿಹಿ ಸುದ್ದಿ ಕೊಟ್ಟಿದೆ.
ಶಿಕ್ಷಣ ಇಲಾಖೆ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಸಂಯೋಜನೆಯನ್ನು ವೆಬ್ಸೈಟ್ https://karresults.nic.in ಅಥವಾ https://dpue-exam.karnataka.gov.in/kseabdpue2025e1e2e3/WebForm1.aspx ಅಥವಾ ಕರ್ನಾಟಕ ಒನ್ ಅಪ್ಲಿಕೇಶನ್ ಮೂಲಕ 2026 II PUC ಪರೀಕ್ಷೆ -2 ರ ಫಲಿತಾಂಶವನ್ನು ವೀಕ್ಷಿಸುವಂತೆ ಕೋರಿದೆ.
ಪಿಯುಸಿ ಬಳಿಕ ಮುಂದೇನು ಎಂದು ಯೋಚಿಸಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕುತೂಹಲಕ್ಕೆ ತೆರೆ ಬಿದ್ದಿದೆ. ಮುಂದಿನ ವೃತ್ತಿಪರ ಪದವಿ ಕೋರ್ಸ್ಗಳು, ಪ್ರವೇಶ ಪರೀಕ್ಷೆ ತಯಾರಿಗೆ ಮಕ್ಕಳು ಸಜ್ಜಾಗಲಿದ್ದಾರೆ.

















