ಮನೆ ತಂತ್ರಜ್ಞಾನ ಆ. 3ರಂದು ಕೇವಲ 1 ರೂ. ಗೆ OnePlus 10T ಸ್ಮಾರ್ಟ್ ಫೋನ್ ನಿಮ್ಮದಾಗಿಸಿಕೊಳ್ಳುವ ಅವಕಾಶ

ಆ. 3ರಂದು ಕೇವಲ 1 ರೂ. ಗೆ OnePlus 10T ಸ್ಮಾರ್ಟ್ ಫೋನ್ ನಿಮ್ಮದಾಗಿಸಿಕೊಳ್ಳುವ ಅವಕಾಶ

0

ಫ್ಲಿಪ್ ಕಾರ್ಟ್ ಪ್ರಸ್ತುತ ಬಿಗ್ ಸೇವಿಂಗ್ಸ್ ಡೇಸ್ ಅನ್ನು ನಡೆಸುತ್ತಿದೆ. ಮಾರಾಟ ಜುಲೈ 23 ರಂದು ಪ್ರಾರಂಭವಾಗಿದ್ದು ಜುಲೈ 27ಕ್ಕೆ ಕೊನೆಗೊಳ್ಳುತ್ತದೆ. ಈ ಸೇಲ್ ನ ಭಾಗವಾಗಿ ವಿವಿಧ ರೀತಿಯ ಸ್ಮಾರ್ಟ್ ಫೋನ್ ಗಳ ಮೇಲೆ ಆಫರ್ ಗಳು ಲಭ್ಯವಿವೆ.

ಫ್ಲಿಪ್ ಕಾರ್ಟ್ ಸೇಲ್ ನ ಭಾಗವಾಗಿ ವಿವಿಧ ರೀತಿಯ ಸ್ಮಾರ್ಟ್ ಫೋನ್ ಗಳ ಮೇಲೆ ಆಫರ್ ಗಳು ಲಭ್ಯವಿವೆ. ತಡ ಮಾಡದೆ ಮೊಬೈಲ್ ಖರೀದಿಸಲು ಮುಂದಾದರೆ ನೀವು ನಿಜಕ್ಕೂ ಜಾಣ ಗ್ರಾಹಕರಾಗಲಿದ್ದೀರಿ.

OnePlus ತನ್ನ 10T ಸ್ಮಾರ್ಟ್ ಫೋನ್ ಅನ್ನು ಆಗಸ್ಟ್ 3 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಇದಕ್ಕಾಗಿ ಸಂಸ್ಥೆ ನ್ಯೂಯಾರ್ಕ್ ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಿದೆ. ಕರೋನಾ ಸಾಂಕ್ರಾಮಿಕ ರೋಗದ ನಂತರ OnePlus ಆಯೋಜಿಸಿದ ಮೊದಲ ಲೈವ್ ಕಾರ್ಯಕ್ರಮವೂ ಇದಾಗಿದೆ.

OnePlus ಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಅದರ ಭಾಗವಾಗಿ, ಕಂಪನಿಯು ತನ್ನ ಲಾಂಚಿಂಜ್ ಕಾರ್ಯಕ್ರಮವನ್ನು ಭಾರತದಲ್ಲಿಯೂ ನಡೆಸುವುದಾಗಿ ಘೋಷಿಸಿದೆ.

ಅದರಂತೆ ಆಗಸ್ಟ್ 3ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬಳಕೆದಾರರು ಕೇವಲ 1 ರೂಪಾಯಿ ಪಾವತಿಸಿ ಟಿಕೆಟ್ ಪಡೆಯಬಹುದು ಎಂದು ತಿಳಿಸಲಾಗಿದೆ. ಅದರಂತೆ.. OnePlus India ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳುವವರು ತಮ್ಮ ಮೇಲ್‌ನಲ್ಲಿ ಲಿಂಕ್ ಮತ್ತು ವಿಶೇಷ ಕರೆ ಸಂಖ್ಯೆಯನ್ನು ಸ್ವೀಕರಿಸುತ್ತಾರೆ.

ಆ ಲಿಂಕ್ ತೆರೆದು 1 ರೂಪಾಯಿ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡ ನಂತರ ಯೂನಿಕ್ ಕಾಲ್ ನಂಬರ್ ನಮೂದಿಸಿ ಹಾಜರಾತಿ ದೃಢಪಡಿಸಿಕೊಳ್ಳಿ. ಈವೆಂಟ್‌ಗೆ ಹಾಜರಾಗುವ ಬಳಕೆದಾರರಿಗೆ OnePlus 10T ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಸಹ ಅನುಮತಿಸಲಾಗುತ್ತದೆ.

ಇದಲ್ಲದೇ ಬಂದವರಿಗೆ ಬಹುಮಾನ ನೀಡಲಾಗುವುದು. ಬಂದವರ ಕೆಲ ಹೆಸರುಗಳನ್ನು ಲಾಟರಿ ವ್ಯವಸ್ಥೆಯಲ್ಲಿ ಆಯ್ಕೆ ಮಾಡಿ ಮೂವರಿಗೆ OnePlus 10T ಸ್ಮಾರ್ಟ್ ಫೋನ್ ನೀಡಲಾಗುವುದು ಎಂದು ಕಂಪನಿ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.