ಮನೆ ಆರೋಗ್ಯ ಸಕ್ಕರೆ ಕಾಯಿಲೆ ಇರುವವರು ಸೀತಾಫಲ ಹಣ್ಣು ಸೇವಿಸಬಹುದೇ?

ಸಕ್ಕರೆ ಕಾಯಿಲೆ ಇರುವವರು ಸೀತಾಫಲ ಹಣ್ಣು ಸೇವಿಸಬಹುದೇ?

0

ಸೀತಾಫಲ ಹಣ್ಣು ಆರೋಗ್ಯಕರ ಎಂದು ಹೇಳುತ್ತಾರೆ. ಆದರೆ ಈ ಹಣ್ಣಿನ ಸೇವನೆಯ ಬಗ್ಗೆ ಕೆಲವು ಗೊಂದಲಗಳಿವೆ.
ಸೀತಾಫಲ ಹಣ್ಣು ಯಾರು ಬೇಕಾದರೂ ತಿನ್ನಬಹುದು.
ಇದರಲ್ಲಿ ನೈಸರ್ಗಿಕವಾದ ಸಿಹಿ ಅಂಶ ಇರುತ್ತದೆ ಜೊತೆಗೆ ಇನ್ನಿತರ ಪೌಷ್ಟಿಕ ಸತ್ವಗಳು ಸಹ ಇರುತ್ತವೆ. ಇವೆಲ್ಲವೂ ದೇಹಕ್ಕೆ ತುಂಬಾ ಒಳ್ಳೆಯದು. ಆದರೆ ಸೀತಾಫಲ ಹಣ್ಣನ್ನು ಹೆಚ್ಚು ತಿನ್ನುವುದರಿಂದ ನೆಗಡಿ ಮತ್ತು ಶೀತ ಆಗಬಹುದು. ಇದರಲ್ಲಿ ಎಚ್ಚರಿಕೆ ವಹಿಸಿದರೆ ಸಾಕು.
ಆರೋಗ್ಯ ತಜ್ಞರು ಹೇಳುವ ಪ್ರಕಾರ ಜನರು ಒಂದು ವೇಳೆ ತಮಗೆ ಶುಗರ್ ಬಂದಿದೆ ಎಂದು ತಿಳಿದರೆ ಸಾಧ್ಯವಾದಷ್ಟು ಸಿಹಿ ಅಂಶವನ್ನು ಒಳಗೊಂಡಿರುವ ಆಹಾರ ಪದಾರ್ಥಗಳು ಮತ್ತು ಹಣ್ಣುಗಳಿಂದ ದೂರವುಳಿಯುತ್ತಾರೆ. ಸೀತಾಫಲ ಹಣ್ಣು ಸಹ ಅಷ್ಟೇ. ತನ್ನಲ್ಲಿ ಅಪಾರ ಪ್ರಮಾಣದ ಸಿಹಿ ಅಂಶವನ್ನು ಒಳಗೊಂಡಿರುತ್ತದೆ.
ಇದೇ ಕಾರಣಕ್ಕೆ ಮಧುಮೇಹ ಸಮಸ್ಯೆ ಹೊಂದಿರುವ ಜನರು ಸೀತಾಫಲ ಹಣ್ಣನ್ನು ತಿನ್ನಲು ಹಿಂದೇಟು ಹಾಕುತ್ತಾರೆ.
ಆದರೆ ಗ್ಲೈಸೆಮಿಕ್ ಸೂಚ್ಯಂಕ ಇದರಲ್ಲಿ ಕಡಿಮೆ ಇರುತ್ತದೆ ಎಂಬುದು ಆರೋಗ್ಯ ತಜ್ಞರ ಮಾತು. ಹೀಗಾಗಿ ಸಕ್ಕರೆ ಕಾಯಿಲೆ ಹೊಂದಿದವರು ಕಾಲಕಾಲಕ್ಕೆ ಬರುವಂತಹ ಇಂತಹ ಹಣ್ಣುಗಳನ್ನು ಸೇವನೆ ಮಾಡಬಹುದು. ಅದರಲ್ಲಿ ಯಾವುದೇ ತೊಂದರೆ ಇರುವುದಿಲ್ಲ.
ಹೃದ್ರೋಗಿಗಳು ತಿನ್ನಬಹುದಾ?
ಈಗಾಗಲೇ ರಕ್ತದೊತ್ತಡ ಹೆಚ್ಚಾಗಿರುವವರು ಮತ್ತು ಹೃದಯದ ಸಮಸ್ಯೆಗೆ ಗುರಿಯಾಗಿರುವವರು ಸೀತಾಫಲ ಹಣ್ಣನ್ನು ತಿನ್ನಬಾರದು ಎಂದು. ಆದರೆ ಸತ್ಯ ಬೇರೆಯೇ ಇದೆ. ಅದೇನೆಂದರೆ ಸೀತಾಫಲ ಹಣ್ಣಿನಲ್ಲಿ ಮ್ಯಾಂಗನೀಸ್ ಮತ್ತು ವಿಟಮಿನ್-ಸಿ ಅಂಶದ ಪ್ರಮಾಣ ಹೆಚ್ಚಾಗಿದೆ.
ಇದು ಹೃದಯದ ಮೇಲೆ ಉತ್ತಮ ಪ್ರಭಾವ ಬೀರಿ ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗುವಂತೆ ನೋಡಿಕೊಂಡು ವಿಶೇಷವಾಗಿ ಚರ್ಮದ ಭಾಗಕ್ಕೆ ಹೆಚ್ಚಿನ ರಕ್ತಸಂಚಾರ ಆಗುವಂತೆ ಮಾಡಿ ಚರ್ಮದ ಮೇಲೆ ಸುಕ್ಕುಗಳು ಮತ್ತು ಕಲೆಗಳುಬರದಂತೆ ನೋಡಿಕೊಳ್ಳುತ್ತದೆ.
ಪಿಸಿಓಡಿ ಸಮಸ್ಯೆಯಲ್ಲಿ ಇರುವವರು
ಯಾವ ಮಹಿಳೆಯರಿಗೆ ಪಿಸಿಒಡಿ ಸಮಸ್ಯೆ ಇರುತ್ತದೆ ಅಂತಹವರು ಸೀತಾಫಲ ಹಣ್ಣನ್ನು ಸೇವನೆ ಮಾಡಬಾರದು ಎಂದು ಹೇಳುತ್ತಾರೆ. ಆದರೆ ನಿಜ ಹೇಳಬೇಕು ಎಂದರೆ ಸೀತಾಫಲದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದೆ. ಇದು ಸಹಜವಾಗಿ ದೇಹದ ಸುಸ್ತು ಮತ್ತು ಆಯಾಸವನ್ನು ದೂರ ಮಾಡುತ್ತದೆ ಮತ್ತು ಪುರುಷರ ಪುರುಷತ್ವವನ್ನು ಹೆಚ್ಚಿಸುತ್ತದೆ.
ಇಷ್ಟೇ ಅಲ್ಲದೆ ಇನ್ನೂ ಕೆಲವು ಉಪಯೋಗಗಳನ್ನು ಸೀತಾಫಲ ಹಣ್ಣಿನಿಂದ ಜನರು ಪಡೆಯ ಬಹುದು. ಅದೇನೆಂದರೆ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗಿ ಹುಣ್ಣುಗಳು ಆಗಿದ್ದರೆ, ಅದು ಕೂಡ ಸೀತಾಫಲ ಹಣ್ಣಿನಿಂದ ವಾಸಿಯಾಗುತ್ತದೆ.
ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಇದು ಸಾಕಷ್ಟ ಪ್ರಯೋಜನಕಾರಿಯಾಗಿದೆ. ದೇಹಕ್ಕೆ ಕಬ್ಬಿಣದ ಅಂಶವನ್ನು ಕೊಡುವುದು ಮಾತ್ರವಲ್ಲದೆ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚು ಮಾಡುತ್ತದೆ. ಮಧುಮೇಹ ಸಮಸ್ಯೆಯಿರುವವರಿಗೆ ಮತ್ತು ಕ್ಯಾನ್ಸರ್ ಸಮಸ್ಯೆ ಇರುವ ಜನರಿಗೂ ಕೂಡ ಸೀತಾಫಲ ಹಣ್ಣನ್ನು ಸೇವಿಸಲು ಕೊಡಬಹುದು.
ಸೀತಾಫಲ ಹಣ್ಣಿನಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಬಿ6 ಮತ್ತು ಇನ್ನೂ ಇತರ ಹೊಟ್ಟೆ ಉಬ್ಬರ ಕಡಿಮೆ ಮಾಡುವಂತಹ ಅಂಶಗಳು ಇರಲಿವೆ. ಹೀಗಾಗಿ ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಹಣ್ಣು ಎಂದು ಸಾಬೀತಾಗಿದೆ.
ಸೀತಾಫಲ ಹಣ್ಣು ತನ್ನಲ್ಲಿ ಮ್ಯಾಕ್ರೋನ್ಯೂಟ್ರಿಯಂಟ್ ಅಂಶಗಳನ್ನು ಒಳಗೊಂಡಿದೆ. ಇದು ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಯಾರಿಗೆ ಈಗಾಗಲೇ ಚರ್ಮದ ಸಮಸ್ಯೆ ಇರುತ್ತದೆ ಅಂತಹವರು ಸೀತಾಫಲ ಹಣ್ಣನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬಹುದು.
ಇದರಲ್ಲಿ ವಿಟಮಿನ್ ಎ ಅಂಶ ಸಹ ಇರುವುದರಿಂದ ಅದು ಕಣ್ಣಿಗೆ ಒಳ್ಳೆಯದು ಮತ್ತು ವಿಶೇಷವಾಗಿ ಮೆದುಳಿನ ಕಾರ್ಯ ಚಟುವಟಿಕೆ ಹೆಚ್ಚಾಗಲು ನೆರವಾಗುತ್ತದೆ. ಸೀತಾಫಲ ಹಣ್ಣು ತನ್ನಲ್ಲಿ ನಾರಿನಂಶ ಹೆಚ್ಚಾಗಿ ಒಳಗೊಂಡಿದೆ.