ಮನೆ ರಾಜ್ಯ ಭಟ್ಕಳದಲ್ಲಿ ಗುಡ್ಡ ಕುಸಿದು ನಾಲ್ವರ ಸಾವು: ಮೃತದೇಹ ಹೊರತೆಗೆದ ಎನ್ ಡಿಆರ್ ಎಫ್ ಸಿಬ್ಬಂದಿ

ಭಟ್ಕಳದಲ್ಲಿ ಗುಡ್ಡ ಕುಸಿದು ನಾಲ್ವರ ಸಾವು: ಮೃತದೇಹ ಹೊರತೆಗೆದ ಎನ್ ಡಿಆರ್ ಎಫ್ ಸಿಬ್ಬಂದಿ

0

ಭಟ್ಕಳ (Bhatkal): ಉತ್ತರ ಕನ್ನಡದಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಮುಟ್ಟಳ್ಳಿಯ ಮನೆಯೊಂದರ ಮೇಲೆ ಗುಡ್ಡ ಕುಸಿದಿದ್ದು ಅವಶೇಷಗಳಡಿಯಲ್ಲಿ ಸಿಲುಕಿದ್ದ ನಾಲ್ವರ ಮೃತದೇಹಗಳನ್ನು ಎನ್ ಡಿಆರ್ ಎಫ್ ಸಿಬ್ಬಂದಿ ಹೊರ ತೆಗೆದಿದ್ದಾರೆ. 

ಲಕ್ಷ್ಮೀ ನಾರಾಯಣ ನಾಯ್ಕ್, ಅನಂತ ನಾಯ್ಕ್, ಪ್ರವೀಣ ನಾಯ್ಕ್ ಹಾಗೂ ಲಕ್ಷ್ಮೀ ನಾಯ್ಕ್ ಮೃತಪಟ್ಟವರು. ಮನೆ ಮೇಲೆ ದಿಢೀರ್ ಗುಡ್ಡ ಕುಸಿದಿದ್ದರಿಂದ ಮನೆಯಲ್ಲಿದ್ದವರು ಹೊರಗೆ ಬರಲು ಸಾಧ್ಯವಾಗಿರಲಿಲ್ಲ.

ಸುದ್ದಿ ತಿಳಿದ ಕೂಡಲೇ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಆದರೆ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಭಟ್ಕಳದಲ್ಲಿ ಭಾರೀ ಮಳೆಯಿಂದಾಗಿ ಎಲ್ಲಾ ಕಡೆ ನೀರು ತುಂಬಿ ಭಾರೀ ಅನಾಹುತ ಸಂಭವಿಸಿದೆ. ಶಿರಾಲಿ ಭಾಗದಲ್ಲಿ ಅನೇಕ ಮನೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಹಿಂದಿನ ಲೇಖನಸಕ್ಕರೆ ಕಾಯಿಲೆ ಇರುವವರು ಸೀತಾಫಲ ಹಣ್ಣು ಸೇವಿಸಬಹುದೇ?
ಮುಂದಿನ ಲೇಖನತಡವಾಗಲಿದೆ ಆ್ಯಕ್ಷನ್ ಪ್ರಿನ್ಸ್ ಅಭಿನಯದ ಮಾರ್ಟಿನ್ ಸಿನಿಮಾ ರಿಲೀಸ್