ಮನೆ ಆರೋಗ್ಯ ಈರುಳ್ಳಿ ಹೂವಿನಲ್ಲಿರುವ ಆರೋಗ್ಯ ಪ್ರಯೋಜನಗಳು

ಈರುಳ್ಳಿ ಹೂವಿನಲ್ಲಿರುವ ಆರೋಗ್ಯ ಪ್ರಯೋಜನಗಳು

0

ಈರುಳ್ಳಿ ಹೂವಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ನೀವು ತಿಳಿದುಕೊಳ್ಳಬಹುದು. ಮನುಷ್ಯನ ಆರೋಗ್ಯದಲ್ಲಿ ಈರುಳ್ಳಿ ಹೂವಿನ ವಿಶೇಷತೆ ಏನು ಎಂಬುದನ್ನು ಇಲ್ಲಿ ತಿಳಿಸಲಿದ್ದೇವೆ.

ಉಸಿರಾಟದ ಪ್ರಕ್ರಿಯೆ ಉತ್ತಮಗೊಳ್ಳುತ್ತದೆ

ಈರುಳ್ಳಿ ಹೂವಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ವೈರಲ್ ಗುಣಲಕ್ಷಣಗಳು ಸಾಕಷ್ಟಿವೆ. ಈ ಕಾರಣದಿಂದ ಈರುಳ್ಳಿ ಹೂವನ್ನು ಪ್ರಮುಖವಾಗಿ ವೈರಲ್ ಸೋಂಕುಗಳು, ಜ್ವರ, ನೆಗಡಿ, ಕೆಮ್ಮು, ಶೀತ ಇತ್ಯಾದಿಗಳ ನಿವಾರಣೆಗೆ ನೈಸರ್ಗಿಕ ರೂಪದ ಔಷಧಿಯಾಗಿ ಬಳಸಲಾಗುತ್ತದೆ. ಉಸಿರಾಟ ವ್ಯವಸ್ಥೆಯ ಉತ್ತಮ ಕಾರ್ಯ ನಿರ್ವಹಣೆಯಲ್ಲಿ ಈರುಳ್ಳಿ ಹೂವಿನ ಪಾತ್ರ ಬಹಳಷ್ಟಿದೆ. ಎದೆಯಲ್ಲಿ ಕಟ್ಟಿದ ಕಫವನ್ನು ಇದು ಸುಲಭವಾಗಿ ಹೊರಹಾಕುತ್ತದೆ ಎಂದು ಹೇಳುತ್ತಾರೆ.

ಕಣ್ಣಿನ ದೃಷ್ಟಿಗೆ ಒಳ್ಳೆಯದು

ಈರುಳ್ಳಿ ಹೂವಿನಲ್ಲಿ ಕ್ಯಾರೋಟಿನ್ ಅಂಶಗಳು ಇರುತ್ತವೆ. ಇವುಗಳು ವಿಶೇಷವಾಗಿ ಕಣ್ಣುಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಟಮಿನ್ ಎ ಅಂಶ ಹೆಚ್ಚಾಗಿರುವ ಇದರ ಮೂಲಕ ನೀವು ಆರೋಗ್ಯಕರವಾದ ಕಣ್ಣುಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಳ್ಳಬಹುದು. ವಿಶೇಷವಾಗಿ ನಿಮ್ಮ ಕಣ್ಣುಗಳ ಉರಿಯೂತವನ್ನು ನಿವಾರಣೆ ಮಾಡಿ ವಯಸ್ಸಾದ ಮೇಲೆ ಬರುವಂತಹ ಕಣ್ಣಿನ ಪೊರೆ ಸಮಸ್ಯೆಯನ್ನು ಈರುಳ್ಳಿ ಹೂವು ನಿವಾರಣೆ ಮಾಡುತ್ತದೆ. ಕಣ್ಣಿನ ದೃಷ್ಟಿ ಹೋಗುವ ಸಾಧ್ಯತೆ ಕೂಡ ಕಡಿಮೆಯಾಗುತ್ತದೆ.

ಮೂಳೆಗಳ ಸಾಂದ್ರತೆ ಹೆಚ್ಚಿಸುತ್ತದೆ

ಈರುಳ್ಳಿ ಹೂವಿನಲ್ಲಿ ಅಪಾರ ಪ್ರಮಾಣದ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಅಂಶ ಅಡಗಿದೆ. ಇದು ಮೂಳೆಗಳ ಕಾರ್ಯನಿರ್ವಹಣೆಯಲ್ಲಿ ಮನುಷ್ಯನ ದೇಹದಲ್ಲಿ ಸಹಾಯಕ್ಕೆ ಬರುತ್ತದೆ. ಪ್ರಮುಖವಾಗಿ ವಿಟಮಿನ್ ಸಿ ಅಂಶ ಕೊಲಾಜನ್ ಅಂಶವನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಮೂಳೆಗಳು ಗಟ್ಟಿಯಾಗುತ್ತವೆ ಮತ್ತು ವಿಟಮಿನ್ ಕೆ ಅಂಶ ಇಲ್ಲಿ ನೆರವಿಗೆ ಬಂದು ಮೂಳೆಗಳ ಸಾಂದ್ರತೆಯನ್ನು ಹೆಚ್ಚು ಮಾಡುತ್ತದೆ.

ಹೃದಯಕ್ಕೆ ಒಳ್ಳೆಯದು

ಈರುಳ್ಳಿ ಹೂವಿನಲ್ಲಿ ಕಂಡುಬರುವಂತಹ ಆಂಟಿಆಕ್ಸಿಡೆಂಟ್ ಅಂಶಗಳು ದೇಹದಲ್ಲಿ ಡಿಎನ್ಎ ಅಂಶಗಳು ಹಾನಿಯಾಗದಂತೆ ನೋಡಿಕೊಳ್ಳುತ್ತವೆ. ಜೊತೆಗೆ ಫ್ರೀ ರಾಡಿಕಲ್ ಅಂಶಗಳನ್ನು ಮತ್ತು ಅವುಗಳ ಪ್ರಭಾವಗಳನ್ನು ಕಡಿಮೆ ಮಾಡಿ ಆರೋಗ್ಯಕರವಾದ ಜೀವಕೋಶಗಳ ನಿರ್ಮಾಣದಲ್ಲಿ ನೆರವಾಗುತ್ತವೆ. ವಿಟಮನ್‌ ಸಿ ಅಂಶ ಹೆಚ್ಚಾಗುತ್ತಿರುವ ಈರುಳ್ಳಿ ಹೂವು ನಿಮ್ಮ ದೇಹಕ್ಕೆ ಕೆಟ್ಟ ಕೊಲೆಸ್ಟ್ರಾಲ್ ಅಂಶ ದಿಂದ ಮುಕ್ತಿ ನೀಡುತ್ತದೆ. ಕ್ರಮೇಣವಾಗಿ ಇದರಿಂದ ರಕ್ತದ ಒತ್ತಡ ನಿಯಂತ್ರಣವಾಗಿ ನಿಮ್ಮ ಹೃದಯ ಆರೋಗ್ಯಕರವಾಗಿ ಇರಲು ಪ್ರಾರಂಭವಾಗುತ್ತದೆ. ಈರುಳ್ಳಿ ಹೂವಿನಲ್ಲಿ ಸಹ ಸಲ್ಪರ್ ಅಂಶ ಇರುವು ದರಿಂದ ಹೃದಯಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳು ಇರುವುದಿಲ್ಲ.

ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ

ಈರುಳ್ಳಿ ಹೂವಿನಲ್ಲಿ ಶಕ್ತಿಯುತವಾದ ಸಲ್ಫರ್ ಅಂಶ ಇರುತ್ತದೆ. ಇದು ಕರುಳಿನ ಕ್ಯಾನ್ಸರ್ ಸಮಸ್ಯೆಯನ್ನು ತಡೆಗಟ್ಟುತ್ತದೆ ಎಂದು ಹೇಳುತ್ತಾರೆ. ಇದರ ಜೊತೆಗೆ ಈರುಳ್ಳಿ ಹೂವಿನಲ್ಲಿ ಇರುವಂತಹ ಫ್ಲೇವೋನಾಯ್ಡ್ ಅಂಶಗಳು ದೇಹದಲ್ಲಿ ಡಿಎನ್ಎ ಹಾನಿಯಾಗುವುದನ್ನು ತಪ್ಪಿಸುತ್ತದೆ ಜೊತೆಗೆ ಫ್ರೀ ರಾಡಿಕಲ್ ಅಂಶಗಳ ಪ್ರಭಾವವನ್ನು ತಡೆದು ದೇಹಕ್ಕೆ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ. ಕ್ಯಾನ್ಸರ್‌ ಸಮಸ್ಯೆ ಇರುವವರು ಕೂಡ ಈರುಳ್ಳಿ ಹೂವನ್ನು ಸೇವನೆ ಮಾಡುವುದರಿಂದ ಆರೋಗ್ಯ ದಲ್ಲಿ ಸಾಕಷ್ಟು ಒಳ್ಳೆಯ ಬೆಳವಣಿಗೆ ಕಾಣಬಹುದು.

ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ

ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಸಮಸ್ಯೆ ಹೊಂದಿದವರು ಈರುಳ್ಳಿ ಹೂವನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬಹುದು. ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ದೇಹಕ್ಕೆ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿರ್ವಹಣೆ ಮಾಡುತ್ತದೆ. ಆರೋಗ್ಯಕರವಾದ ತರಕಾರಿಗಳ ಗುಂಪಿಗೆ ನೀವು ಇದನ್ನು ಸೇರಿಸಬಹುದು.

ಹೊಟ್ಟೆಯ ತೊಂದರೆ ಪರಿಹಾರ

ಸಾಕಷ್ಟು ಜನರಿಗೆ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಹೊಟ್ಟೆಯಲ್ಲಿ ವಿಪರೀತ ತೊಂದರೆಗಳು ಎದುರಾ ಗುತ್ತವೆ. ಅದರಲ್ಲೂ ಕರುಳಿನ ಸಮಸ್ಯೆ ಹೆಚ್ಚು. ಕೆಲವರಿಗೆ ಇದರಿಂದ ಪ್ರತಿದಿನ ವಾಂತಿ ಹಾಗೂ ಭೇದಿ ಆಗುತ್ತಿರುತ್ತದೆ. ಹೊಟ್ಟೆ ಹಸಿವು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ನಾರಿನ ಅಂಶ ಹೆಚ್ಚಾಗಿರುವ ಯಾವುದಾದರೂ ತರಕಾರಿಯನ್ನು ಸೇವಿಸುವುದರಿಂದ ಪರಿಹಾರ ಸಿಗುತ್ತದೆ. ಇಲ್ಲಿ ವೈದ್ಯರು ಹೇಳುವ ಪ್ರಕಾರ ನಾವು ನಿಮಗೆ ಈರುಳ್ಳಿ ಹೂವನ್ನು ಸೇವನೆ ಮಾಡಿ ಎಂದು ಸಲಹೆ ಕೊಡುತ್ತೇವೆ.

ಸೋಂಕಿನ ವಿರುದ್ಧ ರಕ್ಷಣೆ

ಈರುಳ್ಳಿಯಲ್ಲಿ ಮೊದಲೇ ಹೇಳಿದಂತೆ ನಾವು ವಿಟಮಿನ್ ಕೆ ಅಂಶಗಳ ಜೊತೆಗೆ ಸಲ್ಫರ್ ಅಂಶ ಕೂಡ ಇರುತ್ತದೆ. ಇದು ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ನಿರ್ವಹಣೆ ಮಾಡುತ್ತದೆ. ದೇಹದಲ್ಲಿ ಉತ್ತಮವಾಗಿ ರಕ್ತಸಂಚಾರ ಉಂಟಾಗುವುದರ ಜೊತೆಗೆ ಮಾನಸಿಕ ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡಿ ದೇಹಕ್ಕೆ ವಿಟಮಿನ್ ಬಿ1 ಅಂಶವನ್ನು ಕೊಡುವಲ್ಲಿ ಇದು ಯಶಸ್ವಿ ಯಾಗುತ್ತದೆ. ವಿಟಮಿನ್-ಸಿ ಅಂಶ ಇಲ್ಲಿ ಒಂದು ಶಕ್ತಿಯುತವಾದ ಆಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ದೇಹದ ಜೀವಕೋಶಗಳು ಸಹ ಇದರಿಂದ ಆರೋಗ್ಯಕರವಾಗಿ ಉಳಿಯುತ್ತವೆ.