ಮನೆ ಮನರಂಜನೆ ಅಕ್ಟೋಬರ್‌ 21ಕ್ಕೆ ಕ್ರಾಂತಿ ಸಿನಿಮಾ ತೆರೆಗೆ?

ಅಕ್ಟೋಬರ್‌ 21ಕ್ಕೆ ಕ್ರಾಂತಿ ಸಿನಿಮಾ ತೆರೆಗೆ?

0
https://www.youtube.com/channel/UCmDoYGj_oDaxpT_t7Pa9iEQ

ಬೆಂಗಳೂರು (Bengaluru): ‘ರಾಬರ್ಟ್’ ಸಿನಿಮಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆತ್ತಿಕೊಂಡಿರುವ ಚಿತ್ರ ‘ಕ್ರಾಂತಿ’. ಇದು ದರ್ಶನ್‌ ಅವರ 55ನೇ ಸಿನಿಮಾ. ಈಗಾಗಲೇ ಸಿನಿಮಾದ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಕೂಡ ರಿಲೀಸ್ ಆಗಿದೆ. ಅಭಿಮಾನಿಗಳು ಕಾತರದಿಂದ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಅಭಿಮಾನಿಗಳ ಕಾತರಕ್ಕೆ ಶೀಘ್ರವೇ ತೆರೆಬೀಳಲಿದೆ. ಹೌದು, ಸಿನಿಮಾ ಅಕ್ಟೋಬರ್‌ 21ಕ್ಕೆ ರಿಲೀಸ್‌ ಆಗಲಿದೆ. ಆದರೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಸದ್ಯದಲ್ಲಿಯೇ ಚಿತ್ರತಂಡ ಈ ಬ್ಗಗೆ ಮಾಹಿತಿ ನೀಡಲಿದೆ.

ಇನ್ನು ಈ ಸಿನಿಮಾದ ರಿಲೀಸ್ ಬಗ್ಗೆ ಚಿತ್ರತಂಡ ಅಪ್ಡೇಟ್ ನೀಡಲೂ ಕೂಡ ದಿನಾಂಕ ನಿಗದಿ ಮಾಡಿಕೊಂಡಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ‘ಕ್ರಾಂತಿ’ ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡುವ ಯೋಜನೆಯಲ್ಲಿದೆ.

ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟ ಇದೆ. ಅವನತಿಯತ್ತ ಸಾಗುತ್ತಾ ಇರುವ ಸರ್ಕಾರಿ ಶಾಲೆಗಳನ್ನು ಉಳಿಸುವುದು ಹೇಗೆ ಮತ್ತು ಸರ್ಕಾರಿ ಶಾಲೆಗಳು ಅವನತಿ ಹೊಂದಿದರೆ ಏನೆಲ್ಲಾ ಆಗುತ್ತದೆ ಎನ್ನುವ ಬಗ್ಗೆ ‘ಕ್ರಾಂತಿ’ ಸಿನಿಮಾ ಹೇಳಲಿದೆ.

ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ನಟ ದರ್ಶನ್ ಪಾತ್ರ ಹೋರಾಡುತ್ತೆ. ಚಿತ್ರದಲ್ಲಿ ಎನ್‌ಆರ್‌ಐ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ.