ಮನೆ ದೇಶ ಹಬ್ಬದ ದಿನದಂದು ಚಿನ್ನದ ಬೆಲೆಯಲ್ಲಿ ಏರಿಕೆ

ಹಬ್ಬದ ದಿನದಂದು ಚಿನ್ನದ ಬೆಲೆಯಲ್ಲಿ ಏರಿಕೆ

0

ನವದೆಹಲಿ (New Delhi): ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದ ನಡುವೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಇದರಿಂದ ಹಬ್ಬದ ದಿನದಂದು ಚಿನ್ನ ಖರೀದಿಸಬೇಕೆಂದು ಕೊಂಡಿದ್ದವರಿಗೆ ಶಾಕ್ ಆಗಿದೆ.

ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ 5,144 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ 5188 ರೂ. ನಿಗದಿಯಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 47,550 ರೂ. ನಿಗದಿಯಾಗಿದ್ದು, ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 51,880 ರೂಪಾಯಿ ದಾಖಲಾಗಿದೆ.

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:

ಬೆಂಗಳೂರಿನಲ್ಲಿ 47,550 ರೂ. (22 ಕ್ಯಾರಟ್‌) – 51,880 ರೂ. (24 ಕ್ಯಾರಟ್‌)
ಚೆನ್ನೈನಲ್ಲಿ 48,250 ರೂ. (22 ಕ್ಯಾರಟ್‌) – 52,640 ರೂ. (24 ಕ್ಯಾರಟ್‌)
ನವದೆಹಲಿಯಲ್ಲಿ 47,650 ರೂ. (22 ಕ್ಯಾರಟ್‌) – 51,980 ರೂ. (24 ಕ್ಯಾರಟ್‌)
ಹೈದರಾಬಾದ್‌ ನಲ್ಲಿ 47,500 ರೂ. (22 ಕ್ಯಾರಟ್‌) – 51,820 ರೂ. (24 ಕ್ಯಾರಟ್‌)
ಕೋಲ್ಕತ್ತಾದಲ್ಲಿ 47,500 ರೂ. (22 ಕ್ಯಾರಟ್‌) – 51,820 ರೂ. (24 ಕ್ಯಾರಟ್‌)
ಮಂಗಳೂರಿನಲ್ಲಿ 47,550 ರೂ. (22 ಕ್ಯಾರಟ್‌) – 51,880 ರೂ. (24 ಕ್ಯಾರಟ್‌)
ಮುಂಬೈನಲ್ಲಿ 47,500 ರೂ. (22 ಕ್ಯಾರಟ್‌) – 51,820 ರೂ. (24 ಕ್ಯಾರಟ್‌)
ಮೈಸೂರಿನಲ್ಲಿ 47,550 ರೂ. (22 ಕ್ಯಾರಟ್‌) – 51,880 ರೂ. (24 ಕ್ಯಾರಟ್‌) ಇದೆ.

ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 57,700 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 63,200 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದೆ. ಚೆನ್ನೈ, ಕೇರಳ, ವಿಜಯವಾಡ, ಮಂಗಳೂರು, ಮೈಸೂರು, ವಿಶಾಖಪಟ್ಟಣಂ, ಕೊಯಂಬತ್ತೂರಿನಲ್ಲಿಯೂ 63,200 ರೂ. ನಿಗದಿಯಾಗಿದೆ. ಎಂದಿನಂತೆ ಬೆಳಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.