ಮನೆ ಅಪರಾಧ ಕೌಟುಂಬಿಕ ಕಲಹ: ಪತ್ನಿ, ಮಗನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ

ಕೌಟುಂಬಿಕ ಕಲಹ: ಪತ್ನಿ, ಮಗನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ

0

ಮಳವಳ್ಳಿ(Malavalli): ಕೌಟುಂಬಿಕ ಕಲಹದಿಂದ ಕೋಪಗೊಂಡ ಪತಿಯೇ ತನ್ನ ಪತ್ನಿ ಮತ್ತು ಮಗನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿರುವ ಘಟನೆ ತಾಲ್ಲೂಕಿನ ನೆಟ್ಕಲ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಿದ್ದೇಗೌಡ ಎಂಬುವವರೇ ಪತ್ನಿ ಮತ್ತು ಮಗನಿಗೆ ಹಚ್ಚಿದ ವ್ಯಕ್ತಿಯಾಗಿದ್ದಾರೆ.

ಬುಧವಾರ ರಾತ್ರಿ ಕ್ಷುಲಕ ಕಾರಣಕ್ಕೆ ಪತ್ನಿ ಮಹದೇವಮ್ಮ ಜೊತೆಗೆ ಜಗಳ ಆರಂಭವಾಗಿದ್ದು, ಜಗಳ ವಿಕೋಪಕ್ಕೆ ಹೋದಾಗ ಪತ್ನಿಯ ಮೈ ಮೇಲೆ ಸೀಮೆ ಎಣ್ಣೆ ಸುರಿಯುತ್ತಿದ್ದ ವೇಳೆ ತಡೆಯಲು ಬಂದ ಮಗ ಸಿದ್ದರಾಜು ಮೇಲೂ ಸಹ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದಾರೆ.

ಘಟನೆಯಲ್ಲಿ ಮಹದೇವಮ್ಮ ಹಾಗೂ ಸಿದ್ದರಾಜು ಅವರಿಗೆ ತೀವ್ರ ಗಾಯವಾಗಿದೆ ಎನ್ನಲಾಗಿದೆ.

ಗಲಾಟೆ ಜೋರಾದ ಹಿನ್ನಲೆಯಲ್ಲಿ ಅಕ್ಕಪಕ್ಕದ ಮನೆಯವರು ಗಾಯಾಳುಗಳನ್ನು ತಕ್ಷಣವೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.