ಮನೆ ರಾಜ್ಯ ಇಂದಿನ ಹವಾಮಾನ ವರದಿ

ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru): ರಾಜ್ಯದಲ್ಲಿ ಇಂದು ಸಾಧಾರಣ ಮಳೆಯಾಗಲಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಬೀದರ್, ಕಲಬುರಗಿ, ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಹಾಸನ, ಶಿವಮೊಗ್ಗ, ಜಿಲ್ಲೆಗಳ ಒಂದೆರಡು ಕಡೆಗಳಲ್ಲೂ ಉತ್ತಮ ಮಳೆ ಸುರಿಯಲಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ 26-19, ಮಂಗಳೂರಿನಲ್ಲಿ 28-24, ಶಿವಮೊಗ್ಗದಲ್ಲಿ 26-21, ಬೆಳಗಾವಿಯಲ್ಲಿ 23-21, ಮೈಸೂರಿನಲ್ಲಿ 27-20, ಮಂಡ್ಯದಲ್ಲಿ 28-21, ಕೊಡಗಿನಲ್ಲಿ 21-17, ರಾಮನಗರದಲ್ಲಿ 28-21, ಹಾಸನದಲ್ಲಿ 23-19, ಚಾಮರಾಜನಗರದಲ್ಲಿ 28-21, ಚಿಕ್ಕಬಳ್ಳಾಪುರದಲ್ಲಿ 28-20, ಕೋಲಾರದಲ್ಲಿ 30-21, ತುಮಕೂರಿನಲ್ಲಿ 28-20, ಉಡುಪಿಯಲ್ಲಿ 28-24, ಚಿಕ್ಕಮಗಳೂರಿನಲ್ಲಿ 22-18, ದಾವಣಗೆರೆಯಲ್ಲಿ 27-21, ಚಿತ್ರದುರ್ಗದಲ್ಲಿ 27-21, ಹಾವೇರಿಯಲ್ಲಿ 26-21, ಬಳ್ಳಾರಿಯಲ್ಲಿ 31-23, ಗದಗದಲ್ಲಿ 25-21, ಕೊಪ್ಪಳದಲ್ಲಿ 28-22, ರಾಯಚೂರಿನಲ್ಲಿ 32-23, ಯಾದಗಿರಿಯಲ್ಲಿ 29-22, ವಿಜಯಪುರದಲ್ಲಿ 28-22, ಬೀದರ್‌ ನಲ್ಲಿ 28-21, ಕಲಬುರಗಿಯಲ್ಲಿ 26-22, ಬಾಗಲಕೋಟೆಯಲ್ಲಿ 26-22 ಡಿಗ್ರಿ ಸೆಲ್ಸಿಯಸ್‌ ಇದೆ.