ಮನೆ ಆರೋಗ್ಯ ಕುಂಬಾರಕೊಪ್ಪಲಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಚಿತ ಔಷಧಿ ಪೂರೈಕೆ

ಕುಂಬಾರಕೊಪ್ಪಲಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಚಿತ ಔಷಧಿ ಪೂರೈಕೆ

0

ಮೈಸೂರು(Mysuru): ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್ ವತಿಯಿಂದ ನಾರಾಯಣ ಹೃದಯಾಲಯ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಕುಂಬಾರಕೊಪ್ಪಲಿನ ನಗರ  ಪ್ರಾಥಮಿಕ  ಆರೋಗ್ಯಕೇಂದ್ರಕ್ಕೆ  ಸಾಂಕ್ರಾಮಿಕವಲ್ಲದ ರೋಗಗಳಿಗಾಗಿ (NCB) ಬಳಸಲ್ಪಡುವ ಔಷದಗಳನ್ನು ಮುಂದಿನ 6 ತಿಂಗಳ ಬಳಕೆಗಾಗಿ   ಉಚಿತವಾಗಿ  ನೀಡಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ ಪ್ರಸಾದ್, ಕುಂಬಾರಕೊಪ್ಪಲಿನ ನಗರ  ಪ್ರಾಥಮಿಕ  ಆರೋಗ್ಯಕೇಂದ್ರದ ವೈದ್ಯಾಧಿಕಾರಿಗಳಾದ  ಡಾ ರಮ್ಯಾ ಅವರ ನೇತೃತ್ವದಲ್ಲಿ ಆರೋಗ್ಯಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ನಡೆಸಲಾದ ಅರೋಗ್ಯ ಸಮೀಕ್ಷೆಯಲ್ಲಿ 30 ವರ್ಷ ಹಾಗೂ ಮೇಲ್ಪಟ್ಟ  ವಯೋಮಾನದವರಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚಿನ ಜನರು ಸಂಕ್ರಾಮಿಕವಲ್ಲದ ಕಾಯಿಲೆಗಳಾದ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಹಾಗೂ ಇನ್ನಿತರೆ ಕಾಯಿಲೆಗಳಿರುವುದು ತಿಳಿದುಬಂದಿತು, ಈ ರೀತಿಯ ಕಾಯಿಲಿಗಳಿಂದ ಬಳಲುತ್ತಿರುವ ರೋಗಿಗಳಿಗೆ ಸರ್ಕಾರದ ವತಿಯಿಂದ ಪೂರೈಸಲ್ಪಡುತ್ತಿರುವ ಔಷಧಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರದ ಕಾರಣ ಆಶ್ರಯ ಹಸ್ತ ಟ್ರಸ್ಟ್ ಗೆ ಔಷದ ಪೂರೈಸುವಂತೆ ಮನವಿ ಮಾಡಲಾಯಿತು ಎಂದರು.

ನಮ್ಮ ಮನವಿಯನ್ನು ಪರಿಗಣಿಸಿದ ಅವರು ಮುಂದಿನ 6 ತಿಂಗಳಿಗೆ ಸುಮಾರು 1000 ರೋಗಿಗಳಿಗೆ ಬೇಕಾಗುವಷ್ಟು ಔಷಧಗಳನ್ನು ನಗರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯವರ ಮೂಲಕ ಒದಗಿಸಿದ್ದಾರೆ. ಇವರ ಈ ಸೇವೆ ಶ್ಲಾಘನೀಯ ಎಂದು ತಿಳಿಸಿದರು.

ಆಶ್ರಯ ಹಸ್ತ ಟ್ರಸ್ಟ್ನ ಪೋರ್ಟ್ಫೋಲಿಯೋ ಮ್ಯಾನೇಜರ್ ವಿಶ್ವನಾಥ ರೆಡ್ಡಿ ಮಾತನಾಡಿ, ಸಾಂಕ್ರಾಮಿಕವಲ್ಲದ ರೋಗವನ್ನು ನಿರ್ವಹಿಸಲು ಉತ್ತಮ ಮಾರ್ಗವೆಂದರೆ ಆರಂಭಿಕ ಪತ್ತೆ, ಸರಿಯದೆ ಚಿಕಿತ್ಸೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ ಕೆ.ಎಚ್. ಪ್ರಸಾದ್, ಪ್ರಾಥಮಿಕ  ಆರೋಗ್ಯಕೇಂದ್ರದ ವೈದ್ಯಾಧಿಕಾರಿ  ಡಾ. ರಮ್ಯಾ, ಆಶ್ರಯ ಹಸ್ತ ಟ್ರಸ್ಟ್ ನ ಸೀನಿಯರ್ ಪೋರ್ಟ್ಫೋಲಿಯೋ ಮ್ಯಾನೇಜರ್  ವಿಕ್ರಮ್ ಪಟೇಲ್, ವಿಶ್ವನಾಥ ರೆಡ್ಡಿ, ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮಾರುಕಟ್ಟೆ ಮುಖ್ಯಸ್ಥರಾದ ಕೆ. ವಿ. ಕಾಮತ್,  ನಗರ ಪಾಲಿಕ ಸದಸ್ಯರಾದ ಪೈಲ್ವಾನ್ ಶ್ರೀನಿವಾಸ್ ಮತ್ತು ಉಷಾ ಕುಮಾರ್ ಹಾಜರಿದ್ದರು.